Advertisement

ಸ್ಪಾರ್ಕ್‌ ಪ್ಲಗ್‌ ನಿರ್ವಹಣೆ ಹೇಗೆ?

12:59 PM Jul 06, 2018 | |

ಪೆಟ್ರೋಲ್‌ ವಾಹನಗಳು ಚಾಲೂ ಆಗಬೇಕಾದರೆ ಸ್ಪಾರ್ಕ್‌ ಪ್ಲಗ್‌ ಅವಶ್ಯ. ಸ್ಪಾರ್ಕ್‌ ಪ್ಲಗ್‌ನಲ್ಲಿ ಕಿಡಿ ಹಾರುವುದರ ಮೂಲಕ ಪೆಟ್ರೋಲ್‌ ಅನ್ನು ದಹನ ಮಾಡಿ, ಎಂಜಿನ್‌ ಒಳಗಿನ ಪಿಸ್ಟನ್‌ ಚಲಿಸುವಂತೆ ಮಾಡುತ್ತದೆ. ಆದ್ದರಿಂದ ಸ್ಪಾರ್ಕ್‌ ಪ್ಲಗ್‌ ಇಲ್ಲದೇ ವಾಹನ ಸ್ಟಾರ್ಟ್‌ ಆಗಲಾರದು, ಓಡದು. ಪೆಟ್ರೋಲ್‌ ಎಂಜಿನ್‌ನ ಕಾರು /ಬೈಕ್‌ಗಳಲ್ಲಿ ಈ ವ್ಯವಸ್ಥೆ ಇರುತ್ತದೆ.

Advertisement

ಸ್ಪಾರ್ಕ್‌ ಪ್ಲಗ್‌ ಸರಿಯಿಲ್ಲದಿದ್ದರೆ?
ಸ್ಪಾರ್ಕ್‌ ಪ್ಲಗ್‌ನಲ್ಲಿ ಕಿಡಿಗಳು ಸರಿಯಾಗಿ ಹಾರುತ್ತಿರಬೇಕು. ಒಂದು ವೇಳೆ ಸಾಕಷ್ಟು ಕಿಡಿಗಳು ಹಾರುತ್ತಿಲ್ಲ ಎಂದಾದರೆ ನಿಮ್ಮ ಕಾರು, ಬೈಕ್‌ ಸ್ಟಾರ್ಟ್‌ ಆಗುವುದಿಲ್ಲ. ಚಾಲನೆ ಸಾಧ್ಯವಿಲ್ಲ. ಕೆಟ್ಟ ಸ್ಪಾರ್ಕ್‌ ಪ್ಲಗ್‌ನಿಂದಾಗಿ ಸ್ಟಾರ್ಟ್‌ ಮಾಡುವುದಕ್ಕೆ ವಿಪರೀತ ಸಮಸ್ಯೆಗಳು, ಉತ್ತಮ ಎಕ್ಸಲರೇಶನ್‌ಗೆ ಸಮಸ್ಯೆಯಾಗುತ್ತದೆ. ಜತೆಗೆ ಸ್ಪಾರ್ಕ್‌ ಪ್ಲಗ್‌ ಹಳತಾಗಿದ್ದರೆ ಎಂಜಿನ್‌ನ ಸಾಮರ್ಥ್ಯದಷ್ಟು ಶಕ್ತಿ ಪಡೆಯಲೂ ಸಾಧ್ಯವಿಲ್ಲ. ಜತೆಗೆ ವಾಹನದ ಮೈಲೇಜ್‌ ಕುಂಠಿತಗೊಳ್ಳಲು ಕಾರಣವಾಗುತ್ತದೆ.

ಸಮಸ್ಯೆ ಗುರುತಿಸುವುದು ಹೇಗೆ?
ಸ್ಪಾರ್ಕ್‌ ಪ್ಲಗ್‌ ಸಮಸ್ಯೆ ಇದ್ದರೆ ನಿಮ್ಮ ವಾಹನ ಬೇಗನೆ ಸ್ಟಾರ್ಟ್‌ ಆಗದು. ಎಂಜಿನ್‌ ತಂಪಾಗಿದ್ದರಂತೂ ಹೆಚ್ಚು ಸಮಸ್ಯೆಯಿರುತ್ತದೆ. ಜತೆಗೆ ಸಾಕಷ್ಟು ಪಿಕ್‌ಅಪ್‌ ಸಿಗುತ್ತಿಲ್ಲ. ಎಕ್ಸಲರೇಶನ್‌ ಮಧ್ಯೆ ಆಗಾಗ್ಗೆ ತೊಂದರೆಯಾಗುತ್ತಿದೆ ಎಂದರೆ ಸ್ಪಾರ್ಕ್‌ ಪ್ಲಗ್‌ ಸಮಸ್ಯೆ ಇರಬಹುದು.

ಬದಲಾವಣೆ ಯಾವಾಗ ಮಾಡಬೇಕು?
ಸ್ಪಾರ್ಕ್‌ ಪ್ಲಗ್‌ ಅನ್ನು ವಾಹನದ ಎಂಜಿನ್‌ನಿಂದ, ಬೈಕ್‌ ಗಳಲ್ಲಿ ಎಂಜಿನ್‌ ಸಿಲಿಂಡರ್‌ ಹೆಡ್‌ನ‌ಲ್ಲಿದ್ದು, ತೆಗೆದು ಪರೀಕ್ಷಿಸಬೇಕು. ಇದರಲ್ಲಿ ಕಾರ್ಬನ್‌ ಹಿಡಿದು ವಿಪರೀತ ಕಪ್ಪಾಗಿದ್ದರೆ, ಸರಿಯಾಗಿ ಸ್ಪಾರ್ಕ್‌ ಆಗುತ್ತಿಲ್ಲ ಎಂದಾದರೆ ಬದಲಿಸಬೇಕಾತ್ತದೆ. ಇದರ ಹೊರತಾಗಿ ಕಾರ್ಬನ್‌ ಅನ್ನು ಮರಳು ಕಾಗದದಲ್ಲಿ ಶುಚಿಗೊಳಿಸಿ, ಪ್ಲಗ್‌ ಹೆಡ್‌ ಅಂತರ 0.5 ಎಂ.ಎಂ ಒಳಗಿರುವಂತೆ ನೋಡಿಕೊಳ್ಳಬೇಕು.

ಪರೀಕ್ಷಿಸುವುದು ಹೇಗೆ?
ವಾಹನಗಳಲ್ಲಿನ ಸ್ಪಾರ್ಕ್‌ ಪ್ಲಗ್‌ ಎಂಜಿನ್‌ ಭಾಗದಿಂದ ತೆಗೆದು, ಸ್ಪಾರ್ಕ್‌ ಪ್ಲಗ್‌ ಕೇಬಲ್‌ಗೆ ಅಳವಡಿಸಿ. ಬಳಿಕ ಎಂಜಿನ್‌ ಸ್ಪಾರ್ಟ್‌ ಮಾಡಿ ನ್ಯೂಟ್ರಲ್‌ ಭಾಗಕ್ಕೆ ಹಿಡಿಯಿರಿ (ಕಬ್ಬಿಣದ ಫ್ರೇಮ್, ಎಂಜಿನ್‌ ಭಾಗ ಇತ್ಯಾದಿ) ಆಗ ಸ್ಪಾರ್ಕ್‌ ಆಗುತ್ತಿದ್ದರೆ ಪ್ಲಗ್‌ ಚೆನ್ನಾಗಿದೆ ಎಂದರ್ಥ. ಸ್ಪಾರ್ಕ್‌ ಆಗದೇ ಇದ್ದರೆ ಬದಲಾವಣೆ ಸೂಕ್ತ. 

Advertisement

ಸ್ಪಾರ್ಕ್‌ ಪ್ಲಗ್‌ ವಿಧ
· ತಾಮ್ರದ ಸ್ಪಾರ್ಕ್‌ ಪ್ಲಗ್‌ಗಳು: ಸಾಮಾನ್ಯವಾಗಿ ಎಲ್ಲ ವಾಹನಗಳಲ್ಲಿ ಬಳಕೆಯಾಗುತ್ತವೆ. ದಪ್ಪನೆಯ ತಾಮ್ರದಿಂದ ಇದನ್ನು ಮಾಡುತ್ತಾರೆ. ಇದಲ್ಲಿನ ಲೆಡ್‌ ನಿಕಲ್‌ ಅಲಾಯ್‌ ಆಗಿದ್ದು ದೊಡ್ಡದಿರುತ್ತದೆ. ಮತ್ತು ಸ್ಪಾರ್ಕ್‌ನಿಂದಾಗಿ ಬೇಗನೆ ಸವೆತ ಉಂಟಾಗುತ್ತವೆ. 

· ಇರಿಡಿಯಂ ಸ್ಪಾರ್ಕ್‌ ಪ್ಲಗ್‌ಗಳು: ಇದು ಕಡಿಮೆ ವೋಲ್ಟೇಜ್‌ ಪಡೆದರೂ ಹೆಚ್ಚಿನ ಎಲೆಕ್ಟ್ರಿಕ್‌ ವಿದ್ಯುತ್‌ ಅನ್ನು ನೀಡುತ್ತದೆ. ಇದರ ಬಾಳಿಕೆಯೂ ಹೆಚ್ಚು, ಲೆಡ್‌ ಕೂಡ ಸಪೂರವಿದ್ದು, ಹೆಚ್ಚಿನ ಶಕ್ತಿ ಬಯಸುವ ವಾಹನಗಳಿಗೆ ಸೂಕ್ತ. ಬೆಲೆ ದುಬಾರಿಯಾಗಿರುತ್ತದೆ.

· ಪ್ಲಾಟಿನಂ ಸ್ಪಾರ್ಕ್‌ ಪ್ಲಗ್‌ಗಳು: ತಾಮ್ರದ ಸ್ಪಾರ್ಕ್‌ ಪ್ಲಗ್‌ಗಳಂತೆಯೇ ಪ್ಲಾಟಿನಂ ಸ್ಪಾರ್ಕ್‌ ಪ್ಲಗ್‌ಗಳು ಇದ್ದರೂ,
ಇದರಲ್ಲಿ ಮಧ್ಯದ ಎಲೆಕ್ಟ್ರೋಡ್‌ನ‌ಲ್ಲಿ ಪ್ಲಾಟಿನಂ ಲೋಹದ ಡಿಸ್ಕ್ ಇರುತ್ತದೆ. ಇದರಿಂದ ಬೇಗನೆ ಸವೆತ ಉಂಟಾಗದು ಮತ್ತು ಸ್ಪಾರ್ಕ್‌ ಸಾಮರ್ಥ್ಯವೂ ಅತಿ ಹೆಚ್ಚಿರುತ್ತದೆ. ಬೆಲೆಯೂ ತೀರ ದುಬಾರಿ.

 ಈಶ

Advertisement

Udayavani is now on Telegram. Click here to join our channel and stay updated with the latest news.

Next