ಎಷ್ಟು ಕಿಲೋಮೀಟರ್ ವೇಗ, ಹಾಗೂ ಎಷ್ಟು ಕಿ.ಮೀ. ದ್ವಿಚಕ್ರವಾಹನ ಓಡಿದೆ ಎಂಬುದನ್ನು ಲೆಕ್ಕ ಹಾಕೋದು ಸ್ಪೀಡೋ ಮೀಟರ್. ಈಗಿನ ಸಂದರ್ಭ ದ್ವಿಚಕ್ರ ವಾಹನಗಳಲ್ಲಿ ಅನಾಲಾಗ್ ಮತ್ತು ಡಿಜಿಟಲ್ ಮೀಟರ್ ಎಂಬ ಎರಡು ರೀತಿಯ ಸ್ಪೀಡೋ ಮೀಟರ್‌ಗಳು ಬರುತ್ತವೆ. ಅನಾಲಾಗ್ ಸ್ಪೀಡೋ ಮೀಟರ್ ರಿಪೇರಿಗೆ ಸುಲಭ. ಯಾವುದೇ ಭಾಗ ಕೆಟ್ಟಿದ್ದರೂ ರಿಪೇರಿ ಸಾಧ್ಯವಿದೆ. ಆದರೆ ಡಿಜಿಟಲ್‌ನಲ್ಲಿ ಒಂದಷ್ಟು ಭಾಗಗಳನ್ನು ರಿಪೇರಿ ಮಾಡಬಹುದು ಬಿಟ್ಟರೆ, ಹೆಚ್ಚು ಹಾಳಾಗಿದ್ದರೆ ಬದಲಾವಣೆ ಮಾಡಬೇಕಾಗತ್ತದೆ. ಸ್ಪೀಡೋ ಮೀಟರ್ ಹಾಳಾಗಿದ್ದರೆ ಹೇಗೆ ರಿಪೇರಿ ಮಾಡೋದು ಎಂಬುದನ್ನು ನೋಡೋಣ.
ಮೇನ್ ಸ್ಟಾಂಡ್‌ಗೆ ಹಾಕಿ
ದ್ವಿಚಕ್ರ ವಾಹನವನ್ನು ಮೇನ್ ಸ್ಟಾಂಡ್ ಗೆ ಹಾಕುವುದರಿಂದ ಮುಂದಿನ ವ್ಹೀಲ್‌ನ್ನು ಬೇಕಾದಂತೆ ಇಡಬಹುದು. ದ್ವಿಚಕ್ರವಾಹನದ ಮುಂದಿನ ವ್ಹೀಲ್‌ನ ಹಬ್‌ಗ ಸ್ಪೀಡೋ ಮೀಟರ್‌ನ ಕೇಬಲ್ ಸಂಪರ್ಕವಿರುವ ದುರಿಂದ ರೀಡಿಂಗ್‌ಗೆ ನೆರವು ಆಗುತ್ತದೆ.
ಕೇಬಲ್ ಪರೀಕ್ಷಿಸಿ
ಕೇಬಲ್‌ನ ತುದಿಯಲ್ಲಿರುವ ಪಿನ್‌ನ ತೆಗೆದು ಕೇಬಲ್ ಎಳೆಯಿರಿ. ಕೇಬಲ್‌ನ ತುದಿಯಲ್ಲಿ ಈ ಲೋಹ ಚೌಕಾಕಾರ ಹೋಗಿ ವೃತ್ತಾಕಾರವಾಗಿದ್ದರೆ ಅಂದರೆ ಸವೆದಿದ್ದರೆ, ಚಕ್ರ ತಿರುಗಿದಂತೆ ಮೀಟರ್ ತಿರುಗುವುದಿಲ್ಲ. ಇಂತಹ ಸಂದರ್ಭದಲ್ಲಿ ಕೇಬಲ್ ಬದಲಾವಣೆ ಅನಿವಾರ್ಯ. ಹೊಸ ಕೇಬಲ್‌ನ ಥ್ರೆಡ್ ಭಾಗವನ್ನು ಮೀಟರ್ ಹಿಂದುಗಡೆಗೂ, ಮುಂಭಾಗವನ್ನು ವ್ಹೀಲ್ ಹಬ್ ಜಾಗಕ್ಕೂ ಕೂಡಿಸಿದರೆ ಕೆಲಸ ಮುಗೀತು.
ಕೇಬಲ್ ಸಡಿಲವಾಗುವಿಕೆ
ಕೆಲವೊಮ್ಮೆ ಮೀಟರ್ ಹಿಂಭಾಗ ಕೇಬಲ್ ಸಂಪರ್ಕದ ಜಾಗ ಸಡಿಲವಾಗಿರುವಾಗ ಮೀಟರ್ ತಿರುಗಿಸಲು ಕೇಬಲ್‌ಗೆ ಸಾಧ್ಯವಾಗಿರುವುದಿಲ್ಲ. ಕೇಬಲ್ ಅನ್ನು ತೆಗೆದು ಪುನಃ ಕೂರಿಸಿ.
ಗ್ರೀಸ್ ಬಳಕೆ
ಎಲ್ಲವೂ ಸರಿಯಾಗಿರುವಾಗ ಮೀಟರ್ ಮಾತ್ರ ಚಾಲೂ ಆಗಲ್ಲ . ಈ ಸಂದರ್ಭ ವ್ಹೀಲ್ ಹಬ್ ಭಾಗದಲ್ಲಿ ಕೇಬಲ್‌ನ ತುದಿ ಶುಚಿಗೊಳಿಸಿ ತುಕ್ಕು ನಿರೋಧಕ ಸ್ಪ್ರೇನ್ನೂ ಶುಚಿಗೊಳಿಸಿ, ಗ್ರೀಸ್ ಹಚ್ಚಿದರೆ ಕೇಬಲ್
ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.
ಡಯಲ್ ಸಮಸ್ಯೆ
ಮೀಟರ್ ಡಯಲ್‌ನ ಮುಳ್ಳಿನ ತಳಭಾಗದಲ್ಲೂ ನೀರು ಹೋಗಿ ತುಕ್ಕು ಹಿಡಿಯುತ್ತದೆ. ಈ ವೇಳೆ ಮೀಟರ್ ಓಪನ್ ಮಾಡಿ ಡಯಲ್ ಮುಳ್ಳನ್ನು ಶುಚಿಗೊಳಿಸಿಬೇಕು. ಹಲ್ಲುಚಕ್ರ ಸರಿ ಇಲ್ಲದಿದ್ದರೆ, ಮೀಟರ್ ಸರಿಯಾಗಿ
ಕಾರ್ಯನಿರ್ವಹಿಸುವುದಿಲ್ಲ ತುಂಡಾಗಿದ್ದರೂ ಕಾರ್ಯನಿರ್ವಹಿಸದು.
ಮೀಟರ್ ಸಮಸ್ಯೆ
ಕೆಲವೊಮ್ಮೆ ಮೀಟರ್ ಕೈಕೊಡುವುದಿದೆ. ಒಳಭಾಗ ಹಲ್ಲುಚಕ್ರ ತುಂಡಾಗಿರುವುದು ಮತ್ತು ಕೇಬಲ್ ಮತ್ತು ಮೀಟರ್‌ಗೆ ಇರುವ ಸಂಪರ್ಕ ಹಾಳಾಗಿರುವುದರಿಂದಲೂ ಮೀಟರ್ ಕಾರ್ಯವೆಸಗದೇ ಇರಬಹುದು. ಇಂತಹ ಸಂದರ್ಭ ಮೀಟರ್ ಸಂಪೂರ್ಣ ತೆಗೆದು ಅದನ್ನು ತೆರೆದು ಹೋದ ಬಿಡಿಭಾಗಗಳನ್ನು ಹಾಕಬೇಕಾಗುತ್ತದೆ. ಸಾಮಾನ್ಯ ಮೀಟರ್ ರಿಪೇರಿ ಅಂಗಡಿಯವರು ಇದನ್ನು ಮಾಡಿಕೊಡುತ್ತಾರೆ. ಮೆಕ್ಯಾನಿಕ್‌ಗಳೂ ಇದನ್ನು ಮಾಡಬಹುದು.
ಈಶ