Advertisement
ಕಾಬ್ಯುìರೇಟರ್ ಕ್ಲೀನಿಂಗ್/ ಟ್ಯೂನಿಂಗ್ನಿಮ್ಮ ಬೈಕ್‌ನಲ್ಲಿ ಜರ್ಕಿಂಗ್, ಬೆಳಗ್ಗೆ ಸ್ಟಾರ್ಟಿಂಗ್ ಸಮಸ್ಯೆ ಇತ್ಯಾದಿ ಇದ್ದರೆ ಅದಕ್ಕೆ ನೀವು ಹಾಕುತ್ತಿರುವ ಇಂಧನ, ಕಾಬ್ಯುìರೇಟರ್‌ನಲ್ಲಿ ಸಣ್ಣ ಕಣಗಳು ಸಿಲುಕಿರುವುದು ಕಾರಣವಾಗಿರಬಹುದು. ಆದ್ದರಿಂದ ಕಾಬ್ಯುìರೇಟರ್‌ನ್ನು ಸಂಪೂರ್ಣ ತೆಗೆದು, ಶುಚಿಗೊಳಿಸಿ ಜೋಡಿಸಿ. ಜತೆಗೆ ಟ್ಯೂನಿಂಗ್ ಕೂಡ ಮಾಡಿಸಿ. ಕಾಬ್ಯುìಯರೇಟರ್ ಒಳಗಿನ ನೀಡಲ್ ಹಾಳಾಗಿದ್ದರೆ, ಫ್ಲೋಟ್ ಸರಿಯಿಲ್ಲದಿದ್ದರೆ ಹೊಸತೇ ಹಾಕಿಸಿ.
ಅತ್ಯಾಧುನಿಕ ಬೈಕ್‌ಗಳಲ್ಲಿ ಕಾಬ್ಯುìರೇಟರ್‌ಗಳು ಇರುವುದಿಲ್ಲ. ಬದಲಿಗೆ ಫುÂಯೆಲ್ ಇಂಜೆಕ್ಷನ್ ವ್ಯವಸ್ಥೆ ಇರುತ್ತದೆ.ಇದಕ್ಕೆ ಎಲೆಕ್ಟ್ರಾನಿಕ್ ಕಂಟ್ರೋಲ್ ಎಂಬ ವ್ಯವಸ್ಥೆಯೊಂದಿದ್ದು, ವಾಹನ ಗರಿಷ್ಠ ಕಾರ್ಯಕ್ಷಮತೆ ನೀಡಲು ಕಾರಣವಾಗುತ್ತದೆ. ಈ ಎಲೆಕ್ಟ್ರಾನಿಕ್ ವಸ್ತುವಿನಲ್ಲಿ ದೋಷವಿದ್ದರೆ, ಅದರ ಸಾಫ್ಟ್ವೇರ್ ಹಳತಾಗಿದ್ದರೆ, ವಾಹನ ಅತ್ಯುತ್ತಮವಾಗಿ ಓಡಲು ಸಾಧ್ಯವಿಲ್ಲ. ಆದ್ದರಿಂದ ಇದರ ಬಗ್ಗೆ ಗಮನ ಅಗತ್ಯ. ಒಂದೇ ಕಡೆ ಪೆಟ್ರೋಲ್
ಉತ್ತಮ ಮೈಲೇಜ್ ಸಿಗಬೇಕು, ಪಿಕಪ್ ಇರಬೇಕು ಎಂದಾದರೆ ಆದಷ್ಟೂ ಒಂದೇ ಕಡೆ ಪೆಟ್ರೋಲ್ ಹಾಕಿಸಿ. ಇದರಿಂದ ಬೈಕ್‌ನ ಎಂಜಿನ್ ಆ ಮಾದರಿಗೆ ಟ್ಯೂನ್ ಆಗಿರುತ್ತದೆ. ಆಗಾಗ್ಗೆ ಪೆಟ್ರೋಲ್ ಪಂಪ್ ಬದಲಾಯಿಸುವುದು, ಕಳ್ಳ ಪೆಟ್ರೋಲ್ ಹಾಕಿಸುವುದು ಇತ್ಯಾದಿ ಮಾಡಿದರೆ ಕಲಬೆರಕೆ ಸಮಸ್ಯೆಯಿಂದಲೂ ಎಂಜಿನ್‌ಗೆ ಹಾನಿಯಾಗಬಹುದು.