Advertisement
ಗೆಲುವೊಂದು ಕೈ ಹಿಡಿಯುವುದಕ್ಕೆ ಅಥವಾ ಕೈ ಬಿಡುವುದಕ್ಕೆ ಕೊನೆಯ ಹಂತದಲ್ಲಿ ನಡೆದು ಹೋದ ಚಿಕ್ಕ ಘಟನೆಗಳೇ ಕಾರಣವಾಗಿ ಬಿಡುತ್ತವೆ. ಎಲ್ಲಾ ರೀತಿಯಲ್ಲೂ ಫಿಟ್ ಆಗಿದ್ದ ವ್ಯಕ್ತಿಯೊಬ್ಬ ಇಂಟರ್ ವ್ಯೂನಲ್ಲಿ ಪೆದ್ದು ಪೆದ್ದಾಗಿ ನಡೆದುಕೊಂಡರೆ ಹೇಗೆ? ಅವನಿಗದು ಗೋಲ್ಡನ್ ಟೈಮ್. ಹತ್ತಾರು ವರ್ಷಗಳ ಕಾಲ ಎಷ್ಟೆಲ್ಲಾ ಓದಿದ್ದೆ, ಕೆಲಸಕ್ಕಾಗಿ ಏನೆಲ್ಲಾ ಸರ್ಕಸ್ ಮಾಡಿದ್ದೆ ಅನ್ನುವುದು ಎಷ್ಟು ಮುಖ್ಯವೋ; ಕೆಲಸ ಕೊಡುವವರ ಎದುರಿಗೆ ನಿಂತು ನೀನೇನು ಅಂತ ತೋರಿಸುವುದೂ ಅಷ್ಟೇ ಮುಖ್ಯ! ಅದನ್ನು ನೀನು ಹೇಗೆ ಬಳಸಿಕೊಳ್ಳುತ್ತೀ ಅನ್ನುವುದರ ಮೇಲೆ ನಿನ್ನ ಗೆಲುವು ನಿಲ್ಲುತ್ತದೆ. ನಿನ್ನ ಗೆಲುವಿಗೆ ಕಾದಿದ್ದ ಅದ್ಭುತ ಗಳಿಗೆ ಅದು. ತೀರಾ ಪ್ರಾಕೀrಸ್, ಕಾನ್ಫಿಡೆನ್ಸ್ ಇಲ್ಲದೇ ಮ್ಯಾಚಿಗಿಳಿದರೆ ಗೆಲ್ಲಲಾಗುತ್ತಾ? ಹೋದಂತೆಯೇ ಬಗಲಿಗೆ ಬ್ಯಾಟ್ ಇಟ್ಟುಕೊಂಡು ಪೆವಿಲಿಯನ್‌ಗೆ ಮರಳಬೇಕಾಗುತ್ತದೆ.
Related Articles
Advertisement
ಕೊನೆ ಕ್ಷಣದ ಮಿಂಚಿನ ತಯಾರಿಹಾಗಾದರೆ, ಪರೀಕ್ಷೆಯ ಹಿಂದಿನ ದಿನ ಪಟ್ಟಾಗಿ ಓದಲು ಕೂರಬೇಕಾ? ರಾತ್ರಿಯೆಲ್ಲಾ ನಿದ್ರೆಯನ್ನು ಅಡವಿಟ್ಟು ಪುಸ್ತಕ ಹಿಡಿಯಬೇಕಾ? ಊಟ ತಿಂಡಿಗೆ ಅವಕಾಶ ನೀಡದೇ ಅಕ್ಷರಗಳನ್ನೇ ಮುಕ್ಕಬೇಕಾ? ಅಂತ ಕೇಳಬೇಡಿ. ಹಾಗೇನಾದರೂ ಮಾಡಿದರೆ, ಮರುದಿನದ ಪರೀಕ್ಷೆಯ ಮೂರು ಗಂಟೆ ನಿಮ್ಮ ಪಾಲಿಗೆ ನರಕಯಾತನೆ! ಕೊನೆಯ ಇಪ್ಪತಾಲ್ಕು ಗಂಟೆಗಳು ನಿಮ್ಮ ಪರೀಕ್ಷೆಗೆ ಬಲ ನೀಡುವಂತಾಗಬೇಕು. – ವಿಷಯಕ್ಕೆ ಸಂಬಂಧಿಸಿದ ಅಷ್ಟೂ ಸಂಪನ್ಮೂಲಗಳನ್ನು ಒಂದೆಡೆ ಜೋಡಿಸಿಕೊಳ್ಳಿ, ಎಲ್ಲವೂ ಕೈಗೆ ಸಿಗುವಂತಿರಲಿ. ಕೊನೆಯ ಕ್ಷಣದಲ್ಲಿ ಅವುಗಳಿಗೆ ಪರದಾಡುವುದು ಬೇಡ.
– ಪರೀಕ್ಷೆಗೂ ಮುನ್ನಾ ದಿನ ಯಾವುದೇ ಹೊಸ ವಿಚಾರವನ್ನು ಓದಬೇಡಿ. ಈ ಹಿಂದೆ ಓದಿದ್ದು ಮಾತ್ರವೇ ಮನನವಾಗಲಿ.
– ಮೊದಲೇ ಕೀ ಪಾಯಿಂಟ್ಸ್ ಮಾಡಿಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಅದು ಪರೀಕ್ಷೆಯ ಮೊದಲ ಇಪ್ಪತ್ತಾಲ್ಕು ಗಂಟೆಗಳಲ್ಲಿ ಶೀಘ್ರ ಪುನರಾವರ್ತನೆಗೆ ಸಹಕಾರಿ.
– ಎಲ್ಲವನ್ನೂ ವಿವರವಾಗಿ ಓದುತ್ತಾ ಕೂರಬೇಡಿ. ನೀಲ ನಕಾಶೆಯನ್ನು ಆಧರಿಸಿ ಪ್ರಮುಖ ವಿಷಯಗಳ ಕಡೆ ಗಮನಹರಿಸಿ.
– ಓದಿದ್ದರಲ್ಲಿ ನಿಮಗೆ ಖುಷಿ ಎನಿಸಿದ್ದನ್ನು ಒಂದೆರಡು ಪುಟಗಳಷ್ಟು ಬರೆಯಿರಿ.
– ಓದದ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಓದಿದ್ದನ್ನು ಚೆನ್ನಾಗಿ ಬರೆಯುವ ವಿಶ್ವಾಸವಿರಲಿ. ನಿಮ್ಮ ಮನಸ್ಸೇ ಆ ಕ್ಷಣದ ದೇವರು!
ಮನಸ್ಸು ಪ್ರಭಾವಶಾಲಿ. ಅದಕ್ಕೆ ಎಲ್ಲವೂ ಸಾಧ್ಯವಿದೆ. ಗೆಲುವಿಗೂ, ಎಡವಟ್ಟುಗಳಿಗೂ ಅದೇ ಕಾರಣ. ಆದರೆ, ನೀವು ಅದನ್ನು ಹೇಗಿಟ್ಟುಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧರಿತ. ಪರೀಕ್ಷೆ ಬರೆಯಲು ಹೊರಡುವ ಕೊನೆಯ ಕ್ಷಣದಲ್ಲಿ ನಿಮ್ಮ ಮನಸ್ಸು ಹೀಗಿರಲಿ. – ನಾಳೆಯೇ ಪರೀಕ್ಷೆ ಎಂದು ದಿಗಿಲು ಬೀಳುವುದು ಬೇಡ. ಹಾಗಂತ ಪರೀಕ್ಷೆಯನ್ನು ತುಂಬಾ ಕಾಳಜಿ ಮಾಡಬೇಡಿ ಅಂತಲ್ಲ. ಒಂದು ಆರೋಗ್ಯಯುತ ಭಯವಿರಲಿ. – ತೀರಾ ತಡರಾತ್ರಿಯವರೆಗೂ ಓದುತ್ತಾ ಕೂರಬೇಡಿ. ಎಲ್ಲವನ್ನೂ ಹರಡಿಕೊಂಡು ಒದ್ದಾಡಬೇಡಿ. ಇದೆಲ್ಲಾ ಒತ್ತಡವನ್ನುಂಟು ಮಾಡುತ್ತದೆ. – ಟಿವಿ, ಮೊಬೈಲ್, ಚಾಟ್‌ಗಳಿಂದ ದೂರವಿರಿ. ಅಮ್ಮ- ಅಪ್ಪನ ಜೊತೆಗೆ ಖುಷಿ ಖುಷಿಯಾಗಿರಿ, ನಕ್ಕು ಹಗುರಾಗಿ. ಹರಟೆ ಮಾತ್ರವೇ ಬೇಡ. – ಚೆನ್ನಾಗಿ ನಿದ್ದೆ ಮಾಡಿ. ಬೆಳಗ್ಗೆ ಸಮಯದ್ದರೆ, ಒಂದಿಷ್ಟು ಓದಿದ್ದನ್ನು ತಿರುವಿ ಹಾಕಿ. ಇಲ್ಲದಿದ್ದರೆ ಬೇಡವೇ ಬೇಡ. ಪೂಜೆ-ಧ್ಯಾನದ ಅಭ್ಯಾಸವಿದ್ದರೆ ತೊಡಗಿಸಿಕೊಳ್ಳಿ. – ಪರೀಕ್ಷೆಯ ಮುಂಚಿನ 3-4 ಗಂಟೆಗಳ ಅವಧಿಯಲ್ಲಿ ಏನನ್ನೂ ಓದಬೇಡಿ. – ಮನೆಯಿಂದ ಹೊರಡುವಾಗ ಖುಲ್ಲಯಿಂದಲೇ ಹೊರಡಿ. ಪೂರ್ವಗ್ರಹವನ್ನು ಮನೆಯಲ್ಲಿಯೇ ಬಿಟ್ಟು ಹೊರಡಿ. ಚೆನ್ನಾಗಿ ಬರೆಯುವೆ ಎಂಬ ಆತ್ಮವಿಶ್ವಾಸವನ್ನು ಧರಿಸಿಕೊಳ್ಳಿ. – ಪರೀಕ್ಷಾ ಕೇಂದ್ರವನ್ನು ಅರ್ಧಗಂಟೆ ಮುಂಚಿತವಾಗಿ ತಲುಪಿ. ಅಲ್ಲಿ ಮಾತು ಬೇಡ. ಅತೀ ಮಾತು ನೆನಪಿನ ಶಕ್ತಿಯನ್ನು ಕುಂದಿಸುತ್ತದೆ. ನಿಮ್ಮ ಆರೋಗ್ಯವೇ ಬೋನಸ್ ಮಾರ್ಕ್ಸ್
ಎಲ್ಲವೂ ಸರಿಯಿದ್ದು, ಪರೀಕ್ಷೆ ಬರೆಯುವ ನೀವೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಹೇಗೆ? ಈ ವೇಳೆ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ತುಂಬಾ ಮುಖ್ಯ. – ಪರೀಕ್ಷೆ ಮುನ್ನಾ ದಿನದ ಆಹಾರಕ್ರಮ ಬಹಳ ಮುಖ್ಯ. ಹಿತಮಿತವಾದ, ಶುಚಿಯಾದ ಸಾತ್ವಿಕ ಆಹಾರ ಸೇವಿಸಿ.
– ಜಾತ್ರೆ, ಸಂತೆ, ಹಬ್ಬಗಳ ತಿನಿಸುಗಳಿಂದ ದೂರವಿರಿ. ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳನ್ನೂ ನಿರ್ಲಕ್ಷಿಸುವುದು ಸಲ್ಲ. ಅಗತ್ಯವಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
– ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಕನಿಷ್ಠ ಆರೇಳು ಗಂಟೆಗಳಷ್ಟು ನಿದ್ದೆಯ ಅವಶ್ಯಕತೆ ಇದೆ.
– ಪರೀಕ್ಷೆಗೆ ಹೊರಡುವಾಗ ತುಂಬಾ ನೀರು ಕುಡಿಯುವುದು ಒಳ್ಳೆಯದಲ್ಲ. ಪ್ರಧಾನಿ ಮೋದಿ ಹೇಳಿದ ಆ ತಂತ್ರ
ಮಕ್ಕಳೇ, ಪರೀಕ್ಷೆ ಬಗ್ಗೆ ಆತಂಕ ಬೇಡ. ಅದನ್ನು ನೋಡಿ ಹೆದರೋದಿಕ್ಕೆ, ಪರೀಕ್ಷೆಯೇನು ಹುಲಿಯೇ? ಸಿಂಹವೇ? ಬೇತಾಳವೇ? ಪರೀಕ್ಷೆಯನ್ನು ಗೆಲ್ಲುವ ಮಾರ್ಗಗಳು ಎರಡು. ಒಂದು, ನಿಮ್ಮ ಆತ್ಮವಿಶ್ವಾಸ, ತಯಾರಿ ಕಂಡು ಪರೀಕ್ಷೆಯೇ ಹೆದರಬೇಕು. ಮತ್ತೂಂದು, ಪ್ರಧಾನಿ ಮೋದಿ ಅವರು ಹೇಳಿದಂತೆ, ಪರೀಕ್ಷೆಯನ್ನು ಗೆಳೆಯ ಎಂಬುದಾಗಿ ಪರಿಗಣಿಸಬೇಕು. ಯುಗಾದಿ, ದೀಪಾವಳಿ, ಬರ್ತ್‌ಡೇಗೆ ಕಾಯುವಂತೆ, ನೀವು ಪರೀಕ್ಷೆಗೆ ಕಾಯಬೇಕು. ಪರೀಕ್ಷೆಯ ದಿನ ಖುಷಿ ಖುಷಿಯಾಗಿರಬೇಕು. ಇದು ನಿಮ್ಮದೇ ಸಮಯ
ಹೌದು, ಕೊನೆಯ ಇಪ್ಪತ್ನಾಲ್ಕು ಗಂಟೆಗಳು ಬಿಲ್ಕುಲ್ ನಿಮ್ಮವೇ. ಆ ಎಲ್ಲ ಗಂಟೆಗಳೂ ಅತಿಮುಖ್ಯ, ತುಂಬಾ ವ್ಯವಸ್ಥಿತವಾಗಿ ಅದನ್ನು ಬಳಸಿಕೊಳ್ಳಿ. ಅಲ್ಲಿ ಎಲ್ಲದಕ್ಕೂ ಪಾಲಿರಲಿ; ವ್ಯರ್ಥ ಕೆಲಸಕ್ಕೆ ಬಿಟ್ಟು! ಓದಿದ್ದನ್ನು ಕಣ್ಮುಂದೆ ದೃಶ್ಶಿಕರಿಸಿಕೊಂಡಾಗ, ಅದು ಬೇಗನೆ ತಲೆಗೆ ಹೊಕ್ಕುತ್ತದೆ. ನಕ್ಕರೆ ಒಳ್ಳೇ “ಅಂಕ’
ನಗು ಎನ್ನುವುದು ಗುಡ್ ಟಾನಿಕ್. ಒತ್ತಡ ಕಡಿಮೆ ಮಾಡುವ ದಿವೌÂಷಧ. ಒತ್ತಡ ಕಡಿಮೆಯಾದರೆ, ನೆನಪುಗಳು ಸಲೀಸು. ಅದಕ್ಕಾಗಿ ನೀವು ಸದಾ ನಗುತ್ತಾ ಇರಬೇಕು. ಮನೆಯವರೊಂದಿಗೆ ಮಾತಾಡುತ್ತಾ, ಖುಷಿ ಖುಷಿಯಿಂದ ಇರಿ. ಬೆಳಗ್ಗೆ ಪರೀಕ್ಷೆಗೂ ನಗುನಗುತ್ತಲೇ ಹೊರಡಿ. ಆಗ ನಿಮಗೆ ಗೊತ್ತಾಗುತ್ತೆ, ಅದರ ಮ್ಯಾಜಿಕ್ ಏನು ಅಂತ! ಸದಾಶಿವ ಸೊರಟೂರು