Advertisement

ದ್ವಿಚಕ್ರ ವಾಹನಗಳ ವೀಲ್‌ ಬೇರಿಂಗ್‌ ರಿಪೇರಿ ಹೇಗೆ?

11:14 PM Jan 23, 2020 | mahesh |

ದ್ವಿಚಕ್ರ ವಾಹನಗಳ ಸುಗಮ ಸವಾರಿಗೆ ನೆರವಾಗುವುದು ವೀಲ್‌ ಬೇರಿಂಗ್‌ಗಳು, ಎರಡೂ ಚಕ್ರಗಳಲ್ಲಿ ಈ ಬೇರಿಂಗ್‌ಗಳು ಇರುತ್ತವೆ. ಸುಲಲಿತ ಚಾಲನೆಗೆ ತಿರುಗುವಂತೆ ಮಾಡುವುದು, ವೇಗದಲ್ಲೂ ನಿಯಂತ್ರಣವಿರುವಂತೆ ಮಾಡುವುದು ಇದರ ಕೆಲಸ.

Advertisement

ವೀಲ್‌ ಬೇರಿಂಗ್‌ ಎಲ್ಲಿರುತ್ತದೆ?
ಟಯರ್‌ ಅನ್ನು ಹಿಡಿದಿಟ್ಟುಕೊಂಡ ರಿಮ್‌ನ ಮಧ್ಯ ಭಾಗದಲ್ಲಿ (ರಿಮ್‌ ಹಬ್‌) ಎರಡೂ ಬದಿಗಳಲ್ಲಿ ಇರುತ್ತವೆ. ಅಂದರೆ ಒಂದು ಚಕ್ರದಲ್ಲಿ ಬಲ ಮತ್ತು ಎಡಭಾಗ ಎಂದು ಎರಡು ಬೇರಿಂಗ್‌ಗಳು ಇರುತ್ತವೆ. ಆಯಾ ಕಂಪೆನಿಯ ಬೈಕ್‌ಗಳಲ್ಲಿ ನಿರ್ದಿಷ್ಟ ಗಾತ್ರದ ಬೇರಿಂಗ್‌ಗಳು ಇರುತ್ತವೆ.

ವೀಲ್‌ ಬೇರಿಂಗ್‌ ಹಾಳಾದರೆ ಗೊತ್ತಾಗೋದು ಹೇಗೆ?
ಬೇರಿಂಗ್‌ ಹಾಳಾದರೆ ಹಲವು ರೀತಿಯಲ್ಲಿ ಅನುಭವಕ್ಕೆ ಬರಬಹುದು. ಕೂಡಲೇ ಹೊಸ ಬೇರಿಂಗ್‌ಗಳನ್ನು ಹಾಕಿಸಬೇಕು. ಹೀಗೆ ಹೊಸ ಬೇರಿಂಗ್‌ ಹಾಕುವ ವೇಳೆ ಒಂದು ಚಕ್ರದ ಎರಡೂ ಬದಿಯ ಬೇರಿಂಗ್‌ಗಳನ್ನು ಹಾಕಿಸುವುದು ಉತ್ತಮ.

ದೊಡ್ಡ ಶಬ್ದ
ಕೆಲವೊಮ್ಮೆ ದೊಡ್ಡ ಶಬ್ದ ಟಯರ್‌ನಿಂದ ಕೇಳಿ ಬರುತ್ತದೆ. ಕರ್ರರ್‌.. ಶಬ್ದ ಸಾಮಾನ್ಯವಾಗಿ ಕೇಳಿ ಬರಬಹುದು. ಇಂತಹ ಸಂದರ್ಭದಲ್ಲೂ ಹೆಚ್ಚು ಚಾಲನೆ ಮಾಡದೆ ಹೊಸ ಬೇರಿಂಗ್‌ ಹಾಕಿಸುವುದು ಉತ್ತಮ.

ಬೆಲೆ ಎಷ್ಟಿರುತ್ತದೆ?
ವೀಲ್‌ ಬೇರಿಂಗ್‌ ದರ ವಿವಿಧ ಕಂಪೆನಿಯ ಬೈಕ್‌ಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. 200 ರೂ.ಗಳಿಂದ 350 ರೂ.ಗಳ ವರೆಗೆ ಸಾಮಾನ್ಯವಾಗಿ ದರ ಇರುತ್ತದೆ. ಸ್ಪೋರ್ಟ್ಸ್, ಅಡ್ವೆಂಚರ್‌ ಇತ್ಯಾದಿ ಬೈಕ್‌ಗಳ ವೀಲ್‌ ಬೇರಿಂಗ್‌ ದರ ಹೆಚ್ಚು ಮತ್ತು ಇದರ ಸಾಮರ್ಥ್ಯ ಹೆಚ್ಚಿದ್ದರೂ ಅವುಗಳು ಬಹುಬೇಗನೆ ಸವೆಯುತ್ತವೆ. ಭಾರದ, ದೊಡ್ಡ ಬೈಕ್‌ಗಳಲ್ಲಿ ಬೇರಿಂಗ್‌ ಬೇಗನೆ ರಿಪ್ಲೇಸ್‌ಮೆಂಟ್‌ ಕೇಳುತ್ತದೆ.

Advertisement

ಟಯರ್‌ ಒಂದು ಬದಿ ಸವೆತ
ವೀಲ್‌ ಬೇರಿಂಗ್‌ ಹಾಳಾದ್ದರಿಂದ ಅದರ ನೇರ ಪರಿಣಾಮ ಟಯರ್‌ ಒಂದು ಬದಿ ಸವೆಯುತ್ತದೆ. ಯಾವ ಬದಿಯಲ್ಲಿ ಟಯರ್‌ ಸವೆದಿದೆ ಎಂಬುದರ ಮೇಲೆ ಯಾವ ಭಾಗದಲ್ಲಿ ಸಮಸ್ಯೆ ಇದೆ ಎಂದು ಸುಲಭವಾಗಿ ಗುರುತಿಸಬಹುದು. ವೀಲ್‌ ಬೇರಿಂಗ್‌ನ ಸಮಸ್ಯೆಯಿಂದಾಗಿ ಟಯರ್‌ ಬಹುಬೇಗ ಸವೆಯುತ್ತದೆ. ಇದಕ್ಕಾಗಿ ಕೂಡಲೇ ಹೊಸ ಬೇರಿಂಗ್‌ ಹಾಕಿಸಿಕೊಳ್ಳುವುದು ಉತ್ತಮ.

ನಡುಗುವ ಚಕ್ರಗಳು
ದ್ವಿಚಕ್ರ ವಾಹನ ಚಾಲನೆ ವೇಳೆ ಚಕ್ರಗಳು ನಡುಗುವ ರೀತಿ ಭಾಸವಾಗಬಹುದು ಅಥವಾ ಒಂದು ಬದಿಗೆ ತಿರುಗಿಸುವ ವೇಳೆ ಎಳೆದ ರೀತಿ ಭಾಸವಾಗಬಹುದು. ವೀಲ್‌ ಬೇರಿಂಗ್‌ ಕೆಟ್ಟಿದ್ದೇ ಆದಲ್ಲಿ ಉತ್ತಮ ಮಾರ್ಗದಲ್ಲಿ, ನೇರವಾಗಿ ಚಲಾಯಿಸುವ ವೇಳೆ ಚಕ್ರಗಳು ನಡುಗಿದಂತೆ ಭಾಸವಾಗುತ್ತದೆ.

 ಈಶ

Advertisement

Udayavani is now on Telegram. Click here to join our channel and stay updated with the latest news.

Next