Advertisement
ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಯಾರಿ ನಡೆಸದೆ ಅಸೈನ್‌ಮೆಂಟ್‌ಗಳನ್ನು ಮಾಡಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ಅಸೈನ್‌ಮೆಂಟ್‌ಗಳಿಗಾಗಿ ನಿಗದಿತ ಅವಧಿ ನೀಡಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಈ ಕುರಿತಾಗಿ ರೂಪಿಸಿಬೇಕಾದ ಪೂರ್ವ ಯೋಜನೆಗಳ ಪಟ್ಟಿಯನ್ನು ಗಮನಿಸಬಹುದು.
ವಿಷಯದ ಮೇಲೆ ಹಿಡಿತ
ವಿದ್ಯಾರ್ಥಿಗಳು ಅಸೈನ್‌ಮೆಂಟ್ ವಿಷಯ ನೀಡಿದ ತತ್‌ಕ್ಷಣ ಆ ವಿಷಯದ ಮೇಲೆ ಸರಿಯಾಗಿ ಹಿಡಿತ ಸಾಧಿಸಿಕೊಳ್ಳಬೇಕು. ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ವಿಷಯವನ್ನು ಗ್ರಹಿಸಿ ಆ ಸಂಬಂಧ ರೆಫೆರೆನ್ಸ್‌ಗಳನ್ನು ಸಿದ್ಧತೆ ಮಾಡಿಕೊಳ್ಳಬೇಕು. ವಿಷಯದ ಪ್ರತಿ ಆಯಾಮ ತಿಳಿದುಕೊಳ್ಳುವುದು
ಪ್ರತಿಯೊಂದು ವಿಷಯಕ್ಕೂ ಹಲವಾರು ಆಯಾಮಗಳಿದ್ದು, ಅವುಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಇದರಿಂದ ವಿಷಯದ ಪೂರ್ಣ ಮಾಹಿತಿ ಸಾಧ್ಯ. ಎಲ್ಲ ಆಯಾಮಗಳನ್ನು ತಿಳಿದುಕೊಂಡ ನಂತರ ತಯಾರಿ ಆರಂಭಿಸಬೇಕು. ಇದರಿಂದ ಸುಲಭವಾಗಿ ಅಸೈನ್‌ಮೆಂಟ್ ಮುಗಿಸಿಕೊಳ್ಳಬಹುದು.
Related Articles
ಅಸೈನ್‌ಮೆಂಟ್‌ಗಳ ತಯಾರಿಗಾಗಿ ಪುಸ್ತಕಗಳನ್ನು ಸಂಗ್ರಹಿಸಿ. ಮಾಹಿತಿಗಾಗಿ ಆದಷ್ಟು ಪುಸ್ತಕಗಳನ್ನೇ ಅವಲಂಬಿಸಿ. ಇದರಿಂದ ಉತ್ತಮ ಅಸೈನ್‌ಮೆಂಟ್ ಸಿದ್ಧಗೊಳ್ಳಲು ಸಾಧ್ಯ.
Advertisement
ಮಾಹಿತಿಗಳ ಸಂಗ್ರಹಪುಸ್ತಕ ಮತ್ತು ಇತರೆ ಮೂಲಗಳಿಂದ ಮಾಹಿತಿಗಳ ಸಂಗ್ರಹ ಮಾಡಿಕೊಳ್ಳಿ. ಇದರಿಂದ ಉತ್ತಮ ಅಸೈನ್‌ಮೆಂಟ್ ಸಿದ್ಧಗೊಳ್ಳಲು ಸಾಧ್ಯ. ಶಿಕ್ಷಕರ ಮಾರ್ಗದರ್ಶನ
ಅಸೈನ್‌ಮೆಂಟ್ ತಯಾರಿಗಾಗಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳಿ. ಇದರಿಂದ ಸುಲಭವಾಗಿ ಮಾಹಿತಿ ಸಂಗ್ರಹ ಸಾಧ್ಯ. ಒಂದಷ್ಟೂ ಸಮಯ ಮೀಸಲಿಡಿ
ಅಸೈನ್‌ಮೆಂಟ್ ತಯಾರಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡಿ. ಆತುರದಿಂದ ಮಾಡಿದರೆ ಅದು ಸಂಪೂರ್ಣ ಮಾಹಿತಿ ಹೊಂದಿರಲು ಸಾಧ್ಯವಿಲ್ಲ. ಆದ್ದರಿಂದ ಅಸೈನ್‌ಮೆಂಟ್‌ಗಾಗಿ ಒಂದಿಷ್ಟೂ ಸಮಯ ಮೀಸಲಿಡಿ. ಉತ್ತಮ ಅಸೈನ್‌ಮೆಂಟ್ ತಯಾರಿ ಮಾಡಬೇಕಾದರೆ ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಬೇಕು. ಉತ್ತಮ ಅಸೈನ್‌ಮೆಂಟ್ ಎಂದರೆ ಅದರಲ್ಲಿ ಬೇಕಾದ ಎಲ್ಲ ಮಾಹಿತಿ ಮತ್ತು ಎಲ್ಲ ಆಯಾಮಗಳಿರಬೇಕು. - ರಂಜಿನಿ, ಮಿತ್ತಡ್ಕ