Advertisement

ಡಿಜಿಟಲ್ ಹಣ ಪಾವತಿ ಆ್ಯಪ್‍ಗಳಲ್ಲಿ ಯುಪಿಐ ಪಿನ್ ಬದಲಾಯಿಸುವುದು ಹೇಗೆ ?

02:02 PM Apr 07, 2021 | Team Udayavani |

ಗೂಗಲ್‌ ಪೇ, ಫೋನ್ ಪೇ ಹಾಗೂ ಪೇಟಿಎಮ್‌ ಮೂಲಕ ವ್ಯವಹರಿಸುವವರು ಸುರಕ್ಷತೆಯತ್ತ ಗಮನ ಹರಿಸುವುದು ಅತಿ ಮುಖ್ಯ. ಯಾಕಂದರೆ ಇಂದಿನ ದಿನಗಳಲ್ಲಿ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚುತ್ತಿದೆ. ಯಾವುದೋ ಮೂಲೆಯಲ್ಲಿ ಕುಳಿತ ಡಿಜಿಟಲ್ ಖದೀಮರು ನಮಗೆ ಗೊತ್ತಾಗದೇ ನಮ್ಮ ಖಾತೆಗಳಿಗೆ ಕನ್ನ ಹಾಕುತ್ತಾರೆ. ಈ ದೃಷ್ಠಿಯಿಂದ ಯುಪಿಐ ಪಿನ್‌ ಅನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು.

Advertisement

ಹಾಗಾದರೆ ಡಿಜಿಟಲ್ ಹಣ ಪಾವತಿ ಆ್ಯಪ್‍ಗಳಲ್ಲಿ ಯುಪಿಐ ಪಿನ್ ಬದಲಾಯಿಸುವುದು ಹೇಗೆ ?

ಗೂಗಲ್ ಪೇ UPI ಪಿನ್ ಬದಲಾವಣೆ:

ಮೊದಲಿಗೆ ನಿಮ್ಮ ಮೊಬೈಲ್ ಫೋನ್‌ನಲ್ಲಿ Google Pay ಆ್ಯಪ್ ತೆರೆಯಿರಿ. ಸ್ಕ್ರೀನ್‌ ಮೇಲಿನ ಎಡ ಭಾಗದಲ್ಲಿಯಲ್ಲಿ ಕಾಣುವ ನಿಮ್ಮ ಫೋಟೋವನ್ನು ಟ್ಯಾಪ್ ಮಾಡಿ. ನಂತರ ‘ಬ್ಯಾಂಕ್ ಖಾತೆ’ ಕ್ಲಿಕ್ ಮಾಡಿ. ನೀವು  ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ. ‘ಇನ್ನಷ್ಟು’ ಟ್ಯಾಪ್ ಮಾಡಿ ನಂತರ ‘ಚೇಂಜ್ ಯುಪಿಐ ಪಿನ್’ ಆಯ್ಕೆಮಾಡಿ. ಹೊಸ ಯುಪಿಐ ಪಿನ್ ರಚಿಸಿ. ಅದೇ ಯುಪಿಐ ಪಿನ್ ಅನ್ನು ಮತ್ತೆ ನಮೂದಿಸಿ.

ಫೋನ್‌ ಪೇಯಲ್ಲಿ UPI ಪಿನ್ ಬದಲಾವಣೆ:

Advertisement

ಫೋನ್‌ಪೇ ಪರದೆಯ ಮೇಲಿನ ಬಲ ಮೂಲೆಯಲ್ಲಿ ನೀಡಲಾಗಿರುವ ಮೂರು ಬಾರ್‌ಗಳ ಐಕಾನ್‌ ಮೇಲೆ ಟ್ಯಾಪ್ ಮಾಡಿ. ಆಗ ಮೆನು ತೆರೆಯುತ್ತದೆ. ನಂತರ ‘ಬ್ಯಾಂಕ್ ಅಕೌಂಟ್ಸ್’ ವಿಭಾಗಕ್ಕೆ ಹೋಗಿ. ನಂತರ ನೀವು ಯುಪಿಐ ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ. ಆನಂತರ ನಿಮ್ಮ ಡೆಬಿಟ್ / ಎಟಿಎಂ ಕಾರ್ಡ್‌ನ ಕೊನೆಯ ಆರು ಸಂಖ್ಯೆಗಳು ಮತ್ತು ಮುಕ್ತಾಯ ದಿನಾಂಕವನ್ನು ನಮೂದಿಸಿ. ನಿಮ್ಮ ಬ್ಯಾಂಕಿನಿಂದ ನೀವು ಸ್ವೀಕರಿಸುವ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಅನ್ನು ನಮೂದಿಸಿ. ಸಬ್‌ಮಿಟ್‌ ಬಟನ್ ಕ್ಲಿಕ್ ಮಾಡಿ.

ಪೇಟಿಎಮ್‌ UPI ಪಿನ್ ಬದಲಾವಣೆ:

ನಿಮ್ಮ ಫೋನ್‌ನಲ್ಲಿ Paytm ಆ್ಯಪ್ ತೆರೆಯಿರಿ. ಪರದೆಯ ಮೇಲಿನ ಎಡ ಭಾಗದಲ್ಲಿ ಲಭ್ಯವಿರುವ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ (ನಿಮ್ಮ ಹೆಸರಿನ ಪಕ್ಕದಲ್ಲಿಯೇ). ಕೆಳಗೆ ಸ್ಕ್ರಾಲ್ ಮಾಡಿ ಮತ್ತು ‘ಸೆಟ್ಟಿಂಗ್‌ಗಳು’ ಟ್ಯಾಪ್ ಮಾಡಿ. ನಾಲ್ಕು ಆಯ್ಕೆಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ, ‘ಪಾವತಿ ಸೆಟ್ಟಿಂಗ್’ ಅನ್ನು ಟ್ಯಾಪ್ ಮಾಡಿ. ಪಾವತಿ ಸೆಟ್ಟಿಂಗ್ ಅಡಿಯಲ್ಲಿ ‘ಉಳಿಸಿದ ಪಾವತಿ ವಿವರಗಳು’ ಕ್ಲಿಕ್ ಮಾಡಿ. ನೀವು ಯುಪಿಐ ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯ ಮೇಲೆ ಕ್ಲಿಕ್ ಮಾಡಿ. ಹೊಸ ಯುಪಿಐ ಪಿನ್ ರಚಿಸಿ’ ಟ್ಯಾಪ್ ಮಾಡಿ. ನಿಮ್ಮ ಕಾರ್ಡ್ ಮತ್ತು ಮುಕ್ತಾಯ ದಿನಾಂಕದ ಕೊನೆಯ 6 ಅಂಕೆಗಳನ್ನು ನಮೂದಿಸಿ. ಕಂಟಿನ್ಯೂ ಕ್ಲಿಕ್ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next