ಫೋನ್ ಪೇ ಭಾರತದ ಪ್ರಮುಖ ಡಿಜಿಟಲ್ ಪೇಮೆಂಟ್ ವೇದಿಕೆಯಾಗಿದೆ. ಫೋನ್ ಪೇ ಬಳಸಿ, ನೀವು ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು, ಹತ್ತಿರದ ಅಂಗಡಿಗಳಲ್ಲಿ ಪಾವತಿಸಬಹುದು, ಬಿಲ್‌ಗಳನ್ನು ಪಾವತಿಸಬಹುದು, ಚಿನ್ನವನ್ನು ಖರೀದಿಸಬಹುದು ಮತ್ತು ಮ್ಯೂಚುವಲ್ ಫಂಡ್ ಮತ್ತು ವಿಮೆಯಲ್ಲಿ ಹೂಡಿಕೆ ಮಾಡಬಹುದು.
ಫೋನ್ ಪೇ ಆ್ಯಪ್ ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಕೆಲವೇ ಸೆಕೆಂಡುಗಳಲ್ಲಿ ಈಗ ನೀವು ಬಾಡಿಗೆಯನ್ನೂ ಪಾವತಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಫೋನ್ ಪೇಯಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸುವುದರಿಂದ ಹಲವು ಪ್ರಯೋಜನಗಳಿವೆ. ನೀವು 45 ದಿನಗಳ ಬಡ್ಡಿ ರಹಿತ ಕ್ರೆಡಿಟ್ ಅವಧಿಯನ್ನು ಪಡೆಯಬಹುದು ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ರಿವಾರ್ಡ್ ಕೂಡಾ ಪಡೆಯಬಹುದಾಗಿದೆ.
ಕೆಲವು ಸರಳ ಹಂತಗಳ ಮೂಲಕ ನಿಮ್ಮ ಬಾಡಿಗೆ ಪಾವತಿಸುವುದು ಹೇಗೆ ಎಂದು ಇಲ್ಲಿದೆ.
ಹಂತ 1: ಫೋನ್‌ಪೇ ಆ್ಯಪ್ ತೆರೆಯಿರಿ ಮತ್ತು ಹೋಂ ಪುಟದಲ್ಲಿ “ರೀಚಾರ್ಜ್ ಮಾಡಿ & ಬಿಲ್ ಪಾವತಿಸಿ”ವಿಭಾಗದಲ್ಲಿ ಬಾಡಿಗೆ ಪಾವತಿಸಿ ಐಕಾನ್ ಮೇಲೆ ಕ್ಲಿಕ್ ಮಾಡಿ
ಹಂತ 2: ಬಾಡಿಗೆ ಮೊತ್ತ ಮತ್ತು ಪ್ರಾಪರ್ಟಿಯ ಹೆಸರನ್ನು ನಮೂದಿಸಿ.
ಹಂತ 3: ಕಟ್ಟಡ ಮಾಲೀಕರ ಬ್ಯಾಂಕ್ ಖಾತೆ ಸಂಖ್ಯೆ/UPI ಐಡಿ ಅಥವಾ ಫೋನ್ ಪೇ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ (ಕಟ್ಟಡ ಮಾಲೀಕರ ಫೋನ್ ಪೇ ಖಾತೆ ಸ್ವಯಂ ಚಾಲಿತವಾಗಿ ತೋರಿಸುತ್ತದೆ)
ಹಂತ 4: ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ UPI – ಇವುಗಳಲ್ಲಿ ನಿಮ್ಮ ಆದ್ಯತೆಯ ಮೋಡ್ ಅನ್ನು ಆಯ್ಕೆ ಮಾಡಿ ಪೇಮೆಂಟ್ ಮಾಡಿ
ಅಭಿನಂದನೆಗಳು! ನಿಮ್ಮ ಬಾಡಿಗೆ ಪೇಮೆಂಟ್ ಯಶಸ್ವಿಯಾಗಿದೆ.