Advertisement

ಲಾಕ್‌ಡೌನ್‌ ಇದ್ದರೂ ಕೋವಿಡ್ ಏಕೆ ಹರಡುತ್ತಿದೆ?

03:11 PM May 02, 2020 | sudhir |

ವರ್ಜೀನಿಯಾ: ಇದು ಬಹುತೇಕ ಅಮೆರಿಕನ್ನರನ್ನು ಕಾಡುತ್ತಿರುವ ಪ್ರಶ್ನೆ. ಲಾಕ್‌ಡೌನ್‌, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಜೇಶನ್‌ ಹಾಗೂ ಇತರ ಹಲವು ಉಪಕ್ರಮಗಳನ್ನು ಕೈಗೊಂಡಿದ್ದರೂ ಕೋವಿಡ್  ಹಬ್ಬುವುದು ನಿಂತಿಲ್ಲ. ಆರ್ಥಿಕತೆ ಕುಸಿಯುತ್ತಿರುವುದನ್ನು ತಡೆಯುವ ಪ್ರಯತ್ನವೂ ಯಶಸ್ವಿಯಾಗುತ್ತಿಲ್ಲ. ಮೇರಿಲ್ಯಾಂಡ್‌ ಹಾಗೂ ವರ್ಜೀನಿಯಾದಲ್ಲಿ ಗುರುವಾರ ಒಂದೇ ದಿನ ಸುಮಾರು 2,000 ಜನರು ಸೋಂಕುಪೀಡಿತರಾಗಿದ್ದಾರೆ. 111 ಜನರು ಪ್ರಾಣ ತೆತ್ತಿದ್ದಾರೆ.

Advertisement

ನರ್ಸಿಂಗ್‌ ಹೋಮ್‌, ಜೈಲು ಹಾಗೂ ಕಿರಾಣಿ ಅಂಗಡಿ, ಕಟ್ಟಡ ನಿರ್ಮಾಣ, ಔಷಧಾಲಯ ಹಾಗೂ ಸರಕು ಸಾಗಾಟದಂತಹ ಆವಶ್ಯಕ ಸೇವೆಗಳ ವಲಯಕ್ಕೆ ಸೇರಿದ ಇತರ ಸಾಂಸ್ಥಿಕ ಚಟುವಟಿಕೆಯಿಂದಲೇ ವೈರಸ್‌ ಹೆಚ್ಚು ಪ್ರಮಾಣದಲ್ಲಿ ಹಬ್ಬುತ್ತಿದೆ.

ಮಾರ್ಚ್‌ ಮಧ್ಯವಾರದಲ್ಲೇ ಹಲವು ಉಪಕ್ರಮಗಳನ್ನು ಕೈಗೊಂಡಿದ್ದರಿಂದ ವೈರಸ್‌ ಹರಡುವ ಪ್ರಮಾಣ ಕ್ಷೀಣಿಸಿದೆಯಾದರೂ ಜನ ರೋಗಪೀಡಿತರಾಗುವುದು ತಪ್ಪುತ್ತಿಲ್ಲ ಎಂಬುದೇ ಜನರನ್ನು ಕಾಡುತ್ತಿರುವ ಪ್ರಶ್ನೆ.

ಹೊಸ ಪ್ರಕರಣಗಳ ಸಂಖ್ಯೆ ಕ್ಷೀಣಿಸುವ ತನಕ ಲಾಕ್‌ಡೌನ್‌ ತೆರವು ಮಾಡುವುದಿಲ್ಲ ಹಾಗೂ ವಿನಾಯಿತಿಗಳನ್ನೂ ನೀಡುವುದಿಲ್ಲ ಎಂದು ವರ್ಜೀನಿಯಾದ ಆಡಳಿತ ಹೇಳಿದೆ. ಶಾಲೆಗಳು, ಉದ್ಯಮಗಳು ತೆರೆದುಕೊಂಡರೆ ವೈರಸ್‌ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ, ಇನ್ನೂ ಹಲವು ತಿಂಗಳ ಕಾಲ ಜನರು ಸಾಮಾಜಿಕ ಅಂತರ ಕಾಪಾಡುವ ಜತೆಗೆ ಮಾಸ್ಕ್ ಗಳನ್ನು ಧರಿಸಿಕೊಂಡೇ ಓಡಾಡಬೇಕು ಎಂದೂ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next