Advertisement
ತ್ವಚೆಗೆ ಹಸಿ ಹಾಲನ್ನು ಹಚ್ಚುವುದರಿಂದ ಲಾಭ ಪಡೆಯಬಹುದು. ಹಾಲಿನಿಂದ ತಯಾರಿಸಿದ ವಿವಿಧ ರೀತಿಯ ಫೇಸ್ ಪ್ಯಾಕ್‌ಗಳು ಚರ್ಮದ ಕಲ್ಮಶಗಳನ್ನು ತೆಗೆದು ಹಾಕಿ ಮುಖವನ್ನು ಕಾಂತಿಯುತವಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತಮ ಫಲಿತಾಂಶ ಪಡೆಯಲು ಹಸಿ ಹಾಲನ್ನು ತ್ವಚೆಗೆ ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಅರ್ಧ ಕಪ್ ಹಾಲಿಗೆ ಎರಡು ಚಮಚ ಜೇನುತುಪ್ಪ ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅದನ್ನು ಒಣಗಲು ಬಿಡಿ, ನಂತರ ಅದನ್ನು ಕೈಗಳಿಂದ ಉಜ್ಜಿ ತೆಗಿಯಿರಿ. ಈ ಫೇಸ್‍ಪ್ಯಾಕ್ ಮುಖದ ಮೇಲಿನ ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಹಸಿ ಹಾಲು, ಹಿಟ್ಟು ಫೇಸ್‍ಪ್ಯಾಕ್:
ಅತೀ ಒಣ ತ್ವಚೆ ಇರುವವರು ಹೊಳಪನ್ನು ಮರಳಿ ಪಡೆಯಲು ಹಸಿ ಹಾಲು- ಹಿಟ್ಟಿನ ಫೇಸ್ ಪ್ಯಾಕ್ ಹಚ್ಚಿಕೊಳ್ಳಬಹುದು. 2 ಚಮಚ ಬೇಳೆ ಹಿಟ್ಟಿಗೆ ಹಸಿ ಹಾಲು ಮತ್ತು ರೋಸ್ ವಾಟರ್ ಮಿಶ್ರಣ ಮಾಡಿ. ಮಿಶ್ರಣವನ್ನು ಮುಖದ ಮೇಲೆ 10 ರಿಂದ 15 ನಿಮಿಷಗಳ ಕಾಲ ಇಟ್ಟುಕೊಂಡ ನಂತರ, ಮುಖವನ್ನು ತೊಳೆಯಬೇಕು.
Related Articles
ಹಸಿ ಹಾಲಿಗೆ ಅರಿಶಿನ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಇದು ಮುಖದಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಿ ತ್ವಚೆಯನ್ನು ಕಾಂತಿಯುತವಾಗಿಸುತ್ತದೆ. ಈ ಮಿಶ್ರಣವನ್ನು ಇದನ್ನು ಹಚ್ಚಿ 20 ನಿಮಿಷಗಳ ನಂತರ ಮುಖ ತೊಳೆಯಿರಿ.
Advertisement
ಹಾಲು, ಕೇಸರಿ: ಮುಖಕ್ಕೆ ನೈಸರ್ಗಿಕ ಹೊಳಪನ್ನು ತರಲು ಕೇಸರಿ -ಹಾಲು ಫೇಸ್ ಪ್ಯಾಕ್ ಉತ್ತಮ. ಹಸಿ ಹಾಲಿಗೆ ಕೇಸರಿ ಸೇರಿಸಿ ಚರ್ಮಕ್ಕೆ ಹಚ್ಚಬೇಕು. ಹೀಗೆ ಮಾಡುವುದರಿಂದ ತ್ವಚೆಗೆ ಹಲವಾರು ಪ್ರಯೋಜನಗಳಿವೆ. ಆದರೆ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷ ಇಟ್ಟು ತೊಳೆಯಿರಿ. ಹಸಿ ಹಾಲಿನಿಂದ ಮಸಾಜ್ ಮಾಡಿ :
ಚರ್ಮವನ್ನು ಹಸಿ ಹಾಲಿನಿಂದ ಮಸಾಜ್ ಮಾಡಬಹುದು. ಹತ್ತಿಯನ್ನು ಹಸಿ ಹಾಲಿನಲ್ಲಿ ನೆನೆಸಿ ಅದನ್ನು ಮುಖದ ಮೇಲೆ ಹಚ್ಚಿ. ನಂತರ ಕೈಗಳಿಂದ ನಿಧಾನವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ತ್ವಚೆಯ ರಕ್ತ ಸಂಚಾರ ಚೆನ್ನಾಗಿ ಆಗುವುದಲ್ಲದೆ ಮೈಬಣ್ಣವೂ ಸುಧಾರಿಸುತ್ತದೆ. ಹಾಲನ್ನು ನೈಸರ್ಗಿಕ ಕ್ಲೆನ್ಸರ್ ಅಗಿಯು ಬಳಸಬಹುದು. ಮುಖ ಶುದ್ಧೀಕರಿಸಲು ಹಸಿ ಹಾಲನ್ನು ಬಳಸುವುದು ಪ್ರಯೋಜನಕಾರಿ. ಹಸಿ ಹಾಲು ತೆಗದುಕೊಂಡು ಅದನ್ನು ಮುಖಕ್ಕೆ ಮಸಾಜ್ ಮಾಡಿ. ಮುಖದಿಂದ ಕೊಳೆ ತೆಗೆದು ಹಾಕುತ್ತದೆ. ಚರ್ಮವನ್ನು ಪೋಷಿಸುತ್ತದೆ ಮತ್ತು ಮಾಯಿಶ್ಚರೈಸ್ ಆಗಿಡುತ್ತದೆ. ಕಲ್ಮಶಗಳಿಂದಾಗಿ ತ್ವಚೆಯ ರಂಧ್ರ ಮುಚ್ಚಿಹೋಗುವುದನ್ನು ತಡೆಯುತ್ತದೆ. ಫೇಸ್ ಪ್ಯಾಕ್ ನ ಕೆಲ ಪ್ರಯೋಜನಗಳು: – ಚರ್ಮದ ತುರಿಕೆ ಹೋಗಲಾಡಿಸುತ್ತದೆ
ಒಣ ಚರ್ಮ ಹೊಂದಿರುವವರು ಹೆಚ್ಚಾಗಿ ತುರಿಕೆ ಸಮಸ್ಯೆ ಅನುಭವಿಸುತ್ತಾರೆ. ಅವರು ಚರ್ಮದ ತುರಿಕೆ, ಶುಷ್ಕತೆ, ನಿರ್ಜೀವ ಚರ್ಮಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಒಣ ತ್ವಚೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. – ಕಪ್ಪು ಕಲೆ ನಿವಾರಣೆ:
ಹಾಲಿನ ಕೆನೆಯನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುವುದರಿಂದ ಬಿಸಿಲು ಮತ್ತು ಮೊಡವೆಗಳಿಂದ ಉಂಟಾಗುವ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಲಿನ ಕೆನೆಯಲ್ಲಿರುವ ವಿಟಮಿನ್ ಮತ್ತು ಪ್ರೋಟೀನ್ ಹೊಸ ಚರ್ಮದ ಕೋಶಗಳ ರಚನೆಗೆ ಉತ್ತೇಜಿಸುತ್ತದೆ. ಅಲ್ಲದೆ ಸತ್ತ ಚರ್ಮದ ಕೋಶಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. – ತ್ವಚೆ ಮೃದುವಾಗಲು:
ಹಾಲಿನ ಕೆನೆಯಲ್ಲಿ ಮಾಯಿಶ್ಚರೈಸಿಂಗ್ ಗುಣ ಇದೆ. ಹಾಗಾಗಿ ಇದು ಮುಖದ ಚರ್ಮವನ್ನು ಮೃದುಗೊಳಿಸುತ್ತದೆ. ಹಾಲಿನ ಕೆನೆ, ಅರಿಶಿಣ ಮತ್ತು ಹಾಲನ್ನು ನಿಯಮಿತವಾಗಿ ಮುಖದ ಮೇಲೆ ಸಮವಾಗಿ ಹಚ್ಚಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ನೀರಿನಿಂದ ತೊಳೆಯದೆ ಕೈಯಿಂದ ಒರೆಸಿಕೊಳ್ಳಬೇಕು. – ಮೊಡವೆ ಸಮಸ್ಯೆಗೆ ಪರಿಹಾರ:
ಹಾಲಿನ ಕೆನೆ ದೊಡ್ಡ ರಂಧ್ರ ಮತ್ತು ಮೊಡವೆ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಹಾಲಿನ ಕೆನೆಯನ್ನು ಮುಖದ ಮೇಲೆ ಹಚ್ಚಿ 15 ನಿಮಿಷ ಬಿಟ್ಟು ನೀರಿನಿಂದ ತೊಳೆಯಬೇಕು. ಆದ್ದರಿಂದ ಮೊಡವೆ ಕಡಿಮೆ ಮಾಡುವುದಲ್ಲದೆ ರಂದ್ರಗಳನ್ನು ಬಿಗಿಗೊಳಿಸುತ್ತದೆ. – ಕಾವ್ಯಶ್ರೀ