ನವದೆಹಲಿ: ಇಂದು ಡಾರ್ಕ್ ಮೋಡ್ ಎಂಬುದು ಫೇಸ್ ಬುಕ್, ಯೂಟ್ಯೂಬ್, ಮೆಸೆಂಜರ್ ಸೇರಿಂದತೆ ಹಲವು ಆ್ಯಪ್ ನಲ್ಲಿ ಸಕ್ರಿಯವಾಗಿದೆ. ಇದನ್ನು ಬಳಸುವವರ ಪ್ರಮಾಣ ಕೂಡ ಹೆಚ್ಚಿದೆ ಎಂದು ಅಧ್ಯಯನವೊಂದರ ವರದಿ ತಿಳಿಸಿದೆ. ಇದೀಗ ಗೂಗಲ್ ಆ್ಯಪ್ ಮತ್ತು ವಾಟ್ಸಾಪ್ ವೆಬ್ ನಲ್ಲೂ ಡಾರ್ಕ್ ಥೀಮ್ ಗಳ ಆಯ್ಕೆ ಬಂದಿದ್ದು ಈ ಫೀಚರ್ ನ್ನು ಹೇಗೆ ಬಳಸಬಹುದು ಎಂಬ ಮಾಹಿತಿ ಇಲ್ಲಿದೆ.
WABetaInfo ಎಂಬ ಸಂಸ್ಥೆ ವಾಟ್ಸಾಪ್ ವೆಬ್ ಡಾರ್ಕ್ ಮೋಡ್ ಥೀಮ್ ಕುರಿತು ಮಾಹಿತಿ ಹಂಚಿಕೊಂಡಿದ್ದು , ಅದನ್ನು ಬಳಸುವ ಟ್ರಿಕ್ಸ್ ಹೇಳಿದೆ. ಅದಾಗ್ಯೂ ವಾಟ್ಸಾಪ್ ವೆಬ್ ನಲ್ಲಿ ಅಧಿಕೃತವಾಗಿ ಡಾರ್ಕ್ ಮೋಡ್ ಫೀಚರ್ ಬಿಡುಗಡೆಯಾಗಿಲ್ಲ. ಈಗಲೇ ಯಾರಾದರೂ ಡಾರ್ಕ್ ಮೋಡ್ ಹೊಂದಬೇಕೆಂದು ಬಯಸಿದರೆ ಈ ಕೆಳಗಿನ ತಂತ್ರವನ್ನು ಅನುಸರಿಸಬಹುದು.
ವಾಟ್ಸಾಪ್ ವೆಬ್‌ನಲ್ಲಿ ಡಾರ್ಕ್ ಮೋಡ್ !
ಮೊದಲು ವಾಟ್ಸಾಪ್ ವೆಬ್ ಗೆ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ಲಾಗಿನ್ ಆಗಬೇಕಾಗುತ್ತದೆ. ಒಂದು ಬಾರಿ ನೀವು ಲಾಗಿನ್ ಆದ ತಕ್ಷಣ ಚಾಟ್ ಭಾಗದ ಖಾಲಿ ಜಾಗದ (ಸ್ಪೇಸ್) ಮೇಲೆ ಕರ್ಜರ್ ಇಟ್ಟು ರೈಟ್ ಕ್ಲಿಕ್ ಮಾಡಬೇಕು. ಹಾಗೆ ಮಾಡಿದಾಗ ಕೂಡಲೇ ಬ್ರೌಸರ್ ನಿಮಗೆ ಪೇಜ್‌ನ ಕೋಡ್ ಅನ್ನು ತೋರಿಸುತ್ತದೆ. ಅಲ್ಲಿ ಸ್ಕ್ರಾಲ್ ಮಾಡಬೇಕಿದ್ದು, Sting –body class=“web” ಅನ್ನು ಹುಡುಕಬೇಕಾಗುವುದು. ಈಗ ನಾವು web ಎಂಬ ಒರಿಜಿನಲ್ ಥೀಮ್ ಅನ್ನು ಬಳಸುತ್ತಿದ್ದೇವೆ. ಆದರೆ, Sting –body class=“web” ಗೆ ಭೇಟಿ ಕೊಟ್ಟಾಗ. web ಜಾಗದಲ್ಲಿ web dark ಎಂದು ಟೈಪ್ ಮಾಡಿದಲ್ಲಿ ಡಾರ್ಕ್ ಮೋಡ್‌ಗೆ ಬದಲಾಗುತ್ತದೆ. ಆದರೆ ಒಮ್ಮೆ ನೀವು ಬಳಸಿ ಸೈನ್ ಔಟ್ ಆಗುವುದಾಗಲಿ, ಪೇಜ್ ಅನ್ನು ರೀ-ಫ್ರೆಶ್ ಮಾಡುವುದಾಗಲೀ ಮಾಡಿದರೆ ಪುನಃ ಹಳೇ ಮೋಡ್‌ಗೆ ಬದಲಾಗುತ್ತದೆ.
ಗೂಗಲ್ ಆ್ಯಪ್‌ನಲ್ಲಿ ಡಾರ್ಕ್ ಮೋಡ್ !
ಟೆಕ್ ಲೋಕದ ದೈತ್ಯ ಸರ್ಚ್ ಎಂಜಿನ್ ಗೂಗಲ್ ಸಹ ತನ್ನ ಆ್ಯಪ್‌ನಲ್ಲಿ ಡಾರ್ಕ್ ಮೋಡ್ ಥೀಮ್ ಅನ್ನು ಪರಿಚಯಿಸಿದೆ. ಗೂಗಲ್ ಆ್ಯಪ್‌ಗೆ ಭೇಟಿ ನೀಡಿ. ಅಲ್ಲಿ ಕಾಣುವ ಮೋರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆ ಮೂಲಕ ಸೆಟ್ಟಿಂಗ್ಸ್ ತೆರೆಯಬೇಕಾಗುತ್ತದೆ. ಅಲ್ಲಿ ಕಾಣುವ ಜನರಲ್ ಆಪ್ಷನ್ ಗೆ ತೆರಳಿ ಥೀಮ್ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿ ನಿಮಗೆ ಲೈಟ್ ಹಾಗೂ ಹಾಗೂ ಡಾರ್ಕ್ ಎಂಬ 2 ಆಪ್ಷನ್‌ಗಳು ಗೋಚರಿಸುತ್ತವೆ. ಅಲ್ಲಿ ಡಾರ್ಕ್ ಥೀಮ್ ಮೇಲೆ ಕ್ಲಿಕ್ ಮಾಡಿದರೆ ಗೂಗಲ್ ಆ್ಯಪ್ ಡಾರ್ಕ್ ಮೋಡ್ ಗೆ ಬದಲಾಗುತ್ತದೆ.