Advertisement

ಆನ್‌ಲೈನ್‌ ಮೂಲಕ ಬಿಲ್‌ ಪಾವತಿಸುವುದು ಹೇಗೆ?

01:03 PM Dec 08, 2020 | Suhan S |

ಸ್ಮಾರ್ಟ್‌ಫೋನ್‌ ಬಳಸುವ ಅನೇಕರು ವಾಟ್ಸ್ಯಾಪ್‌, ಫೇಸ್‌ಬುಕ್‌ ಬಳಕೆಗೆ ಮಾತ್ರ ಅದರ ಬಳಕೆಯನ್ನು ಸೀಮಿತ ಗೊಳಿಸಿಕೊಂಡಿದ್ದಾರೆ. ಸ್ಮಾರ್ಟ್‌ ಫೋನ್‌ ಇದ್ದು, ಬ್ಯಾಂಕ್‌ ಅಕೌಂಟ್‌ ಹೊಂದಿದ್ದರೂ, ಮೊಬೈಲ್‌ ಫೋನ್‌ ರೀಚಾರ್ಜ್‌, ವಿದ್ಯುತ್‌ ಬಿಲ್, ಅನಿಲ ಅಡುಗೆ ಸಿಲಿಂಡರ್‌ಗೆ ಹಣ ಪಾವತಿ ಇತ್ಯಾದಿಗಳನ್ನು ಭೌತಿಕವಾಗಿಯೇ ಮಾಡುತ್ತಿದ್ದಾರೆ.

Advertisement

ಕ್ಯಾಶ್‌ಬ್ಯಾಕ್‌ ಕೂಡ ಉಂಟು! :  

ಸ್ವಲ್ಪ ಆಸಕ್ತಿ ವಹಿಸಿ ಆನ್‌ಲೈನ್‌ ಪಾವತಿ ಮಾಡುವ ವಿಧಾನವನ್ನು ತಿಳಿದುಕೊಂಡರೆ, ಮೊಬೈಲ್‌ನಲ್ಲಿಯೇ ಈ ಕೆಲಸಗಳನ್ನು ಮಾಡಿ ಕೊಳ್ಳಬಹುದು. ಆನ್‌ಲೈನ್‌ ಪಾವತಿಗಳನ್ನು ಮಾಡಲು ಈಗಂತೂ ಸಾಕಷ್ಟು ಆ್ಯಪ್‌ಗಳಿವೆ. ಅವುಗಳಲ್ಲಿ ಯಾವುದು ಸೂಕ್ತ ಎಂಬ ಪ್ರಶ್ನೆ ಏಳುತ್ತದೆ. ಅನೇಕ ಆನ್‌ ಲೈನ್‌ ಪಾವತಿಆ್ಯಪ್‌ಗಳನ್ನು ಬಳಸಿ ನೋಡಿದ ನಂತರ ಅನಿಸಿದ್ದು- ಎಲ್ಲಕ್ಕಿಂತ ಅಮೆಜಾನ್‌ ಪೇ ಬಳಸಲು ಸುಲಭ ಮಾತ್ರವಲ್ಲ, ಲಾಭದಾಯಕವೂ ಹೌದು. ಮೊಬೈಲ್, ಡಿಟಿ ಎಚ್‌ ರೀಚಾರ್ಜ್‌, ಗ್ಯಾಸ್‌ ಸಿಲಿಂಡರ್‌ ಬುಕಿಂಗ್‌ ಅಥವಾ ವಿದ್ಯುತ್‌ ಬಿಲ್‌ ಪಾವತಿ ಮಾಡಿದಾಗ ಇಲ್ಲಿ ನಿಮಗೆಕ್ಯಾಶ್‌ಬ್ಯಾಕ್‌ಕೂಡ ದೊರಕುತ್ತದೆ.

ಇದರ ಮೂಲಕ ಹೇಗೆ ಪಾವತಿ ಮಾಡುವುದು ಎಂದು ಇಲ್ಲಿ ಹಂತ ಹಂತದ ವಿವರ ನೀಡಲಾಗಿದೆ. ಮೊದಲಿಗೆ ನಿಮ್ಮ ಫೋನ್‌ನಲ್ಲಿ ಪ್ಲೇಸ್ಟೋರ್‌ಗೆ ಹೋಗಿ ಅಮೆಜಾನ್‌.ಇನ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ. ಸೈನ್‌ಅಪ್‌ ಆಗಲು ನಿಮ್ಮ ಫೋನ್‌ ನಂಬರ್‌ ಕೇಳುತ್ತದೆ. ಫೋನ್‌ ನಂಬರ್‌ ನಮೂದಿಸಿ, ಬಳಿಕ ಓಟಿಪಿ ಬರುತ್ತದೆ. ಅಮೆಜಾನ್‌ ಆ್ಯಪ್‌ಗಾಗಿ ಒಂದು ಪಾಸ್‌ವರ್ಡ್‌ ರಚಿಸಿಕೊಳ್ಳಿ. ನಿಮ್ಮ ಅಮೆಜಾನ್‌ ಆ್ಯಪ್‌ ಓಪನ್‌ ಮಾಡಲು ಪಾಸ್‌ ವರ್ಡ್‌ ನೆನಪಿಟ್ಟುಕೊಳ್ಳಿ.

ಸರಳ ಮತ್ತು ಸುಲಭ :

Advertisement

ಅಮೆಜಾನ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡ ಬಳಿಕ, ಅದನ್ನು ತೆರೆದಾಗ ಎಡಬದಿಯಲ್ಲಿ ಮೂರು ಪಟ್ಟೆಗಳುಕಾಣುತ್ತವೆ. ಅದನ್ನುಕ್ಲಿಕ್‌ ಮಾಡಿ, ಅಲ್ಲಿ ಯುವರ್‌ ಅಕೌಂಟ್‌ ಎಂದಿದೆ. ಅದರಲ್ಲಿ ಮ್ಯಾನೇಜ್‌ ಪೇಮೆಂಟ್‌ ಆಪ್ಷನ್ ಎಂದಿದೆ. ಅದನ್ನು ಆಯ್ಕೆ ಮಾಡಿ. ಅದರಲ್ಲಿ ಆಡ್‌ ಪೇಮೆಂಟ್‌ ಮೆಥಡ್‌ ಇದೆ. ಅದರಲ್ಲಿ ನಿಮ್ಮ ಬ್ಯಾಂಕಿನ ಡೆಬಿಟ್‌ ಕಾರ್ಡ್‌ (ಎಟಿಎಂಕಾರ್ಡ್‌) ಅಥವಾ ಕ್ರೆಡಿಟ್‌ ಕಾರ್ಡ್‌ ನಂಬರ್‌, ಅದರ ಎಕ್ಸ್ ಪೈರಿ ತಿಂಗಳು, ವರ್ಷ ನಮೂದಿಸಿ. ಈಗ ನಿಮ್ಮ ಡೆಬಿಟ್‌ ಅಥವಾಕ್ರೆಡಿಟ್‌ಕಾರ್ಡ್‌ ನಿಮ್ಮ ಅಮೆಜಾನ್‌ ಅಕೌಂಟ್‌ ನಲ್ಲಿದೆ. ನಿಮ್ಮ ಆನ್‌ಲೈನ್‌ ಪಾವತಿಗಳು ನಡೆಯುವುದು ಈ ಕಾರ್ಡ್‌ ಮೂಲಕ. ಹಾಗಾಗಿ ನಿಮ್ಮ ಬ್ಯಾಂಕ್‌ ಅಕೌಂಟಿನಲ್ಲಿ ನಿಮ್ಮ ಪಾವತಿಗಳಿಗೆ ಸಾಲುವಷ್ಟು ಹಣ ಇರಬೇಕು ಎಂಬುದು ನೆನಪಿರಲಿ. ಒಮ್ಮೆಕಾರ್ಡ್‌ ಸೇರಿಸಿದರೆ ಆಯಿತು. ಈಗ ನೀವು ರೀಚಾರ್ಜ್‌, ಬಿಲ್‌ ಪಾವತಿ ಮಾಡಲು ವೇದಿಕೆ ಸಿದ್ಧವಾಯಿತು.

ಸಿಲಿಂಡರ್‌ ಬುಕಿಂಗ್‌ ಹೇಗೆ?  :  

ಅಮೆಜಾನ್‌ ಆ್ಯಪ್‌ ತೆರೆದು,  ಅಮೆಜಾನ್‌ ಪೇ ವಿಭಾಗಕ್ಕೆಹೋಗಿ, ಅಲ್ಲಿ, ಗ್ಯಾಸ್‌ ಸಿಲಿಂಡರ್‌ ಎಂಬ ಆಯ್ಕೆಕಾಣುತ್ತದೆ.ಅದನ್ನು ಒತ್ತಿ, ಅದರಲ್ಲಿ ನಿಮ್ಮ ಕಂಪನಿ ಆಯ್ಕೆ ಮಾಡಿ. ಉದಾಹರಣೆಗೆ ಭಾರತ್‌ ಗ್ಯಾಸ್‌. ಅದನ್ನು ಆಯ್ಕೆಮಾಡಿದಾಗ ಎಲ್‌ಪಿಜಿ ಕಾರ್ಡ್‌ನಲ್ಲಿರುವ ನಂಬರ್‌ ಅನ್ನಾದರೂ ಹಾಕಬಹುದು. ಅಥವಾ ಅಲ್ಲಿಗೆ ನೀಡಿರುವ ನಿಮ್ಮ ಮೊಬೈಲ್‌ ನಂಬರನ್ನಾದರೂ ಹಾಕಬಹುದು. ಅದನ್ನು ಎಂಟರ್‌ ಮಾಡಿದ ತಕ್ಷಣ, ನಿಮ್ಮ ಹೆಸರು, ಗ್ಯಾಸ್‌ಏಜೆನ್ಸಿ ಹೆಸರು, ನೀವು ಪಾವತಿ ಮಾಡಬೇಕಾದ ಮೊತ್ತ ಬರುತ್ತದೆ.

ನಂತರ ಕಂಟಿನ್ಯೂ ಪೇ ಒತ್ತಿ. ಮುಂದಿನ ಪೇಜ್‌ನಲ್ಲಿ ನಿಮ್ಮ ಡೆಬಿಟ್/ಕ್ರೆಡಿಟ್‌ಕಾರ್ಡ್‌ ವಿವರ ಬರುತ್ತದೆ. ನಂತರ ನಿಮ್ಮ ಪಾವತಿಗಾಗಿ ನಿಮ್ಮ ಬ್ಯಾಂಕು ಮೊಬೈಲ್‌ಗೆ ಓಟಿಪಿ ಕಳಿಸುತ್ತದೆ. ಅದನ್ನು ಹಾಕಿ ಎಂಟರ್‌ಕೊಟ್ಟರೆ, ನಿಮ್ಮ ಪಾವತಿ ಪೂರ್ಣವಾಗುತ್ತದೆ. ಗ್ಯಾಸ್‌ ಸಿಲಿಂಡರ್‌ ಬುಕ್‌ಆಗುವ ಜೊತೆಗೆ, ಎರಡು ಮೂರು ದಿನದಲ್ಲಿ ನಿಮ್ಮಮನೆ ಬಾಗಿಲಿಗೆ ಸಿಲಿಂಡರ್‌ ಬರುತ್ತದೆ. ಆಗ ನೀವುಚಿಲ್ಲರೆ ಹುಡುಕುವ ಅಗತ್ಯವಿಲ್ಲ! ಹೀಗೆ ಆನ್‌ಲೈನಲ್ಲಿಪಾವತಿ ಮಾಡಿದಾಗ, ಪ್ರತ್ಯೇಕವಾಗಿ ಕರೆ ಮಾಡಿಸಿಲಿಂಡರ್‌ ಬುಕ್‌ ಮಾಡುವ ಅಗತ್ಯವೂ ಇರುವುದಿಲ್ಲ. ಇದೇ ರೀತಿ ಅಮೆಜಾನ್‌ ಪೇಗೆ ಹೋಗಿ ವಿದ್ಯುತ್‌ ಬಿಲ್, ಮೊಬೈಲ್‌ ರೀಚಾರ್ಜ್‌, ಫೋನ್‌ ಬಿಲ್‌ ಇತ್ಯಾದಿಗಳನ್ನು ಪಾವತಿಸಬಹುದು. ಕೆಲವೊಂದಕ್ಕೆಕ್ಯಾಶ್‌ ಬ್ಯಾಕ್‌ ದೊರಕಿ, ನಿಮ್ಮ ಅಮೆಜಾನ್‌ ಪೇ ವಾಲೆಟ್‌ಗೆ ಆ ಹಣ ಬರುತ್ತದೆ.

 

-ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next