Advertisement
ಮೊಟ್ಟೆ ತಿನ್ನಲು ಇಷ್ಟಪಡದೇ ಇರುವವರು ಪನ್ನೀರ್ ಬುರ್ಜಿ ರೆಸಿಪಿಯನ್ನು ಮನೆಯಲ್ಲಿ ಸಿಂಪಲ್ ಆಗಿ ಮಾಡಿ ನೋಡಿ. ಪನ್ನೀರ್ ಬುರ್ಜಿಯನ್ನು ರೋಟಿ, ನಾನ್ ,ಚಪಾತಿ ಅಲ್ಲದೇ ಊಟದ ಜೊತೆಗೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
Related Articles
ಬೇಕಾಗುವ ಸಾಮಗ್ರಿಗಳು
ಪನ್ನೀರ್ 2 ಕಪ್(ಪುಡಿ ಮಾಡಿಟ್ಟ) ,ಈರುಳ್ಳಿ 2, ಟೊಮೆಟೊ 1, ಜೀರಿಗೆ 1 ಚಮಚ, ತೆಂಗಿನ ಎಣ್ಣೆ 2 ಚಮಚ, ಹಸಿಮೆಣಸಿನ ಕಾಯಿ 4, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಅಚ್ಚ ಖಾರದ ಪುಡಿ ಅರ್ಧ ಚಮಚ, ಅರಿಶಿನ ಪುಡಿ ಕಾಲು ಚಮಚ, ಗರಂ ಮಸಾಲ ಪುಡಿ ಅರ್ಧ ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
Advertisement
ತಯಾರಿಸುವ ವಿಧಾನಒಂದು ದೊಡ್ಡ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ , ಹಸಿಮೆಣಸು, ಜೀರಿಗೆ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿರಿ. ಈರುಳ್ಳಿ ಸ್ವಲ್ಪ ಕೆಂಪಾಗಾಗುವವರೆಗೆ ಹುರಿಯಿರಿ. ತದನಂತರ ಹಚ್ಚಿದ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಹುರಿಯಿರಿ. ಆ ಮೇಲೆ ಅಚ್ಚ ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸಣ್ಣ ಉರಿಯಲ್ಲಿ 1ರಿಂದ 2 ನಿಮಿಷ ಹಾಗೇ ಮಸಾಲೆಯನ್ನು ಹುರಿಯಿರಿ. ಆ ಮೇಲೆ ಪುಡಿ ಮಾಡಿಟ್ಟುಕೊಂಡ ಪನ್ನೀರ್ ಹಾಕಿರಿ. ಪನ್ನೀರ್ ಪೂರ್ತಿ ಮೆತ್ತಗಾಗಿ ಹೋಗದಂತೆ ನಿಧಾನವಾಗಿ ಕೈಯ್ನಾಡಿಸಿರಿ. ಸಣ್ಣ ಉರಿಯಲ್ಲಿ 3 ರಿಂದ 4 ನಿಮಿಷ ಹಾಗೇ ಬಿಡಿ.ಪನ್ನೀರನ್ನು ಅತಿಯಾಗಿ ಹುರಿಯಬೇಡಿ ಹಾಗೆ ಮಾಡಿದರೆ ಪನ್ನೀರ್ ಗಟ್ಟಿಯಾಗಿ ಬಿಡುತ್ತದೆ. ನಂತರ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರೆಸಿದರೆ ರುಚಿಕರವಾದ ಪನ್ನೀರ್ ಬುರ್ಜಿ ಸವಿಯಲು ಸಿದ್ಧ.
ಬೇಕಾಗುವ ಸಾಮಾಗ್ರಿಗಳು:
ಮೈದಾ 1/2 ಕೆ.ಜಿ,ಹಾಲಿನ ಪುಡಿ 2 ಚಮಚ,ಅಡುಗೆ ಸೋಡಾ ಸ್ವಲ್ಪ ,ಮೊಸರು 1ಕಪ್ ,ಬೆಣ್ಣೆ , ಉಪ್ಪು ರುಚಿಗೆ ತಕ್ಕಷ್ಟು ತಯಾರಿಸುವ ವಿಧಾನ:
ಮೈದಾ ಹಿಟ್ಟನ್ನು ಚೆನ್ನಾಗಿ ಜರಡಿ ಇಟ್ಟುಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಯಲ್ಲಿ ಮೈದಾ ಹಿಟ್ಟು, ಹಾಲಿನ ಪುಡಿ, ಅಡುಗೆ ಸೋಡಾ, ಮೊಸರು, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಬೇಕಿದ್ದರೆ ಸ್ವಲ್ಪ ನೀರನ್ನು ಹಾಕಿಕೊಳ್ಳಬಹುದು. ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲಸಿ ಸುಮಾರು 2-3 ಗಂಟೆಗಳ ಕಾಲ ಹಾಗೆ ಇಡಿ. ಆಮೇಲೆ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಂಡು ಚಪಾತಿಯಂತೆ ಲಟ್ಟಿಸಿ ಬೆಣ್ಣೆಯಿಂದ ಕಾಯಿಸಿದರೆ ಬಿಸಿಬಿಸಿಯಾದ ಮೃದುವಾದ ನಾನ್ ಸವಿಯಲು ಸಿದ್ಧ .