Advertisement
ಹ್ಯೂಸ್ಟನ್: ಇಲ್ಲಿನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆಯಲ್ಲಿರುವ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗಿಯಾಗುವುದು ಗೊತ್ತೇ ಇದೆ. ಹೀಗೆ ಭಾಗಿಯಾದ ಟ್ರಂಪ್ ಒಟ್ಟು 30 ನಿಮಿಷ ಭಾಷಣ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರ ಭಾಷಣಕ್ಕೂ ಮುನ್ನ ಟ್ರಂಪ್ ಮಾತನಾಡಲಿದ್ದು ಬಳಿಕ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಬಳಿಕ ಎರಡೂ ರಾಷ್ಟ್ರಗಳ ಪ್ರಮುಖರ ಉಪಸ್ಥಿತಿಯಲ್ಲಿ ಮಹತ್ವದ ಒಪ್ಪಂದ ಘೋಷಣೆಯಾಗುವ ಸಾಧ್ಯತೆ ಇದೆ.
Related Articles
Advertisement
ಸಂಖ್ಯಾವಾರು ವಿವರ ಹೀಗಿದೆ ನೋಡಿ :
– 19 ಲಕ್ಷ ಚ.ಅಡಿ ವಿಸ್ತಾರದ ಸ್ಟೇಡಿಯಂ
– 71995 ಮಂದಿ ಕೂರಬಹುದು
– 186 ಗಣ್ಯರಿಗಾಗಿ ಸ್ಯೂಟ್‌ಗಳು
– 14549 ಚ.ಅ. ಸ್ಕ್ರೀನ್ಸ್ (ಡಿಜಿಟಲ್ ಡಿಸ್ಲೆ$³à)
– 2 ಛಾವಣಿ ಮುಚ್ಚುವ ತೆರೆಯುವ ವ್ಯವಸ್ಥೆಯಿರುವ ಸ್ಟೇಡಿಯಂ
– 27 ಗುಂಪುಗಳಿಂದ ಪ್ರದರ್ಶನ
– ಒಟ್ಟು 400 ಮಂದಿ ಕಲಾವಿದರು
– 90 ನಿಮಿಷಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ
– 1 ಸಾವಿರ ಗುಜರಾತಿಗಳಿಂದ ದಾಂಡಿಯಾ ನೃತ್ಯದ ಮೂಲಕ ಪ್ರಧಾನಿ ಮೋದಿಗೆ ಸ್ವಾಗತ
– 100ಕ್ಕೂ ಹೆಚ್ಚು ಬಸ್‌ಗಳ ಆಯೋಜನೆ