Advertisement
ನಮ್ಮ ದಾಖಲೆಗಳನ್ನು ನಾವು ಡಿಜಿ ಲಾಕರ್ ನಲ್ಲಿ ಸೇವ್ ಮಾಡಿಟ್ಟುಕೊಂಡು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ. ಸರ್ಕಾರಿ ಸಂಸ್ಥೆಗಳೆಲ್ಲದರ ಇ-ದಾಖಲಾತಿಗಳಿಗೆ ಸಂಪರ್ಕ ಒದಗಿಸುತ್ತದೆ ಡಿಜಿ ಲಾಕರ್. ಡಿಜಿ ಲಾಕರ್ನಲ್ಲಿ ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಮತದಾನ ಗುರುತಿನ ಚೀಟಿ, ಪಾಲಿಸಿ ದಾಖಲಾತಿಗಳು ಮುಂತಾದವನ್ನು ಸಂಗ್ರಹಿಸಿಡಬಹುದಾಗಿದೆ.
Related Articles
- ಡಿಜಿಲಾಕರ್ ಅಧಿಕೃತ ವೆಬ್ಸೈಟ್ ಗೆ ಈ ಲಿಂಕ್ ನ https://www.digilocker.gov.in/dashboard ಮೂಲಕ ಪ್ರವೇಶ ಪಡೆಯಿರಿ.
- ಡಿಜಿಲಾಕರ್ ಖಾತೆಗೆ ಲಾಗ್ ಇನ್ ಆಗಬೇಕು.
- ಎಡ ಭಾಗದಲ್ಲಿ ಇರುವ “issued documents” ಗೆ ಹೋಗಿ.
- ವಿತರಣೆ ಆದ ದಾಖಲಾತಿಗಳು ನೋಂದಾಯಿತ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆಗಳಿಂದ ನೇರವಾಗಿ ಡಿಜಿ ಲಾಕರ್ ಗೆ ಬರುತ್ತದೆ. ಅಥವಾ ಅದನ್ನು ಕೆಲವು ಸಹಭಾಗಿಗಳ ಮೂಲಕ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ವಿತರಣೆಯಾದ ದಾಖಲಾತಿಗಳಿಗೆ ಅವುಗಳನ್ನು ಸೇರ್ಪಡೆ ಮಾಡಿಕೊಳ್ಳಿ.
- ದಾಖಲಾತಿಗಳನ್ನು ತೆಗೆಯಲು ಲಿಂಕ್ ಕಾಣಿಸುತ್ತದೆ ಮತ್ತು ಅದರ ಮೇಲೆ ಕ್ಲಿಕ್ ಮಾಡಬೇಕು.
- ಸಹಭಾಗಿಯ ಡೇ ಡ್ರಾಪ್ ಡೌನ್ ನಲ್ಲಿ “Income Tax Department” ಆಯ್ಕೆ ಮಾಡಿ.
- ದಾಖಲಾತಿ ವಿಧಗಳಲ್ಲಿ “PAN Card/ಪಾನ್ ಕಾರ್ಡ್” ಆರಿಸಿಕೊಳ್ಳಿ.
- ಆಧಾರ್ ಮಾಹಿತಿಯನ್ನು ಪಾನ್ ಮಾಹಿತಿಯೊಂದಿಗೆ ಪರಿಶೀಲನೆ ಮಾಡಿ.
- ಈಗ ಪಾನ್ ಸಂಖ್ಯೆಯನ್ನು ನಮೂದಿಸಿ ಹಾಗೂ ಡ್ರಾಪ್ ಡೌನ್ನಿಂದ ಲಿಂಗ- ಆಯ್ಕೆ ಮಾಡಿ.
- ಒಪ್ಪಿಗೆಯ ಬಾಕ್ಸ್ ಗೆ ಟಿಕ್ ಮಾಡಿ, ಗೆಟ್ ಡಾಕ್ಯುಮೆಂಟ್ / Get Document ಎಂಬುದರ ಮೇಲೆ ಕ್ಲಿಕ್ ಮಾಡಿ.
- ಅಂತಿಮವಾಗಿ ಪಾನ್ ಮಾಹಿತಿ ಡಿಜಿಲಾಕರ್ ನಲ್ಲಿ ಸ್ಟೋರ್ ಆಗುತ್ತದೆ ಮತ್ತು Issued documents ಅಡಿಯಲ್ಲಿ ಲಿಂಕ್ ಗೆ ಸಂಪರ್ಕ ದೊರಕುತ್ತದೆ.
Advertisement
ಇದನ್ನೂ ಓದಿ : ವಿಶಾಲಾ ಗಾಣಿಗ ಕೇಸ್ : ಆರೋಪಿಗಳನ್ನ ಹಿಡಿದಿದ್ದೇ ಒಂದು ರೋಚಕ ಕಥೆ.. ಇಲ್ಲಿದೆ ನೋಡಿ ಮಾಹಿತಿ