ಹಾದಿ ಸಾಗುತ್ತಿತ್ತು. ಅವನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಎಲ್ಲರೂ ಮೌನದಿಂದ ಹಿಂಬಾಲಿಸುತ್ತಿದ್ದರು. ಮಂತ್ರಿಗೆ ಯಾಕೋ ನೀರವ ಮೌನವನ್ನು ಮುರಿಯಬೇಕೆನಿಸಿತು.
ಸಣ್ಣದೊಂದು ಕೆಮ್ಮಿದ. ಅದಕ್ಕೆ ಉತ್ತರವಾಗಿ, ‘ಕೆಮ್ಮಿದ್ದರೆ, ಇದನ್ನು ತೆಗೆದುಕೊಳ್ಳಿ. ಕಲ್ಲಿನಲ್ಲಿ ಜಜ್ಜಿ ರಸವನ್ನು ಕುಡಿಯಿರಿ ಸರಿಯಾಗುತ್ತದೆ’ ಎಂದು ಸಾಗುತ್ತಿದ್ದವ ಒಂದು ಬಳ್ಳಿಯನ್ನು ರಪ್ಪನೆ ಕಿತ್ತು ತನ್ನ ಹಿಂದೆ ಬರುತ್ತಿದ್ದ ಸೈನಿಕರಿಗೆ ಕೊಟ್ಟ. ಅದು ಮಂತ್ರಿಗೆ ರವಾನೆಯಾಯಿತು.
ಇವನ ಉತ್ತರದ ರಾಪು ಹೇಗಿತ್ತೆಂದರೆ, ಸಣ್ಣದೆಲ್ಲಾ ಸಮಸ್ಯೆಯೇ ಎಂಬಂತೆಯೂ ಇತ್ತು. ಮತ್ತೂಂದು ನೆಲೆಯಲ್ಲಿ ‘ಎಲ್ಲದಕ್ಕೂ ಪರಿಹಾರವುಂಟು’ ಎಂಬ ಆಶಾವಾದವೂ ಇತ್ತು.
ಅವನು ಹೇಳಿದಂತೆ ಮಂತ್ರಿ ಹತ್ತಿರದ ಕಲ್ಲೊಂದರಲ್ಲಿ ಜಜ್ಜಿ ರಸವನ್ನು ಸೇವಿಸಿದ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಿತವೆನಿಸಿತು.
‘ಹಾಗಾದರೆ ನಿಮಗೆ ಔಷಧ ಕೊಡಲೂ ಬರುತ್ತದೆಯೇ? ನಾಟಿ ವೈದ್ಯರೇ?’ ಎಂದು ಕೇಳಿದ ಮಂತ್ರಿ. ಇದೂ ಮೌನವನ್ನು ಮುರಿಯುವ ಉದ್ದೇಶವೇ. ಅದಕ್ಕೆ ಪ್ರತಿಯಾಗಿ, ನಾನು ವೈದ್ಯನಲ್ಲ. ಆದರೆ ಹಲವರಿಂದ ತಿಳಿದುಕೊಂಡದ್ದು ಸಾಕಷ್ಟಿದೆ, ನನ್ನದೆನ್ನುವುದು ಎಷ್ಟು? ಇಡೀ ಬದುಕಿನಲ್ಲಿ ಕಲಿಯುವುದಾದರೂ ಎಷ್ಟು? ಒಂದು ಹುಣಸೇ ಬೀಜ, ಇಲ್ಲವೇ ಎರಡು ಹುಣಸೆ ಬೀಜ. ಅದಕ್ಕಿಂತ ಹೆಚ್ಚಿನದ್ದನ್ನು ನಾನಾಗಿಯೇ ಕಲಿಯುವುದೇನಿದೆ? ಎಲ್ಲವನ್ನೂ ಬಲ್ಲವರಿಂದ ತಿಳಿಯವುದು, ಅನುಭವಕ್ಕೆ ನಿಲುಕಿದ್ದನ್ನು ನಮಗೆ ತಾಗಿಸಿಕೊಳ್ಳುವುದು’ ಎಂದು ಹೇಳಿದ ಆತ.
ಮಂತ್ರಿಗೆ ಒಬ್ಬ ವೇದಾಂತಿ ಮಾತನಾಡುತ್ತಿದ್ದಾನೋ ಎಂದೆನಿಸಿತು. ನಿಜವಲ್ಲವೇ? ಇಡೀ ಬದುಕಿನಲ್ಲಿ ನನ್ನದೆನ್ನುವುದು ಒಂದೋ, ಎರಡೋ ಹುಣಸೆ ಬೀಜದಷ್ಟೇ ತಾನೇ.. •
(ಹುಣಸೆ ಮರದ ಎದುರು ಬದುಕಿನ ದರ್ಶನ)