Advertisement

ಎಂಜಿನ್‌ ಕಾರ್ಬನ್‌ ತೆಗೆಯೋದು ಹೇಗೆ?

10:47 PM Dec 05, 2019 | Team Udayavani |

ವಾಹನಗಳ ವ್ಯಾಪಕ ಬಳಕೆ ಬಳಿಕ ಪಿಕಪ್‌ ಕಡಿಮೆಯಾಗಿದೆ, ಆಗಾಗ್ಗೆ ನಿಲ್ಲುತ್ತದೆ, ಮೈಲೇಜ್‌ ಕಡಿಮೆ, ಹೆಚ್ಚು ಹೊಗೆ ಕಾರುವ ಸಮಸ್ಯೆಗಳು ನಿಮ್ಮ ಅನುಭವಕ್ಕೆ ಬರಬಹುದು. ಕಾರು, ಬೈಕ್‌ಗಳಲ್ಲೂ ಈ ಸಮಸ್ಯೆ ಇರುತ್ತದೆ. ಇಂತಹ ಸಮಸ್ಯೆಗೆ ಕಾರಣ ಎಂಜಿನ್‌ನಲ್ಲಿ ಕಾರ್ಬನ್‌ ತುಂಬಿಕೊಂಡಿರುವುದು. ಕಾರ್ಬನ್‌ ಎಂದರೆ ಅರ್ಥಾತ್‌ ಇಂಧನ ದಹಿಸಿದ ಬಳಿಕ ಉಳಿದ ತುಸು ಕಪ್ಪಗಿನ ವಸ್ತು. ವಾಹನದ ಪೆಟ್ರೋಲ್‌ನಲ್ಲಿರುವ ದೋಷದಿಂದಾಗಿ ಅಥವಾ ಸರಿಯಾಗಿ ಪೆಟ್ರೋಲ್‌ ದಹನವಾಗದೇ ಇರುವುದರಿಂದಾಗಿಯೂ, ಹಲವಾರು ವರ್ಷಗಳ ಬಳಕೆ ಬಳಿಕವೂ ಎಂಜಿನ್‌ನಲ್ಲಿ ಕಾರ್ಬನ್‌ ಉಂಟಾಗುತ್ತದೆ. ವಾಹನದ ಬೋರ್‌ ಹೆಡ್‌ ಭಾಗದಲ್ಲಿ ಈ ಕಾರ್ಬನ್‌ ಶೇಖರಣೆಯಾಗಿ ಸಮಸ್ಯೆಗಳಿಗೆ ಕಾರಣ ವಾಗುತ್ತದೆ.

Advertisement

ಸಮಸ್ಯೆಗಳೇನು?
ಪಿಕಪ್‌
ವಾಹನದ ಪಿಕಪ್‌ ಮೊದಲಿನಂತೆ ಇರುವುದಿಲ್ಲ. ಅಕ್ಸಲರೇಟರ್‌ ಕೊಟ್ಟರೂ ಸುಲಲಿತವಾಗಿ ಮುಂದೆ ಹೋಗಲಾರದು. ಟಾಪ್‌ ಎಂಡ್‌ ಸ್ಪೀಡ್‌ ಕೊರತೆಯಾಗುತ್ತದೆ. ಏರುವ ಸಾಮರ್ಥ್ಯ ಕ್ಷೀಣಗೊಳ್ಳುತ್ತದೆ. ಮೈಲೇಜ್‌ ಕಡಿಮೆಯಾಗುತ್ತದೆ.

ಹೆಚ್ಚು ಹೊಗೆ: ಹೊಗೆ ಸೂಸುವ ಪ್ರಮಾಣ ಹೆಚ್ಚಾಗುತ್ತದೆ. ಇದು ನಿಮಗೆ ವಾಹನದ ಮಾಲಿನ್ಯ ಮಟ್ಟ ತಿಳಿಯುವ ಸರ್ಟಿಫಿಕೇಟ್‌ ಮಾಡಿಸುವ ವೇಳೆ ಅನುಭವಕ್ಕೆ ಬರಬಹುದು. ಅಥವಾ ಕೋಲ್ಡ್‌ ಎಂಜಿನ್‌ ಸ್ಟಾರ್ಟ್‌ ವೇಳೆ ಅತಿ ಹೆಚ್ಚು, ಅಕ್ಸಲರೇಟರ್‌ ಅದುಮಿದಾಗ ಹೆಚ್ಚು ಹೊಗೆ ಸೂಸುವುದು ಗೊತ್ತಾಗಬಹುದು.

ಎಂಜಿನ್‌ ಆಯಿಲ್‌ ಆರುವುದು
ವಾಹನದ ಎಂಜಿನ್‌ನಲ್ಲಿರುವ ಎಂಜಿನ್‌ ಆಯಿಲ್‌ ಆರುತ್ತಲೇ ಇರುತ್ತದೆ. ಬಹುಬೇಗನೆ ಎಂಜಿನ್‌ ಆಯಿಲ್‌ ಆರುವುದರಿಂದ ವಾಹನದ ಎಂಜಿನ್‌ ಸೀಝ್ ಆಗುವ ಸಾಧ್ಯತೆಯೂ ಇರುತ್ತದೆ.

ಎಂಜಿನ್‌ ಬಂದ್‌
ಆಗಾಗ್ಗೆ ವಾಹನದ ಎಂಜಿನ್‌ ಬಂದ್‌ ಬೀಳಬಹುದು. ಚಾಲನೆ ಮಧ್ಯೆಯೇ ವಾಹನದ ಶಬ್ದ ವ್ಯತ್ಯಾಸವಾದಂತಾಗಿ ಬಂದ್‌ ಬೀಳುತ್ತದೆ.

Advertisement

ಪರಿಹಾರವೇನು ?
1. ಬೈಕ್‌ಗಳಿಗೆ ಒಂದು ಸಾಮಾನ್ಯ ಪರಿಹಾರವೆಂದರೆ ಎಂಜಿನ್‌ ಫ್ಲಶ್‌ ಎಂಬ ರಾಸಾಯನಿಕವನ್ನು ಹಾಕಿ ಕಾರ್ಬನ್‌ ತೆಗೆಯುವುದು ಅಥವಾ ಕಾರ್ಬನ್‌ ಫ್ಲಶರ್‌ ಎಂಬ ಸಾಧನ ಬಳಸಿಕೊಂಡು ಕಾರ್ಬನ್‌ ತೆಗೆಯಲು ಸಾಧ್ಯವಿದೆ. ಅಧಿಕೃತ ಸರ್ವೀಸ್‌ ಸೆಂಟರ್‌ಗಳಲ್ಲಿ ಈ ರಿಪೇರಿ ಸಾಧ್ಯ. ಕಾರುಗಳಲ್ಲೂ ಸಾಮಾನ್ಯವಾಗಿ ಕಾರ್ಬನ್‌ ತೆಗೆಯು ವುದು ಫ್ಲಶರ್‌ಗಳ ಮೂಲಕವೇ. ಕಾರ್ಬನ್‌ ಪರಿಣಾಮಕಾರಿಯಾಗಿ ಹೊರಹೋಗಿದೆ ಎಂಬುದನ್ನು ಮಾಲಿನ್ಯ ಪ್ರಮಾಣ ಪರೀಕ್ಷೆ ವೇಳೆ ತಿಳಿಯಬಹುದು.

2. ಈ ಮಾದರಿಯಲ್ಲಿ ಎಂಜಿನ್‌ ಬೋರ್‌ ಹೆಡ್‌ ಅನ್ನು ತೆಗೆಯಬೇಕಾಗುತ್ತದೆ. ಎಂಜಿನ್‌ ಹೆಡ್‌ ತೆಗೆದು, ವಾಲ್‌ ಮೇಲಿರುವ ದಪ್ಪನೆಯ ಕರಿಯನ್ನು ತೆಗೆಯಬೇಕಾಗುತ್ತದೆ. ಈ ಕೆಲಸವನ್ನು ಉತ್ತಮ ಮೆಕ್ಯಾನಿಕ್‌ಗಳು ಮಾಡಬಲ್ಲರು. ಕಾರ್ಬನ್‌ ತೆಗೆದು, ಹೆಡ್‌ ಶುಚಿಗೊಳಿಸಿ ಪುನಃ ಹೊಸ ಗ್ಯಾಸ್‌ಕೆಟ್‌ ಹಾಕಬೇಕಾಗುತ್ತದೆ.

   ಈಶ

Advertisement

Udayavani is now on Telegram. Click here to join our channel and stay updated with the latest news.

Next