Advertisement

ಟ್ವಿಟ್ಟರ್‌ ನಲ್ಲಿ ಹಳೇ ಟ್ವೀಟ್‌ ಗಳನ್ನು ಹುಡುಕುವುದು ಹೇಗೆ?: ಇಲ್ಲಿದೆ ಸುಲಭ ಮಾರ್ಗ

05:19 PM Mar 11, 2022 | Team Udayavani |

ಇತ್ತೀಚೆಗೆ ಯಾರಾದರೂ ಉನ್ನತ ಹುದ್ದೆಗೆ ಏರಿದರೆ, ಸೆಲೆಬ್ರಿಟಿ ಎನಿಸಿಕೊಂಡರೆ ಅವರು ಕೇವಲ ಜನಪ್ರಿಯತೆ ಗಳಿಸುವುದಲ್ಲ, ಬದಲಿಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ಗಳ ಮೂಲಕವೂ ಸುದ್ದಿಯಾಗುತ್ತಾರೆ. ಎಷ್ಟೋ ವರ್ಷಗಳ ಹಿಂದೆ ಹಾಕಿದ ಪೋಸ್ಟ್, ಟ್ವೀಟ್ಗಳನ್ನು ಹಲವರು ಕೆದುಕಲು ಆರಂಭಿಸಿ, ಅದನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡುತ್ತಾರೆ. ಸಹಸ್ರಾರು ಟ್ವೀಟ್ ಗಳನ್ನು ಮಾಡಿದರೆ ಅದನ್ನು ಸ್ಕ್ರಾಲ್ ಮಾಡಿ ಹುಡುಕಾಡುವಷ್ಟು ತಾಳ್ಮೆ ಯಾರಿಗಿದೆ ಹೇಳಿ. ಹಾಗಾದರೆ, ಒಬ್ಬ ವ್ಯಕ್ತಿಯ ಅಥವಾ ಒಂದು ಅಕೌಂಟ್ ನಿಂದ ಮಾಡಲಾದ ಹಳೆಯ ಟ್ವೀಟ್ ಗಳನ್ನು ಹೇಗೆ ಹುಡುಕಾಡುವುದು?

Advertisement

ಫೇಸ್ಬುಕ್, ವಾಟ್ಸಾಪ್ನಂತೆ ಟ್ವಿಟ್ಟರ್ ಸಹ ಬಹಳ ಜನಪ್ರಿಯತೆ ಪಡೆದಿರುವ ಸಾಮಾಜಿಕ ಮಾಧ್ಯಮವಾಗಿದೆ. ಸೆಲೆಬ್ರಿಟಿಗಳ ಒಂದೇ ಒಂದು ಟ್ವೀಟ್ ಇಡೀಯ ಶೇರು ಮಾರುಕಟ್ಟೆಯನ್ನೇ ಅಲುಗಾಡಿಸಬಲ್ಲದು. ಕೆಲವು ದೊಡ್ಡ ಮಟ್ಟಿನ ವಿವಾದವನ್ನೂ ಸೃಷ್ಟಿಸಬಹುದು. ನೀವು ಟ್ವಿಟ್ಟರ್ ನಲ್ಲಿ ಹಲವು ವರ್ಷಗಳಿಂದ ಇದ್ದು, ನಿಮ್ಮ ಹಳೆಯ ಟ್ವೀಟ್ ಗಳನ್ನು ನೋಡಬೇಕು ಅಥವಾ ಬೇರೆ ಯಾವುದಾದರೂ ಖಾತೆಯ ಹಲವು ವರ್ಷ ಹಿಂದಿನ ಟ್ವೀಟ್ ಗಳನ್ನು ನೋಡಬೇಕು ಎನಿಸಿದರೆ ಒಂದು ಸುಲಭ ಮಾರ್ಗ ಇಲ್ಲಿದೆ:

  • ಮೊದಲಿಗೆ ಟ್ವಿಟ್ಟರ್ ಅಪ್ಲಿಕೇಶನ್ ತೆರೆದು, ನಿಮ್ಮ ಖಾತೆಗೆ ಲಾಗಿನ್ ಆಗಿ
  • ಮೊಬೈಲ್ ಆ್ಯಪ್ ನಲ್ಲಿ ಕೆಳಗಡೆ ಕಾಣುವ ಸರ್ಚ್ ಆಯ್ಕೆಯನ್ನು ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ನಿಮ್ಮ ಹಳೆಯ ಟ್ವೀಟ್ಗಳನ್ನು ಹುಡುಕಲು, ” from:(username)” ಎಂದು ಟೈಪ್ ಮಾಡಿ. (ಇಲ್ಲಿ ಬ್ರ್ಯಾಕೆಟ್ ಒಳಗೆ ಬಳಕೆದಾರರ ಹೆಸರು ಅಲ್ಲ, ಬದಲಿಗೆ ಯೂಸರ್ ನೇಮ್ ನಮೂದಿಸಬೇಕು. ಟ್ವಿಟ್ಟರ್ ನಲ್ಲಿರುವ ಯಾವ ಖಾತೆಯ ಟ್ವೀಟ್ಗಳನ್ನು ನೀವು ಹುಡುಕಾಡಬಹುದು. ಉದಾ: from:(narendramodi)
  • ಯೂಸರ್ ನೇಮ್ ಹಾಕುವಾಗ @ ಅನ್ನು ಬಳಸಬೇಕಾಗಿಲ್ಲ.

ಒಂದು ಖಾತೆಯ ಒಳಗೆ ದಿನ ಅಥವಾ ವರ್ಷವನ್ನು ನಮೂದಿಸಿ ನಿಖರವಾಗಿ, ನಿರ್ದಿಷ್ಟವಾಗಿ ಟ್ವೀಟ್ಗಳನ್ನು ಹುಡುಕಬೇಕಾದರೆ, since:(yyyy-mm-dd) until:(yyyy-mm-dd)

ಉದಾ: since:(2010-10-25) until:(2014-05-23)

ಯಾವುದಾದರೂ ನಿರ್ದಿಷ್ಟ ಪದ ಅಥವಾ ಕೀವರ್ಡ್ ಹುಡುಕಬೇಕಾದರೆ, ಖಾತೆಯ ಯೂಸರ್ ನೇಮ್ ಬಳಿಕ ಆ ಪದವನ್ನು ನಮೂದಿಸುವುದು

Advertisement

ಉದಾ: from:(narendramodi) petrol

ಇದನ್ನೂ ಓದಿ:ಕಾಶ್ಮೀರ ಕುರಿತು ಟ್ವೀಟ್: ಹುಂಡೈ ಇಂಡಿಯಾ ಕಂಪನಿ ಬಹಿಷ್ಕರಿಸಿ…ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಬಳಕೆದಾರರನ್ನು (ಯೂಸರ್) ಬೇರೆಯವರಾದರು ಉಲ್ಲೇಖಿಸಿದ್ದರೆ ಅದನ್ನು ಹುಡುಕಬೇಕಾದರೆ, ಯೂಸರ್ನೇಮ್ ಜೊತೆ ‘@’ ಎಂದು ಟೈಪ್ ಮಾಡಿ.

ಉದಾ: from:(@narendramodi)

ಫಲಿತಾಂಶಗಳು ಕಾಣಸಿಗುವಾಗ, ಮೇಲ್ಗಡೆ ಇನ್ನಷ್ಟು ಫಿಲ್ಟರ್ ಮಾಡಬಹುದು. ಟ್ವೀಟ್ಗಳು, ಇತ್ತೀಚೆಗಿನ ಟ್ವೀಟ್ಗಳು, ಫೊಟೋ, ವೀಡಿಯೋ ಯಾವುದು ಬೇಕು ಅದನ್ನು ಮಾತ್ರ ಹುಡುಕಬಹುದು.

ಹೀಗೆ ಟ್ವಿಟ್ಟರ್ ಆ್ಯಪ್ ನಲ್ಲಿ ಹಳೆಯ ಟ್ವೀಟ್ ಗಳನ್ನು ಹುಡುಕಬಹುದು. ಅದೇ ರೀತಿ, ಟ್ವಿಟ್ಟರ್ ವೆಬ್/ಡೆಸ್ಕ್‌ಟಾಪ್‌ ನಲ್ಲಿ ಹಳೆಯ ಟ್ವೀಟ್ ಗಳನ್ನು ಹುಡುಕಬೇಕಾದರೆ, ಅದರಲ್ಲಿ ಅಡ್ವಾನ್ಸ್ಡ್ ಸರ್ಚ್ ಆಯ್ಕೆ ಸಿಗಲಿದ್ದು, ಬಹಳ ಸುಲಭವಾಗಿ ಟ್ವೀಟ್ಗಳನ್ನು ಜಾಲಾಡಬಹುದು. ಈ ಮೂಲಕ ನೀವು ಯಾವುದೇ ವ್ಯಕ್ತಿಯ, ಖಾತೆಯ ಅಥವಾ ನಿಮ್ಮದೇ ಖಾತೆಯಿಂದ ಈ ಹಿಂದೆ ಟ್ವೀಟ್ ಮಾಡಲಾದ ವಿಷಯಗಳನ್ನು ಸುಲಭವಾಗಿ ವೀಕ್ಷಿಸಬಹುದು.

ಇಂದುಧರ ಹಳೆಯಂಗಡಿ

Advertisement

Udayavani is now on Telegram. Click here to join our channel and stay updated with the latest news.

Next