Advertisement

ಟಿಕ್ ಟಾಕ್ ನಲ್ಲಿ ಹಣ ಮಾಡುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ

09:55 AM Nov 24, 2019 | Mithun PG |

ನವದೆಹಲಿ: ಜನಪ್ರಿಯ ಟಿಕ್ ಟಾಕ್ ಆ್ಯಪ್ ದೇಶಾದ್ಯಂತ ಅಪಾರ ಬಳಕೆದಾರರನ್ನು ಹೊಂದಿದೆ. ಯುವ ಜನಾಂಗ ಸೇರಿದಂತೆ ಮಧ್ಯವಯಸ್ಕರು ಕೂಡ ಈ ಆ್ಯಪ್ ನಲ್ಲಿ  ಜನಪ್ರಿಯತೆ ಗಳಿಸಿಕೊಂಡಿದ್ದು, ಈಗ ಟಿಕ್ ಟಾಕ್ ತನ್ನ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು ಹಣಗಳಿಸುವ ಮಾರ್ಗವನ್ನು ಕೂಡ ತೋರಿಸಿದೆ.

Advertisement

ಪ್ರತಿನಿತ್ಯ ಕೋಟ್ಯಾಂತರ ವಿಡಿಯೋಗಳು ಟಿಕ್ ಟಾಕ್ ನಲ್ಲಿ ಅಪ್ಲೋಡ್ ಆಗುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗುತ್ತಿದೆ. ಈ ಹಿನ್ನಲೆಯಲ್ಲಿ ಟಿಕ್ ಟಾಕ್ ತನ್ನ ಬಳಕೆದಾರರಿಗೆ ಹಣ ಗಳಿಸುವ ಅವಕಾಶ ಮಾಡಿಕೊಟ್ಟಿದೆ. ಇಂದು ಅನೇಕ ಕಂಪೆನಿಗಳ ಜಾಹೀರಾತುಗಳು ಟಿಕ್ ಟಾಕ್ ನಲ್ಲಿ ರಾರಾಜಿಸುತ್ತಿದೆ. ಇತ್ತೀಚಿಗೆ ಐಟೆಲ್ ಕಂಪೆನಿ  ಅಭಿಯಾನವೊಂದು ಕೈಗೊಂಡು ಆ್ಯಶ್ ಟ್ಯಾಗ್ ಬಳಸಿ ಹಾಡನ್ನು ಪ್ರದರ್ಶಿಸಲು ಅವಕಾಶ ನೀಡಿತ್ತು. ಇದಕ್ಕೆ ಪ್ರತಿಯಾಗಿ ಹಣವನ್ನು ಪಾವತಿಸಿದೆ. ಮಾತ್ರವಲ್ಲದೆ ಬಿಂಗೋ, ಅಮೇಜ್​ಫಿಟ್, ಮೂವ್​ ಕಂಪೆನಿಗಳು ಇಂತಹ ಹಲವು  ಅಭಿಯಾನವನ್ನು ಕೈಗೊಂಡು, ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ಕಲ್ಪಿಸಿದೆ.

ಆದರೇ ಗಮನಿಸಬೇಕಾದ ವಿಷಯವೆಂದರೇ ಟಿಕ್​ಟಾಕ್​ನಲ್ಲಿ ಎಲ್ಲಾ ಬಳಕೆದಾರರಿಗೆ ಹಣಗಳಿಸಲು ಸಾಧ್ಯವಾಗುವುದಿಲ್ಲ. 1 ಲಕ್ಷಕ್ಕಿಂತ ಅಧಿಕ ಫಾಲೊವರರ್ಸ್​ ಹೊಂದಿರುವ ಬಳಕೆದಾರ ಕಂಪನಿ ಸಂಪರ್ಕಿಸಿ ಅದರ ಪರ ವಿಡಿಯೋ ಅಪ್ಲೋಡ್​ ಮಾಡಬೇಕು. ಅದಕ್ಕೆ ಪ್ರತಿಯಾಗಿ ಹಣ ಪಾವತಿಯಾಗಲಿದೆ  ಎಂಬ ಮಾಹಿತಿ  ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next