Advertisement

ಅಂತರ್ಜಾಲದ ಮೂಲಕ ಗಳಿಕೆ ಹೇಗೆ?

12:06 AM Feb 03, 2020 | Sriram |

ಇಂದಿನ ಜಗತ್ತು ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಅವಲಂಬಿಸಿರುವ ಅಂತರ್ಜಾಲವೇ ಅನೇಕ ಉದ್ಯೋಗಗಳ ಸೃಷ್ಟಿಕರ್ತ ಎಂಬ ಸತ್ಯ ಹಲವರಿಗೆ ಗೊತ್ತಿಲ್ಲ. ದುಡಿಯುವ ಮನಸ್ಸಿದ್ದರೆ ಹಣ ಸಂಪಾದಿಸಲು ಅನೇಕ ಮಾರ್ಗಗಳಿವೆ. ಸ್ವಲ್ಪ ಜಾಣ್ಮೆ, ಎಲ್ಲರಿಗಿಂತ ಭಿನ್ನವಾದ ಯೋಚನೆ ಇದ್ದರೆ ಸಾಕು,ಜಗತ್ತನ್ನೆ ಗೆಲ್ಲಬಹುದು.

Advertisement

ದುಡಿಯುವ ಮನಸ್ಸಿದ್ದವರಿಗೆ ಇಂದು ಹಣ ಸಂಪಾದಿಸಲು ಅನೇಕ ಮಾರ್ಗಗಳಿವೆ. ಇಂದಿನ ಜಗತ್ತು ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಅವಲಂಬಿಸಿರುವ ಅಂತರ್ಜಾಲವೇ ಅನೇಕ ಉದ್ಯೋಗಗಳ ಸೃಷ್ಟಿಕರ್ತ ಎಂಬ ಸತ್ಯ ಹಲವರಿಗೆ ಗೊತ್ತಿಲ್ಲ. ಅಂತರ್ಜಾಲಗಳಲ್ಲಿ ಪೂರ್ಣಕಾಲಿಕ ಅಥವಾ ಅರೆಕಾಲಿಕವಾಗಿ ದುಡಿದು ಹಣ ಗಳಿಸಲು ಸಾಕಷ್ಟು ಅವಕಾಶಗಳಿದ್ದು ಅವುಗಳ ಕಿರು ಮಾಹಿತಿ ಇಲ್ಲಿದೆ.

ನಿಮ್ಮದೇ ವೆಬ್‌ಸೈಟ್‌ ಆರಂಭಿಸಿ
ಮೆಕ್ಯಾನಿಕಲ್‌, ಹೆಲ್ತ್‌, ಸಾಮಾಜಿಕ ವಿಷಯಗಳು, ಆಧ್ಯಾತ್ಮ ಹೀಗೆ ಹತ್ತು ಹಲವು ವಿಷಯಗಳನ್ನಾಧರಿಸಿ ಇಂದು ಸಾವಿರಾರು ವೆಬ್‌ಸೈಟ್‌ಗಳು ಕಾರ್ಯಾಚರಿಸುತ್ತಿವೆ. ಒಂದು ನಿರ್ದಿಷ್ಟ ವಿಷಯದಲ್ಲಿ ನೀವು ಪರಿಣತರಾಗಿದ್ದರೆ ನೀವೂ ಕೂಡ ವೆಬ್‌ಸೈಟ್‌ ಆರಂಭಿಸಬಹದು. ಉತ್ತಮ ಗುಣಮಟ್ಟದ ಕಂಟೆಂಟ್‌ಗಳನ್ನು ನೀಡಿದ್ದೇ ಆದಲ್ಲಿ ವೀಕ್ಷಕರು/ ಓದುಗರ ಸಂಖ್ಯೆಯೂ ಹೆಚ್ಚುವ ಜತೆಗೆ ಉತ್ತಮ ಆದಾಯಕ್ಕೂ ತೊಂದರೆಯಾಗದು.

ಭಾಷಾಂತರ
ಭಾಷಾಂತರಿಗಳಿಗೆ ಇಂದು ಬಹು ಬೇಡಿಕೆ ಯಿದೆ.ಯಾವುದಾದರೂ ಎರಡು ನಿರ್ದಿಷ್ಟ ಭಾಷೆಗಳ ಮೇಲೆ ಉತ್ತಮ ಹಿಡಿತ ವಿದ್ದರೆ ನೀವೂ ಉತ್ತಮ ಭಾಷಾಂತರಿ ಗಳಾಗ ಬಹುದು. ಅರೆಕಾಲಿಕ ಉದ್ಯೋಗ ವಾಗಿಯೂ ಇದನ್ನು ಮಾಡ ಬಹು ದಾಗಿದ್ದು ಸಾಮಾನ್ಯವಾಗಿ ಭಾಷಾಂತರಿತ ಪದಗಳ ಆಧಾರದಲ್ಲಿ ವೇತನ ನೀಡಲಾಗುತ್ತದೆ.

ಆನ್‌ಲೈನ್‌ ಟ್ಯುಟೋರಿಯಲ್‌
ಆನ್‌ಲೈನ್‌ ಟ್ಯುಟೋರಿಯಲ್‌ಗ‌ಳು ಇಂದು ಬಹಳ ಜನಪ್ರಿಯವಾಗಿದ್ದು, ಕೂತ ಜಾಗದಿಂದಲೇ ಪಾಠ ಕೇಳುವ ಮಾಹಿತಿ ಪಡೆಯುವ ಮನಃಸ್ಥಿತಿಯಲ್ಲಿ ಜನರಿದ್ದಾರೆ. ಹೀಗಾಗಿ ಆನ್‌ಲೈನ್‌ ಟ್ಯುಟೋರಿಯಲ್‌ಗ‌ಳ ಸಂಖ್ಯೆಯೂ ಹೆಚ್ಚುತ್ತಿದೆ. ಯೂಟ್ಯೂಬ್‌ಗಳಲ್ಲಿ ತಮ್ಮದೇ ಆದ ಚಾನೆಲ್‌ಗ‌ಳನ್ನು ಕ್ರಿಯೇಟ್‌ ಮಾಡಿ ಆ ಮೂಲಕ ನಿರ್ದಿಷ್ಟ ವಿಷಯಗಳ ಪಾಠ, ಪ್ರವಚನ ಮಾಡಲಾಗುತ್ತದೆ. ನೀವು ನಿರ್ದಿಷ್ಟ ವಿಷಯ ಪರಿಣತರಾಗಿದ್ದಲ್ಲಿ ನೀವೂ ಕೂಡ ಆನ್‌ಲೈನ್‌ ಟ್ಯುಟೋರಿಯಲ್‌ ಆರಂಭಿಸಬಹುದು.

Advertisement

ವೆಬ್‌ಸೈಟ್‌ ಡಿಸೈನಿಂಗ್‌
ಇತ್ತೀಚೆಗೆ ಪ್ರತಿಯೊಂದು ಉದ್ಯಮಗಳೂ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳು, ಅಂತರ್ಜಾಲಗಳನ್ನು ಅವಲಂಬಿಸುತ್ತಿವೆ. ತಮ್ಮದೇ ಆದ ವೆಬ್‌ಸೈಟ್‌ಗಳನ್ನು ಆರಂಭಿಸುವ ಮೂಲಕ ತಮ್ಮ ಸೇವೆ, ವಸ್ತುಗಳ ಮಾಹಿತಿ ನೀಡುತ್ತವೆ. ಈ ಕಾರಣದಿಂದಲೇ ವೆಬ್‌ಡಿಸೈನರ್‌ಗಳಿಗೆ ಬಹುಬೇಡಿಕೆ ಇದೆ. ವೆಬ್‌ಸೈಟ್‌ ಡಿಸೈನಿಂಗ್‌ ಒಂದನ್ನು ಮಾಡುವುದರಿಂದ ಸಾಮಾನ್ಯವಾಗಿ 20 ಸಾವಿರದಿಂದ 1 ಲಕ್ಷ ರೂ.ಗೂ ಅಧಿಕ ಹಣ ಗಳಿಸಬಹುದು.

ಪಿಟಿಸಿ ಸೈಟ್ಸ್‌
ಕೇವಲ ಜಾಹೀರಾತುಗಳನ್ನು ವೀಕ್ಷಿಸಿದ್ದಕ್ಕಾಗಿ ಕೆಲವು ವೆಬ್‌ಸೈಟ್‌ಗಳು ನಿಮಗೆ ಹಣ ನೀಡುತ್ತವೆ. ಇದನ್ನು ಪೇಯ್ಡ ಟು ಕ್ಲಿಕ್‌ (ಪಿಟಿಸಿ) ಎಂದು ಕರೆಯಲಾಗುತ್ತದೆ. ಈ ತರಹದ ಎಲ್ಲ ವೆಬ್‌ಸೈಟ್‌ಗಳು ನಂಬಿಕೆಗೆ ಅರ್ಹವಲ್ಲದ ಕಾರಣ ತುಸು ಎಚ್ಚರಿಕೆಯೂ ಅತ್ಯಗತ್ಯ.

- ಪ್ರಸನ್ನ ಹೆಗಡೆ ಊರಕೇರಿ

Advertisement

Udayavani is now on Telegram. Click here to join our channel and stay updated with the latest news.

Next