ಜಗತ್ತಿನ ಪರಮ ಸುಖವೆಂದರೆ ಒಂದು ಸುಂದರ ನಿದ್ರೆ. ಇಲ್ಲಿ ಯಾಕೆ ಒಂದು ಸುಂದರ ನಿದ್ರೆ ಮಾತ್ರ? ಎಲ್ಲ ನಿದ್ರೆಗಳೂ ಸುಂದರವೇ, ಸುಖವೇ ಅಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಎಲ್ಲಾ ನಿದ್ರೆಗಳೂ ಸುಂದರವಾಗಿರವು. ಹಲವು ನಿದ್ರೆಗಳಲ್ಲಿ ಕನಸುಗಳು ಕಾಡಬಹುದು, ಅರೆಬರೆ ನಿದ್ರೆ, ಗಾಢವಾಗಿರದ ನಿದ್ರೆ, ಅಲ್ಲದೆ, ಅದು ಸುಂದರ ನಿದ್ರೆ ಎನಿಸಿಕೊಳ್ಳಬೇಕಾದರೆ ನಿದ್ರೆಯಿಂದ ಎ¨ªಾಗ ದೇಹಾಯಾಸವನ್ನೂ ಮನಸ್ಸಿನ ಆಯಾಸವನ್ನೂ ಪರಿಹರಿಸಿ, ಹೊಸತನವನ್ನು ಹುಟ್ಟಿಸಿರಬೇಕು. ಎಲ್ಲಾ ನಿದ್ರೆಯಲ್ಲಿ ಇದು ಸಾಧ್ಯವಿಲ್ಲ. ಅಂದಹಾಗೆ ಚಂಚಲಚಿತ್ತವಾದ ಮನಸ್ಸು ಇವತ್ತಿನ ನಿದ್ದೆಯನ್ನು ಸುಂದರ ಎಂದುಕೊಂಡರೆ, ನಾಳೆ ಇಂಥದ್ದೇ ನಿದ್ರೆಯನ್ನು ಸುಂದರ ಎಂದುಕೊಳ್ಳುತ್ತದೆ ಎನ್ನಲಾಗದು. ಹಾಗಾಗಿ, ಒಂದು ಸುಂದರ ನಿದ್ರೆಯೇ ಪರಮ ಸುಖ ಅಂದಿರುವುದು. ಇಂಥ ಪರಮಾನಂದ ಜೀವನಪೂರ್ತಿ ದೊರೆಯುವಂತಾದರೆ? ಭುವಿಯೇ ಸಾಕ್ಷಾತ್ ಸ್ವರ್ಗವಾಗಿಬಿಡುತ್ತದಲ್ಲವೇ? ಇಂಥ ಪರಮಾನಂದವನ್ನು ಪಡೆಯುವ ಬಗೆ ಹೇಗೆ? ಎಂಬುದಕ್ಕೆ ಶ್ರೀಮದ್ಭಾಗವತವು ಬಾಲಕನ ಉದಾಹರಣೆಯ ಮೂಲಕ ವಿವರಿಸುತ್ತದೆ.
ಸಣ್ಣ ಬಾಲಕನು ಸದಾ ನಿಶ್ಚಿಂತವಾಗಿರುತ್ತಾನೆ. ಹಾಗೆಯೇ, ನಾನೂ ನನ್ನ ಆತ್ಮಾನಂದದಲ್ಲಿ ಮಗ್ನನಾಗಿರುತ್ತಾನೆ. ಮಾನ ಬರಲೀ, ಅಪಮಾನವಾಗಲೀ, ಅದರ ಪರಿಣಾಮ ನನ್ನ ಮೇಲೆ ಏನೂ ಆಗುವುದಿಲ್ಲ. ಹಾಗೂ ಮನೆ ಪರಿವಾರ ಚಿಂತೆಯೂ ನನಗಿಲ್ಲ ಎಂಬಂತಿರುತ್ತಾನೆ. ಪ್ರಪಂಚದಲ್ಲಿ ಇಬ್ಬರೇ ಚಿಂತೆಯಿಂದ ಮುಕ್ತರಾಗಿದ್ದಾರೆ. ಒಂದು ಮುಗ್ದ ಮಗು, ಇನ್ನೊಬ್ಬ ಗುಣಾತೀತ ಯೋಗಿ. ಇವರಿಬ್ಬರೂ ಪರಮ ಆನಂದದಲ್ಲಿ ಮಗ್ನರಾಗಿರುತ್ತಾರೆ. ಇದು ಶ್ರೀಮದ್ಭಾಗವತದಲ್ಲಿ ಅವಧೂತೋಪಾಖ್ಯಾನದಲ್ಲಿ ಹೇಳಲ್ಪಟ್ಟ ವಿಷಯ.
ಬಾಲ್ಯ ಎನ್ನುವುದೇ ಹಾಗೆ. ಪ್ರಪಂಚದ ಪರಿವೇ ಇರುವುದಿಲ್ಲ. ಎಲ್ಲವೂ ಸುಂದರ, ಪ್ರತಿಕ್ಷಣವೂ ಸುಮಧುರ. ಚಿಂತೆಯೆಂಬುದಿಲ್ಲ. ಯಾವುದೇ ಜಂಜಾಟವಿಲ್ಲ. ಮಾನ-ಅಪಮಾನಕ್ಕೆ ಹಿಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ. ನೋವನ್ನು ಕ್ಷಣಾರ್ಧದಲ್ಲಿ ಮರೆತು ಬಿಡುವ ಮನಸ್ಸು. ಇಲ್ಲಿಯೇ ಇರುವುದು ಪರಮಾನಂದ. ಚಿಂತೆಗಳನ್ನು ಹೊತ್ತುಕೊಂಡು ಇದ್ದಾಗಲೇ ಇರುವ ಸುಖವನ್ನೂ ಅನುಭವಿಸಲಾಗದು. ಮಕ್ಕಳಂತೆ ಮಾನ-ಅಪಮಾನಗಳನ್ನು ಸಮಾನ ರೀತಿಯಲ್ಲಿ ಸ್ವೀಕರಿಸಬೇಕು. ಇವತ್ತಿನ ದಿನದ ಆನಂದವನ್ನು ಆ ಕ್ಷಣವೇ ಅನುಭವಿಸಬೇಕು. ಆದರೆ ನಾಳೆಯ ಚಿಂತೆ ನಮ್ಮೊಳಗೇ ಸುಳಿದಾಡುತ್ತಿದ್ದರೆ ಮಾತ್ರ ನಾವು ಯಾವಾಗಲೂ ಆನಂದವನ್ನು ಹೊಂದಲಾಗದು. ಇದಕ್ಕೇ ನಾವು ಬಾಲ್ಯವನ್ನು ಮತ್ತೆಮತ್ತೆ ಬಯಸುತ್ತೇವೆ. ಅದೇ ರೀತಿ ಬದುಕನ್ನು ಅನುಭವಿಸುವ ವಿದ್ಯೆಯನ್ನು ಸಿದ್ಧಿಸಿಕೊಂಡಾಗ ಪರಮಾನಂದ ನಮ್ಮದಾಗುತ್ತದೆ.
ಗುಣಾತೀತನಾದಾಗ ಎಲ್ಲವೂ ಆನಂದಮಯವೇ. ಶುದ್ಧಮನಸ್ಸು ಇ¨ªಾಗ ಇಂತಹ ಸಿದ್ಧಿಯನ್ನು ಸಾಧಿಸಿಕೊಳ್ಳಬಹುದು. ಮನಸ್ಸು ಪ್ರತಿಯೊಂದು ಸಂದರ್ಭದಲ್ಲೂ ಆಕಾಂಕ್ಷೆಯನ್ನು ಇಟ್ಟುಕೊಂಡು ಸಾಗುತ್ತದೆ. ಪ್ರತಿಫಲದ ಬಗ್ಗೆ ಚಿಂತಿಸುತ್ತದೆ. ಗೆಲುವು ಮಾತ್ರ ಸುಖ ಎಂದು ಭಾವಿಸುತ್ತದೆ. ಆದರೆ ಮಗುವಿನ ಮನಸ್ಸು ಹಾಗಲ್ಲ. ಅದಕ್ಕೆ ಗೆದ್ದರೂ ಖುಷಿ; ಸೋತರೂ ಖುಷಿ. ಸೋಲೂ ಕೂಡ ಗೆಲುವಿನ ಮೆಟ್ಟಿಲೇ ತಾನೆ? ಯೋಚನೆ ಧನಾತ್ಮಕವಾಗಿರಲಿ. ಹಗುರಾದ ಮನಸ್ಸಿಗೆ ಯಾವ ಭಾರವೂ ಹೊರೆಯಾಗಲಾರದು. ಆನಂದಕ್ಕೆ