Advertisement

ಸೌದಿ ದೊರೆಯ ಟೂರಿಗೆ 640 ಕೋಟಿ ಖರ್ಚು!

07:20 AM Aug 24, 2017 | Team Udayavani |

ಮೊರಕ್ಕೋ: ಪ್ರವಾಸ ಅಬ್ಬಬ್ಟಾ ಅಂದರೆ ಸಾವಿರಾರು ಖರ್ಚು ಮಾಡಬಹುದು. ಅದೇನ್‌ ಮಹಾ, ಎಂದುಕೊಂಡರೂ ಕೆಲವರು ಲಕ್ಷ ರೂ.ಗಳನ್ನು ಖರ್ಚು ಮಾಡಬಹುದು. ಆದರೆ ಸೌದಿ ಅರೇಬಿಯಾದ ದೊರೆ ಸಲ್ಮಾನ್‌ ಅವರು ಹೋಗಲಿರುವ ಪ್ರವಾಸ ಅಂತಿಂಥದ್ದಲ್ಲ. ಇದರ ಖರ್ಚು ಬರೋಬ್ಬರಿ 640 ಕೋಟಿ ರೂ.! ಎಂದು ನಿರೀಕ್ಷಿಸಲಾಗಿದೆ.

Advertisement

ಮೊರಕ್ಕೋದ ಟಾಂಗಿಯಿರ್‌ಗೆ ಒಂದು ತಿಂಗಳ ಪ್ರವಾಸಕ್ಕೆ ದೊರೆ ಸಲ್ಮಾನ್‌ ಅವರು ಸಿದ್ಧವಾಗಿದ್ದು, ಜೊತೆಗೆ 1 ಸಾವಿರ ಮಂದಿ, 200 ಕಾರುಗಳನ್ನೂ ತೆಗೆದುಕೊಂಡು ಹೋಗಲಿದ್ದಾರೆ. ಪ್ರವಾಸಕ್ಕಾಗಿ ಹಲವಾರು ಐಷಾರಾಮಿ ಹೋಟೆಲ್‌ಗ‌ಳನ್ನು ಅವರು ಬುಕ್‌ ಮಾಡಿದ್ದಾರೆ. ಇನ್ನು ಸೌದಿ ದೊರೆ 74 ಎಕರೆಯ ಸ್ಥಳದಲ್ಲಿರುವ ಬೇಸಿಗೆ ಅರಮನೆಯನ್ನು ತಮ್ಮ ವಾಸ್ತವ್ಯಕ್ಕೆ ಬುಕ್‌ ಮಾಡಿದ್ದಾರೆ. ಸೌದಿ ದೊರೆ ಆಗಮನದ ಹಿನ್ನೆಲೆಯಲ್ಲಿ ವರ್ಷದ ಹಿಂದೆಯೇ ಅರಮನೆಗೆ ಕಾಯಕಲ್ಪ, ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆಯಂತೆ. ಸೌದಿ ದೊರೆಯ ಈ ಪ್ರವಾಸದಿಂದಾಗಿ ಮೊರಕ್ಕೋ ಪ್ರವಾಸೋದ್ಯಮದಿಂದ ಗಳಿಸುವ ಆದಾಯದಲ್ಲಿ ಶೇ.1.5ರಷ್ಟು ಪಾಲು ಹೊಂದಿರಲಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next