Advertisement

ಎಚ್ ಪಿ ಯಿಂದ HP Pavilion Aero ಲ್ಯಾಪ್ ಟಾಪ್ ಗಳ ಬಿಡುಗಡೆ

03:05 PM Aug 06, 2021 | Team Udayavani |

ಬೆಂಗಳೂರು: ಎಚ್ ಪಿ ಕಂಪೆನಿಯು ತನ್ನ ಪ್ರಮುಖ ಪೆವಿಲಿಯನ್ ನೋಟ್‌ಬುಕ್ ಸರಣಿ HP Pavilion Aero 13, 1 ಕಿ.ಗ್ರಾಂ.ಗಿಂತ ಕಡಿಮೆ ತೂಕದ, ಹಗುರವಾದ AMD ಆಧಾರಿತ ಗ್ರಾಹಕ ನೋಟ್‌ಬುಕ್ ಅನ್ನು ಬಿಡುಗಡೆ ಮಾಡಿದೆ.

Advertisement

ಸುಸ್ಥಿರ, ಮರುಬಳಕೆಯ ವಸ್ತುಗಳಿಂದ ಮಾಡಲಾಗಿರುವ PC ಗಳು AMD AMD Ryzen

5&7 5800U Mobile Processor ಹಾಗೂ AMD Radeon Graphics ಒಳಗೊಂಡಿವೆ.

ಕಳೆದ ಕೆಲವು ವರ್ಷಗಳಲ್ಲಿ Pavilion notebook portfolio ವನ್ನು ಉದ್ಯಮದ ಪ್ರಮುಖ ಆವಿಷ್ಕಾರಗಳು ಮತ್ತು ಗ್ರಾಹಕರ ಉತ್ಕೃಷ್ಟ ಅನುಭವಗಳೊಂದಿಗೆ ಅಪ್‌ಗ್ರೇಡ್ ಮಾಡಲಾಗಿದ್ದು, ಇದು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಬಳಕೆದಾರರಿಗೆ ಅನುಕೂಲಕರ ಸೌಲಭ್ಯಗಳನ್ನು ಒದಗಿಸುತ್ತದೆ.

ಇದನ್ನೂ ಓದಿ:ಆಗಸ್ಟ್ 18ಕ್ಕೆ ಹೋಂಡಾ ಅಮೇಜ್‌ ಫೇಸ್‌ಲಿಫ್ಟ್

ಮನೆಯಿಂದ ಕಲಿಯುವುದಕ್ಕೆ ಅಥವಾ ಕೆಲಸ ಮಾಡುವುದಕ್ಕೆ ಹೊಂದಿಕೊಳ್ಳುವ ಬ್ಯಾಟರಿ ಆಪ್ಟಿಮೈಜರ್ ಮತ್ತು ಆಧುನಿಕ ಸ್ಟ್ಯಾಂಡ್‌ಬೈ ನಂತಹ ಉತ್ಕೃಷ್ಟ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Advertisement

ಈ ಸರಣಿಗೆ ನೂತನ ಸೇರ್ಪಡೆಯಾಗಿ Pavilion Aero 90% ಸ್ಕ್ರೀನ್-ಟು-ಬಾಡಿ-ಅನುಪಾತವನ್ನು ಒಳಗೊಂಡಿರುವ ಮೊದಲ ಪೆವಿಲಿಯನ್ ನೋಟ್‌ಬುಕ್ ಆಗಿದೆ.

ಸಂಪೂರ್ಣ ಮೆಗ್ನೀಸಿಯಮ್ ಅಲ್ಯೂಮಿನಿಯಂ ಚಾಸಿಸ್ ಮತ್ತು 4-ಬದಿಯ ತೆಳುವಾದ ಬೀಝೆಲ್ ಅಂಚನ್ನು ಹೊಂದಿದೆ.  (ಪೇಲ್ ರೋಸ್ ಗೋಲ್ಡ್, ಸೆರಾಮಿಕ್ ವೈಟ್ ಮತ್ತು ನ್ಯಾಚುರಲ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.

HP Pavilion Aero 13 ಬೆಲೆ ಮತ್ತು ಲಭ್ಯತೆ

ಹೊಸ HP Pavilion Aero 13 ಸರಣಿಯು ಎಲ್ಲ HP World ಸ್ಟೋರ್‌ಗಳಲ್ಲಿ ಮತ್ತು ಆನ್‌ಲೈನ್‌ store.hp.com/in ನಲ್ಲಿ ಲಭ್ಯವಿದ್ದು, ಬೆಲೆ ಈ ರೀತಿ ಇದೆ:

. HP Pavilion Aero Laptop 13-BE0200AU ಬಿಲ್ಟ್ ಇನ್ ಅಲೆಕ್ಸಾ, 13.3 ಇಂಚಿನ ಸ್ಕ್ರೀನ್, ಆರಂಭಿಕ ಬೆಲೆ ರೂ. 79,999; ಪ್ರೊಸೆಸರ್- AMD Ryzen

5 5600U; ಬಣ್ಣ- ಸೆರಾಮಿಕ್ ವೈಟ್

. HP Pavilion Aero Laptop 13- BE0030AU ಬಿಲ್ಟ್ ಇನ್ ಅಲೆಕ್ಸಾ, 13.3″ ಪರದೆ. ಆರಂಭಿಕ ಬೆಲೆ ರೂ. 79,999; ಪ್ರೊಸೆಸರ್- AMD Ryzen

5 5600U; ಬಣ್ಣ- ನ್ಯಾಚುರಲ್ ಸಿಲ್ವರ್

. HP Pavilion Aero Laptop 13- BE0190AU ಬಿಲ್ಟ್ ಇನ್ ಅಲೆಕ್ಸಾ, 13.3″ ಸ್ಕ್ರೀನ್ ಹಾಗೂ ಫಿಂಗರ್ ಪ್ರಿಂಟ್ ರೀಡರ್ ಜತೆಗೆ ಲಭ್ಯ, ಆರಂಭಿಕ ಬೆಲೆ ರೂ. 79,999; ಪ್ರೊಸೆಸರ್- AMD Ryzen

5 5600U; ಬಣ್ಣ- ಪೇಲ್ ರೋಸ್ ಗೋಲ್ಡ್

. HP Pavilion Aero Laptop 13- BE0186AU ಬಿಲ್ಟ್ ಇನ್ ಅಲೆಕ್ಸಾ, 13.3″ ಸ್ಕ್ರೀನ್ ಗಾತ್ರ ಹಾಗೂ ಫಿಂಗರ್ ಪ್ರಿಂಟ್ ರೀಡರ್ ಜತೆಗೆ ಲಭ್ಯ, ಆರಂಭಿಕ ಬೆಲೆ ರೂ. 94,999; ಪ್ರೋಸೆಸರ್- AMD Ryzen

7 5800U: ಬಣ್ಣ- ಪೇಲ್ ರೋಸ್ ಗೋಲ್ಡ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next