Advertisement

ಬ್ಯಾಟರಿ ನಿರ್ವಹಣೆ ಹೇಗೆ ?

01:40 AM Jul 12, 2019 | sudhir |

ಕಾರಿನ ಬ್ಯಾಟರಿ ಪ್ರಮುಖ ವಸ್ತು. ಕಾರು ಸ್ಟಾರ್ಟ್‌ ಆಗಬೇಕಾದರೆ, ಸುಸ್ಥಿತಿಯಲ್ಲಿರಬೇಕಾದ್ದು ಅಗತ್ಯ. ಇದರ ನಿರ್ವಹಣೆ ಮಾಡುವುದರಿಂದ ಸ್ಟಾರ್ಟಿಂಗ್‌ ಸಮಸ್ಯೆ ಇತ್ಯಾದಿಗಳನ್ನು ಬಹಳಷ್ಟು ಕಡಿಮೆಗೊಳಿಸಬಹುದು. ಕಾಲಕಾಲಕ್ಕೆ ನಿರ್ವಹಣೆ ಮಾಡುವುದೇ ಇಲ್ಲಿ ಮುಖ್ಯವಾಗಿದೆ.

Advertisement

ಸಮಸ್ಯೆ ಗೊತ್ತಾಗೋದು ಹೇಗೆ?

ಸಾಮಾನ್ಯವಾಗಿ ಬ್ಯಾಟರಿ ಸಮಸ್ಯೆ ಇದ್ದರೆ, ಎಂಜಿನ್‌ ಕ್ರ್ಯಾಂಕ್‌ ಆಗುವುದಕ್ಕೆ ತೊಡಕಾಗುತ್ತದೆ. ವಾಹನದ ಲೈಟ್‌ಗಳು ಉರಿಯದೇ ಇರಬಹುದು ಅಥವಾ ಮಂದವಾಗಿ ಉರಿಯುತ್ತಿರಬಹುದು. ಪ್ರಮುಖವಾಗಿ ಕೀ ತಿರುವಿದ ತತ್‌ಕ್ಷಣ ಮೀಟರ್‌ ಲೈಟ್‌ಗಳು ಸಣ್ಣಕೆ ಉರಿಯುವುದನ್ನು ಗುರುತಿಸಬಹುದು. ಹಾಗೆಯೇ, ಬ್ಯಾಟರಿಯಲ್ಲಿ ಕಡಿಮೆ ಡಿಸ್ಟಿಲ್ಡ್ ವಾಟರ್‌ ಇದ್ದರೂ ಚಾರ್ಜ್‌ ಆಗದೇ ಇರಬಹುದು. ಇದರೊಂದಿಗೆ ಬ್ಯಾಟರಿಗೆ ಜನರೇಟರ್‌ನಿಂದ ಸಂಪರ್ಕ ವ್ಯವಸ್ಥೆಯಲ್ಲಿ ದೋಷದಿಂದಾಗಿ ಬ್ಯಾಟರಿ ಸರಿಯಾಗಿ ಚಾರ್ಜ್‌ ಆಗದೆಯೇ ಇರಬಹುದು. ಕೆಲವೊಮ್ಮೆ ಬ್ಯಾಟರಿಯಲ್ಲಿನ ದೋಷದಿಂದಾಗಿ ಬ್ಯಾಟರಿ ಕೇಸ್‌ ದೊಡ್ಡದಾಗುವ ಸಂಭವವೂ ಇದೆ. ಇಂತಹ ಸಂದರ್ಭಗಳಲ್ಲಿ ಬ್ಯಾಟರಿ ಬದಲಾಯಿಸುವುದೇ ಪರಿಹಾರ

ಬ್ಯಾಟರಿ ಕೇಬಲ್ ಶುಚಿಗೊಳಿಸಿ

ಕಾಲಕಾಲಕ್ಕೆ ಬ್ಯಾಟರಿ ಕೇಬಲ್ಗಳನ್ನು ಶುಚಿಗೊಳಿಸುತ್ತಿರಬೇಕು. ಬ್ಯಾಟರಿಗಳ ಟರ್ಮಿನಲ್ಗಳಿಗೆ ಸಂಪರ್ಕ ಹೊಂದಿರುವ ವಯರ್‌ಗಳನ್ನು ತೆಗೆದು ಅವುಗಳ ತುದಿಯನ್ನು ತುಕ್ಕು ನಿರೋಧಕ ಸ್ಪ್ರೇ ಮಾಡಿ ಅಥವಾ ಪೆಟ್ರೋಲ್/ಸೀಮೆ ಎಣ್ಣೆಯಲ್ಲಿ ಶುಚಿಗೊಳಿಸಬೇಕು. ಬಳಿಕ ಪೆಟ್ರೋಲಿಯಂ ಜೆಲ್ಲಿ ಹಾಕಿ ಮೊದಲಿನಂತೆ ಅಳವಡಿಸಬೇಕು.

Advertisement

ಡಿಸ್ಟಿಲ್ಡ್ ವಾಟರ್‌ ಪರೀಕ್ಷೆ

ಬ್ಯಾಟರಿಯಲ್ಲಿ ನಿಗದಿತ ಪ್ರಮಾಣದಷ್ಟು ಡಿಸ್ಟಿಲ್ಡ್ ವಾಟರ್‌ ಇರಲೇಬೇಕು. ಇಲ್ಲದಿದ್ದರೆ ಬ್ಯಾಟರಿ ಬಾಳಿಕೆ ಕಡಿಮೆಯಾಗಬಹುದು, ಚಾರ್ಜ್‌ ಆಗದೇ ಇರುತ್ತದೆ. ಕ್ರಮೇಣ ಬ್ಯಾಟರಿ ಹಾಳಾಗುತ್ತದೆ. ಕನಿಷ್ಠ 3 ತಿಂಗಳಿಗೊಮ್ಮೆ ವಾಹನ ಚಲಾಯಿಸುವವರು ಗಮನ ನೀಡಬೇಕು. ಪ್ರತಿ 6 ಅಥವಾ 12 ತಿಂಗಳಿಗೊಮ್ಮೆ ಅಗತ್ಯವಿದ್ದರೆ ಡಿಸ್ಟಿಲ್ಡ್ ವಾಟರ್‌ ಹಾಕಬೇಕಾಗುತ್ತದೆ.

ಬ್ಯಾಟರಿ ಬದಲಾವಣೆ ಯಾವಾಗ?
ಬ್ಯಾಟರಿ ಚಾರ್ಜ್‌ ಆಗುತ್ತಿಲ್ಲ, ಗಾಡಿ ಸ್ಟಾರ್ಟ್‌ ಆಗುತ್ತಿಲ್ಲ ಎಂದಾದರೆ ಏಕಾಏಕಿ ಬ್ಯಾಟರಿ ಸರಿ ಇಲ್ಲ ಎಂಬ ನಿರ್ಧಾರಕ್ಕೆ ಬರಬೇಡಿ. ಆರಂಭದಲ್ಲಿ ಬ್ಯಾಟರಿಯನ್ನು ತೆಗೆದು ಡಿಸ್ಟಿಲ್ಡ್ ವಾಟರ್‌ ಸಾಕಷ್ಟಿದೆಯೇ, ಸುಸ್ಥಿತಿಯಲ್ಲಿದೆಯೇ ಎಂಬುದನ್ನೆಲ್ಲ ಗಮನಿಸಿ, ಸಂಪೂರ್ಣ ಚಾರ್ಜ್‌ ಮಾಡಲು ಕೊಡಿ. ಚಾರ್ಜ್‌ ಆದ ಬಳಿಕ ಬ್ಯಾಟರಿಯನ್ನು ಮತ್ತೆ ಪುನಸ್ಥಾಪಿಸಿ ಪರಿಶೀಲಿಸಿ, ವಾಹನ ಚಾಲನೆಯಲ್ಲಿದ್ದಾಗಲೂ ಚಾರ್ಜ್‌ ಆಗದಿದ್ದರೆ ಬೇರೆ ಸಮಸ್ಯೆಯೂ ಇರಬಹುದು. ತೀವ್ರ ಕೆಟ್ಟು ಹೋದ ಪರಿಸ್ಥಿತಿಯಲ್ಲಿ ಬದಲಾವಣೆ ಮಾಡುವುದು ಉತ್ತಮ.

ದೀರ್ಘ‌ಕಾಲ ಪಾರ್ಕಿಂಗ್‌

ಬಹುಕಾಲ ಪಾರ್ಕಿಂಗ್‌ ಮಾಡುತ್ತೀರಾದರೆ, ಬ್ಯಾಟರಿ ಟರ್ಮಿನಲ್ಗಳಿಂದ ವಯರ್‌ ಅನ್ನು ಕೀಳುವುದು ಉತ್ತಮ. ವೃಥಾ ಬ್ಯಾಟರಿ ಡಿಸ್ಚಾರ್ಜ್‌ ಆಗುತ್ತದೆ. ಕಾರು ನಿಲ್ಲಿಸಿಯೇ ಇದ್ದರೆ 5 ದಿನಕ್ಕೊಮ್ಮೆಯಾದರೂ ಸ್ಟಾರ್ಟ್‌ ಮಾಡಿ 4-5 ನಿಮಿಷ ಚಾಲನೆಯಲ್ಲಿಡಿ.

– ಈಶ

Advertisement

Udayavani is now on Telegram. Click here to join our channel and stay updated with the latest news.

Next