Advertisement

ವಿದ್ಯುತ್ ಬಿಲ್ ಕಟ್ಟಲು ಯಾವೆಲ್ಲಾ ಅಪ್ಲಿಕೇಶನ್ ಗಳಿವೆ ? ಇಲ್ಲಿದೆ ಮಾಹಿತಿ

02:45 PM Jan 09, 2021 | Team Udayavani |

ನವದೆಹಲಿ: ಕೋವಿಡ್ ಸಮಸ್ಯೆ ಆರಂಭಗೊಂಡ ನಂತರದಲ್ಲಿ ಜಗತ್ತಿನಲ್ಲಿ ಡಿಜಿಟಲ್ ಮಾಧ್ಯಮಗಳು ಮುನ್ನಲೆಗೆ ಬಂದಿದ್ದು, ಬ್ಯಾಂಕಿಂಗ್ ಚಟುವಟಿಕೆ ಸೇರಿದಂತೆ ಹಲವಾರು ಕಾರ್ಯಗಳು ಅಪ್ಲಿಕೇಶನ್ ಗಳ ಮುಖಾಂತರವೇ ನಡೆಯುತ್ತಿದೆ.  ಗ್ಯಾಸ್ ಬಿಲ್ ಕಟ್ಟಲು, ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್ ಎಲ್ಲದಕ್ಕೂ ಪ್ರತ್ಯೇಕವಾದ ಆ್ಯಪ್ ಗಳಿವೆ. ಅದೇ ರೀತಿ ಮನೆಯ ವಿದ್ಯುತ್ ಬಿಲ್ ಕಟ್ಟಲು ಕೂಡಾ ಹಲವು ಆ್ಯಪ್ ಗಳು ಲಭ್ಯವಿದೆ.

Advertisement

ಯಾವೆಲ್ಲಾ ಆ್ಯಪ್ ಗಳ ಮೂಲಕ ವಿದ್ಯುತ್ ಬಿಲ್ ಕಟ್ಟಬಹುದು?

ಮೊಬಿಕ್ವಿಕ್: ಜನರಿಗೆ ಮೊಬೈಲ್ ಮೂಲಕ ವಿದ್ಯುತ್ ಬಿಲ್ ಕಟ್ಟಲು ಮೊಬಿಕ್ವಿಕ್  ಆ್ಯಪ್ ಸಹಕಾರಿಯಾಗಲಿದೆ. ಮೊಬಿಕ್ವಿಕ್ ಖಾತೆಗೆ ಹಣವನ್ನು ಜಮಾ ಮಾಡುವ ಮೂಲಕ ವಿದ್ಯುತ್ ಬಿಲ್ ಅನ್ನು ಕಟ್ಟಬಹುದಾಗಿದೆ. ಮೊದಲು ಈ ಆ್ಯಪ್ ಅನ್ನು ಓಪನ್ ಮಾಡಿ ಸ್ಕ್ರಾಲ್ ಮಾಡಿದ ಕೂಡಲೇ,  ವಿದ್ಯುತ್ ಬಿಲ್ ಪಾವತಿ ಮಾಡುವ  ಆಯ್ಕೆ ಕಾಣಿಸುತ್ತದೆ. ನಂತರ ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಗ್ರಾಹಕರ  ಸಂಖ್ಯೆಯನ್ನು ನಮೂದಿಸಬೇಕು. ಆಗ ಸ್ಕ್ರೀನ್ ಮೇಲೆ ವಿದ್ಯುತ್ ಬಿಲ್ ನ ಮೊತ್ತ ಕಾಣಿಸುತ್ತದೆ. ನಂತರ ಪೇಮೆಂಟ್ ವಿಭಾಗಕ್ಕೆ ಹೋಗುವ ಮೂಲಕ ವಿದ್ಯುತ್ ಬಿಲ್ ಕಟ್ಟಬಹುದಾಗಿದೆ.

ಇದನ್ನೂ ಓದಿ:ಕ್ಷುಲ್ಲಕ ಕಾರಣಕ್ಕೆ ತಂದೆ ಮಗನ ಕೊಲೆ : ಪೊಲೀಸರಿಂದ ಮೂವರು ಆರೋಪಿಗಳ ಸೆರೆ

ಭೀಮ್ ಆ್ಯಪ್: ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಮಾಲಿಕತ್ವದ ಆ್ಯಪ್ ಇದಾಗಿದೆ. ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಬಳಕೆದಾರರು ಈ ಆ್ಯಪ್ ಅನ್ನು ಬಳಸಿಕೊಳ್ಳುವ ಮೂಲಕ ವಿದ್ಯುತ್ ಬಿಲ್ ಕಟ್ಟಬಹುದಾಗಿದೆ. ಭೀಮ್ ಆ್ಯಪ್ ಅನ್ನು ತೆರೆದಾಗ ಅಲ್ಲಿ  ಬಿಲ್ ಪಾವತಿಸುವ ಆಯ್ಕೆ ಕಾಣಿಸಿಕೊಳ್ಳುತ್ತದೆ. ಈ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಹೊಸ ಬಿಲ್ ಅನ್ನು ಹಾಗೂ ಬಾಕಿ ಇರುವ ಹಳೆಯ ಪಾವತಿಯನ್ನು ಕಟ್ಟಬಹುದಾಗಿದೆ.

Advertisement

ಪೇಟಿಯಂ: ಪೇಟಿಯಂ  ಆ್ಯಪ್, ವಿದ್ಯುತ್ ಬಿಲ್, ಮೊಬೈಲ್ ರೀಚಾರ್ಜ್, ಗ್ಯಾಸ್ ಬಿಲ್ ಒಳಗೊಂಡಂತೆ ಹಲವಾರು ಬಿಲ್ ಪಾವತಿಯ ಆಯ್ಕೆಗಳನ್ನು ಒಳಗೊಂಡಿದೆ. ಆ್ಯಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಪೇಟಿಯಂ  ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ  ಆ್ಯಪ್ ಅನ್ನು ಓಪನ್ ಮಾಡಿದಾಗ ಲಾಗ್ ಇನ್ ಆಯ್ಕೆ ಕೇಳುತ್ತದೆ. ನಂತರ ‘stay at home essentials’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.  ಆಗ ಎಲೆಕ್ಟ್ರಿಸಿಟಿ ಬಿಲ್ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡುವ ಮೂಲಕ ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಬಹುದಾಗಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಡಿವೈಎಸ್ಪಿ ರವಿಶಂಕರ್‌ಗೆ ರಾಷ್ಟ್ರಪತಿ ಪದಕ

ವಿದ್ಯುತ್ ಮಂಡಳಿ ವೆಬ್ ಸೈಟ್: ಈ ಎಲ್ಲಾ ಆ್ಯಪ್ ಗಳ ಹೊರತಾಗಿಯೂ ವಿದ್ಯುತ್ ಮಂಡಳಿಯ ವತಿಯಿಂದ ಅಧಿಕೃತವಾದ ವೆಬ್ ಸೈಟ್ ಲಭ್ಯವಿದೆ. ಭಾರತದಾದ್ಯಂತ  ಎಲ್ಲಾ ರಾಜ್ಯಗಳಲ್ಲಿಯೂ ಇದು ಲಭ್ಯವಿದೆ. ಈ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಹಣ ಪಾವತಿ ಮಾಡಬಹುದಾಗಿದೆ.

ಈ ಮೇಲೆ ತಿಳಿಸಿರುವ  ಆ್ಯಪ್ ಗಳನ್ನು ಬಳಸಿಕೊಳ್ಳುವ ಮೂಲಕ ಜನರು ಮನೆಯಲ್ಲಿಯೇ ಕುಳಿತು ವಿದ್ಯುತ್ ಬಿಲ್ ಅನ್ನು ಪಾವತಿಸಬಹುದಾಗಿದೆ. ಸ್ಮಾರ್ಟ್ ಪೋನ್ ಬಳಕೆದಾರರು ಪ್ಲೇ ಸ್ಟೋರ್ ಮೂಲಕ ಹಾಗೂ ಐಓಎಸ್ ಬಳಕೆದಾರರು ಆ್ಯಪ್ ಸ್ಟೋರ್ ಮೂಲಕ ಈ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next