Advertisement

ಟೆಸ್ಟ್‌ ಎದುರಿಸುವುದು ಹೇಗೆ?

06:00 AM Sep 11, 2018 | |

ಕಲಿಕೆ ಜೀವನಪರ್ಯಂತ ಇದ್ದೇ ಇರುತ್ತೆ. ಅದು ಯಾವತ್ತಿಗೂ ಮುಗಿಯುವುದಿಲ್ಲ ಎಂಬ ಮಾತಿದೆ. ಪರೀಕ್ಷೆ ಬಂದಾಗ ಗಾಬರಿ ಬೀಳುವ ಅಗತ್ಯವಿಲ್ಲ. ಚೆನ್ನಾಗಿ ತಯಾರಾಗಿದ್ದರೆ ಯಾವ ಚಿಂತೆಯೂ ಇರುವುದಿಲ್ಲ. ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಇರುವ ತಂತ್ರಗಳು ಇಲ್ಲಿವೆ…

Advertisement

ಒಂದು ಕೆಲಸ ಮಾಡಿ
ಇದು “ಒಂದ್‌ ಕೆಲ್ಸ ಮಾಡಿ…’ ಎಂದು ದಾರಿ ತೋರುವ ವಾಕ್ಯವಲ್ಲ. ಓದುವಾಗ ಪಾಲಿಸಬೇಕಾದ ಸಿದ್ಧಾಂತ. ಇದರರ್ಥ, ಓದುವಾಗ ತಲೆಯೊಳಗೆ ಬೇರ್ಯಾವ ಆಲೋಚನೆಯನ್ನೂ ಮಾಡಬಾರದು. ಅಂದರೆ, ಒಂದೇ ವಿಷಯದ ಕಡೆ ನಮ್ಮ ಗಮನ ಕೇಂದ್ರಿತವಾಗಿರಬೇಕು. 

ಚೆನ್ನಾಗಿ ನಿದ್ದೆ ಮಾಡಿ
ತರಗತಿಯಲ್ಲಿ ಅಲ್ಲ! ಕೆಲವರಿಗೆ ರಾತ್ರಿಯಿಡೀ ನಿದ್ದೆಗೆಟ್ಟು ಓದುವ ಅಭ್ಯಾಸವಿರುತ್ತದೆ. ಓದುವುದೇನೋ ಸರಿ, ಆದರೆ ನಿದ್ದೆಗೆಟ್ಟು, ಕಣ್ಣಿಗೆ, ಮನಸ್ಸಿಗೆ ಕಿರಿಕಿರಿ ಮಾಡಿಕೊಳ್ಳಬಾರದು. ನಿದ್ದೆಗೆಡುವುದರಿಂದ ನಮಗೇ ಹೆಚ್ಚು ತೊಂದರೆ. ನೆನಪಿನಲ್ಲಿರೋದೂ ಮರೆತು ಹೋದೀತು. ಹೀಗಾಗಿ ಓದಿನಷ್ಟೆ ನಿದ್ದೆಯೂ ಮುಖ್ಯ.

ಸ್ವಪರೀಕ್ಷೆ
ನಾವೆಲ್ಲರೂ ಎಷ್ಟು ಕಲಿತಿದ್ದೇವೆ ಎಂಬುದನ್ನು ತಿಳಿಯಲು ಎಕ್ಸಾಮ್‌ ತನಕ ಕಾಯಬೇಕಿಲ್ಲ. ನಮಗೆ ನಾವೇ ಪರೀಕ್ಷೆ ಕೊಟ್ಟುಕೊಂಡೂ ತಿಳಿಯಬಹುದು. ಇದರಿಂದ ನಮ್ಮ ಸಾಮರ್ಥ್ಯ, ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸಮಯ ಕೊಡಿ
ಬೀಜ ಏಕಾಏಕಿ ಒಂದೇ ರಾತ್ರಿಯಲ್ಲಿ ಮರವಾಗಿ ಬೆಳೆದುಬಿಡುವುದಿಲ್ಲ. ಅದಕ್ಕೆ ವರ್ಷಗಳ ಕಾಲ ಹಿಡಿಯುತ್ತದೆ. ಆಗಲೇ ಸದೃಢವಾಗಿ ಗಾಳಿ, ಮಳೆ, ಬಿಸಿಲಿಗೆ ಸೋಲದೆ ನಿಲ್ಲಲು ಸಾಧ್ಯ. ನಮ್ಮ ಓದು ಕೂಡಾ ಅದೇ ರೀತಿ ಇರಬೇಕು. ಪರೀಕ್ಷೆ ಬಂದಾಗ ಮಾತ್ರ ಓದುವುದಲ್ಲ. ಶುರುವಿನಿಂದಲೇ ಓದುತ್ತಿದ್ದರೆ ಮೆದುಳಿನೊಳಗೆ ವಿಷಯಗಳು ಭದ್ರವಾಗಿ ಕೂರುವುದು. ಅಲ್ಲದೆ ವಿಷಯ ಚೆನ್ನಾಗಿ ಅರ್ಥವಾಗುವುದು.

Advertisement

ನೆನಪಿಡುವ ಕಲೆ
ಪಠ್ಯದಲ್ಲಿರುವ ಕೆಲವೊಂದು ಸಂಗತಿಗಳನ್ನು ಮನನ ಮಾಡಬೇಕಾಗಿ ಬರುತ್ತದೆ. ಕೆಲವೊಮ್ಮೆ ಈ ವಿಷಯಗಳು ದೀರ್ಘ‌ವಾಗಿದ್ದರಂತೂ ಮನನ ಮಾಡುವುದು ಕಷ್ಟವೆಂಬಂತೆ ತೋರುತ್ತದೆ. ಇಂಥಾ ಸಮಯದಲ್ಲಿ ಕೆಲ ಮಾರ್ಗಗಳು ನೆರವಿಗೆ ಬರುತ್ತವೆ. ಪೂರ್ತಿ ವಿಷಯವನ್ನೇ ನೆನಪಿಡುವ ಬದಲು ಶಾರ್ಟ್‌ ಆಗಿ ಒಂದೇ ಅಕ್ಷರದಿಂದ ನೆನಪಿಡಿ. ವಿಜ್ಞಾನದ ಪೀರಿಯಾಡಿಕ್‌ ಟೇಬಲ್‌ನಲ್ಲಿ ಏಛಿ, Nಛಿ, ಅr… ಎಂದೆಲ್ಲಾ ಬರೆದಿರುತ್ತಾರಲ್ಲ, ಹಾಗೆ. ಈ ತಂತ್ರವನ್ನು ಬಳಸಿಕೊಂಡು ಸೂತ್ರಗಳು, ಉದ್ದುದ್ದ ಪಾಯಿಂಟುಗಳಿರುವ ಉತ್ತರಗಳನ್ನೆಲ್ಲಾ ನೆನಪಿಡಬಹುದು. ಇದನ್ನು ಸ್ಮಾರ್ಟ್‌ ಸ್ಟಡಿ ಎಂದು ಕರೆಯುವರು.

ರಫ್ಬುಕ್‌ ಬಳಸಿ
ತಾವು ಕಲಿತದ್ದನ್ನೆಲ್ಲ ರಫ್ಬುಕ್‌ನಲ್ಲಿ ಪುಟ್ಟದಾಗಿ ನೋಟ್ಸ್‌ ಮಾಡಿಕೊಳ್ಳುವುದರಿಂದ ಹಲವು ಉಪಯೋಗಗಳಿವೆ. ಮನನ ಮಾಡಿಕೊಂಡಂತಾಗುವುದಲ್ಲದೆ, ಪರೀಕ್ಷೆಗೆ ಕೆಲ ಗಂಟೆಗಳಿರುವಾಗ ಪೂರ್ತಿ ಸಿಲಬಸ್‌ ಅನ್ನು ಅತಿ ಶೀಘ್ರವಾಗಿ ತಿರುವಿಕೊಳ್ಳಬಹುದು.

ವಿರಾಮ ಕೊಟ್ಟುಕೊಳ್ಳಿ
ಓದಿನ ನಡುವೆ ವಾಕ್‌, ಸ್ನೇಹಿತರೊಡನೆ ಮಾತು, ಸ್ವಲ್ಪ ಹೊತ್ತು ಮನರಂಜನೆ ಇದ್ದರೆ ತಪ್ಪೇನಿಲ್ಲ. ಅತಿಯಾಗಬಾರದು ಅಷ್ಟೆ. ಒಂದು ಬ್ರೇಕ್‌ ನೀಡುವುದರಿಂದ ಮನಸ್ಸು ರಿಲ್ಯಾಕ್ಸ್‌ ಆಗುತ್ತದೆ. ಓದನ್ನು ಮುಂದುವರಿಸಲು ಇನ್ನಷ್ಟು ಉತ್ಸಾಹ ಬರುತ್ತದೆ. ಆದರೆ ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಓದು ಶುರು ಮಾಡಿದರೆ ವಿರಾಮ ನೀಡಲು ಸಾಧ್ಯವಾಗದು. ಹೀಗಾಗಿ ಶುರುವಿನಿಂದಲೇ ಓದುವುದು ಅತ್ಯಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next