Advertisement
ಈಗೀನ ಮಕ್ಕಳು ಸ್ನ್ಯಾಕ್ಸ್ ತಿಂಡಿ ತುಂಬಾನೇ ಇಷ್ಟಪಡುತ್ತಾರೆ.ಅದರಲ್ಲೂ ವಿವಿಧ ಬಗೆಯ ತಿಂಡಿಗಳೆಂದರೆ ಅವರಿಗೆ ಪಂಚಪ್ರಾಣ. ನಿಮ್ಮ ಮಕ್ಕಳೂ ನಿಮಗೆ ಹೊಸ ರುಚಿಯ ತಿಂಡಿಬೇಕೆಂದು ನಿಮಗೆ ಕೇಳುತ್ತಿದ್ದರೆ ಇಲ್ಲೊಂದು ರೆಸಿಪಿ ಇದೆ ಅದುವೇ ವೆಜ್ ಗೋಲ್ಡ್ ಕಾಯಿನ್.
ಬೇಯಿಸಿದ ಆಲೂಗಡ್ಡೆ-3,ಈರುಳ್ಳಿ-2(ಸಣ್ಣಗೆ ಹೆಚ್ಚಿದ್ದು), ತುರಿದಿಟ್ಟ ಕ್ಯಾರೆಟ್-3ಚಮಚ, ಕ್ಯಾಪ್ಸಿಕಂ-ಸ್ವಲ್ಪ, ಹಸಿಮೆಣಸು-2,ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಸೋಯಾ ಸಾಸ್-2ಚಮಚ ಬ್ರೆಡ್ಡಿನ ಚೂರು, ಕಾರ್ನ್ -2 ಚಮಚ, ಬಿಳಿ ಎಳ್ಳು-3ಚಮಚ, ಪೆಪ್ಪರ್-ಅರ್ಧ ಚಮಚ, ಟೊಮೆಟೋ ಸಾಸ್, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
Related Articles
-ಮೊದಲಿಗೆ ಒಂದು ಬೌಲ್ ಗೆ ಬೇಯಿಸಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ತುರಿದಿಟ್ಟ ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಕಾರ್ನ್ ಹಾಕಿ ಸರಿಯಾಗಿ ಮಿಕ್ಸ್ ಮಾಡಿ.
-ನಂತರ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಪೆಪ್ಪರ್ ಪುಡಿ, ಕೊತ್ತಂಬರಿ ಸೊಪ್ಪು , ಸೋಯಾ ಸಾಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಪುನಃ ಮಿಕ್ಸ್ ಮಾಡಿಕೊಳ್ಳಿ.
-ತದನಂತರ ದುಂಡಗಿನ ಆಕಾರ ಮಾಡಿಕೊಳ್ಳಲು ಗ್ಲಾಸ್ ನ್ನು ಬಳಸಿ ಬ್ರೆಡ್ ಸ್ಲೈಸ್ ನ್ನು ದುಂಡಗಿನ ತುಂಡುಗಳಾಗಿ ಕಟ್ ಮಾಡಿಕೊಳ್ಳಿ.
-ಆಮೇಲೆ ಒಂದೊಂದೇ ಕಟ್ ಮಾಡಿದ ಬ್ರೆಡ್ ಸ್ಲೈಸ್ ತೆಗೆದು ಅದರ ಮೇಲೆ ಆಲೂ ಮಿಶ್ರಣವನ್ನು ಸವರಿಕೊಳ್ಳಿರಿ.
-ಆ ಬಳಿಕ ಆಲೂಮಿಶ್ರಣದ ಮೇಲೆ ಬಿಳಿ ಎಳ್ಳಿನೊಂದಿಗೆ ಕೋಟ್ ಮಾಡಿಕೊಳ್ಳಿ.
Advertisement
-ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಈ ಬ್ರೆಡ್ ಮಿಶ್ರಣವನ್ನು ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಫ್ರೈ ಮಾಡಿದರೆ ವೆಜ್ ಗೋಲ್ಡ್ ಕಾಯಿನ್ ಟೊಮೆಟೋ ಸಾಸ್ ಜೊತೆ ತಿನ್ನಲು ಸಿದ್ಧ.
*ಶ್ರೀರಾಮ್ ನಾಯಕ್