Advertisement
ಅದರಲ್ಲೂ ಬೆಳಗ್ಗಿನ ಜಾವ ಖಾಲಿ ಹೊಟ್ಟೆಯಲ್ಲಿ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಅನೇಕ ಲಾಭಗಳಿವೆ. ಇವು ದೇಹಕ್ಕೆ ಬೇಕಾದ ಪೌಷ್ಟಿಕಾಂಶ ವನ್ನು ಒದಗಿಸುವುದು ಮಾತ್ರವಲ್ಲದೆ ದಿನ ವಿಡೀ ಉಲ್ಲಾಸದಿಂದ ಇರಲು ಸಹಾಯ ಮಾಡುತ್ತದೆ. ಮೊಳಕೆ ಬರಿಸಿದ ಹಸಿ ಕಾಳುಗಳಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ಜಾಸ್ತಿ ಇರುವುದರಿಂದ ಬೇಯಿಸಿ ತಿನ್ನುವುದು ಉತ್ತಮ.
ಬೆಳಗ್ಗೆ ಮೊಳಕೆ ಕಾಳುಗಳನ್ನು ತಿನ್ನುವುದಿಂದ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶ ದೊರೆತು ಮೆಟಾ ಬೊಲಿಸಮ್ ಹೆಚ್ಚಾಗಿ ಕೊಬ್ಬು ಕರಗಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್, ಪ್ರೋಟೀನ್ ಹೆಚ್ಚಾಗಿದ್ದು ಕ್ಯಾಲೋರಿ ಅಂಶ ಕಡಿಮೆ ಇರುವುದರಿಂದ ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ಹಸಿವನ್ನು ನಿಯಂತ್ರಿಸಿ ಆರೋಗ್ಯವಾಗಿರಲು ಸಹಕಾರಿ. ಇದನ್ನು ಅನುಕ್ರಮವಾಗಿ ಪ್ರತಿನಿತ್ಯ ಒಂದೇ ಸಮಯದಲ್ಲಿ ತೆಗೆದುಕೊಳ್ಳುವುದರಿಂದ ರಕ್ತದ ಕಣಗಳು ಶುದ್ಧವಾಗುತ್ತದೆ. ಅಲ್ಲದೆ ಚರ್ಮವನ್ನು ಕಾಂತಿಯಕ್ತವಾಗಿ ಮಾಡುತ್ತದೆ. ವೃದ್ಧಾಪ್ಯದ ಲಕ್ಷಣಗಳು ಬೇಗ ಬಾರದಂತೆ ನೋಡಿಕೊಳ್ಳುತ್ತದೆ.
Related Articles
ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಹಲವಾರು ಸೋಂಕು ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಫ್ರೀ ರಾಡಿಕಲ್ ನಿಂದ ರಕ್ಷಿಸುತ್ತದೆ. ಫ್ರೀ ರಾಡಿಕಲ್ ಕಲ್ ಅನ್ನು ಆ್ಯಂಟಿ ಆಕ್ಸಿಡೆಂಟ್‌ಗಳು ತಟಸ್ಥಗೊಳಿಸದೇ ಇದ್ದರೆ ಅದು ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡುವುದು.
Advertisement
ರಕ್ತ ಸಂಚಾರವನ್ನು ಸುಗಮಗೊಳಿಸಿ ದೇಹದ ವಿವಿಧ ಅಂಗಾಂಶ ಹಾಗೂ ಕೋಶಗಳಿಗೆ ಆಮ್ಲಜನಕವು ಸರಬರಾಜು ಆಗಲು ನೆರವಾಗುತ್ತದೆ. ಹಾಲಿನಲ್ಲಿರುವಷ್ಟು ಪೋಷಕಾಂಶ ಮೊಳಕೆ ಕಾಳಿನಲ್ಲಿ ದೊರೆಯುವುದರಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಲ್ಲೂ ಜೀರ್ಣಕ್ರಿಯೆಯ ಸಮಸ್ಯೆ ಇರುತ್ತದೆ.
ಅಂಥವರು ಮೊಳಕೆಕಾಳುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದನ್ನು ಸಂಜೆ ತಿನ್ನುವುದು ಕೂಡ ಉತ್ತಮ. ಹೆಸರುಕಾಳು ಮಾತ್ರವಲ್ಲ ಮಡಕೆ ಕಾಳು, ಹುರುಳಿ ಕಾಳುಗಳಲ್ಲಿ ಯಾವುದಾದರನ್ನು ಪ್ರತಿ ನಿತ್ಯ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರಿಸಿಕೊಳ್ಳಬಹುದು.