ಹೊಸದಿಲ್ಲಿ : ಈಗ ಎಲ್ಲದಕ್ಕೂ ಒಂದೇ ಕಾರ್ಡ್ – ಅದುವೇ ಆಧಾರ್ ಕಾರ್ಡ್ ಎಂಬ ಹಂತವನ್ನು ನಾವು ತಲುಪಿದ್ದೇವೆ.
ಆದರೆ ನಮ್ಮ ಆಧಾರ್ ಕಾರ್ಡ್‌ನಲ್ಲಿ ನಮ್ಮ ಹೆಸರು, ವಿಳಾಸ, ಲಿಂಗ್, ಹುಟ್ಟಿದ ದಿನ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮುಂತಾದ ಮಾಹಿತಿಗಳನ್ನು ದಾಖಲಿಸುವಾಗ ಸಹಜವಾಗಿಯೇ ತಪ್ಪುಗಳು ನುಸುಳಿರಬಹುದು. ಆ ತಪ್ಪುಗಳಿಂದಾಗಿ ನೀವು ಇನ್ನಿಲ್ಲದ ಪಾಡನ್ನು ಪಡಬೇಕಾದ ಸ್ಥಿತಿ ಇದೆ. ಇದನ್ನು ನಿವಾರಿಸುವ ಬಗೆ ಹೇಗೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಅದಕ್ಕಾಗಿ ಇಲ್ಲೊಂದು ಮಾರ್ಗದರ್ಶಿ ಇದೆ.
ಆಧಾರ್ ಕಾರ್ಡ್‌ನಲ್ಲಿ ತಪ್ಪಾಗಿ ದಾಖಲಾಗಿರುವ ನಿಮ್ಮ ಖಾಸಗಿ ದಾಖಲೆಗಳನ್ನು ಸರಿಪಡಿಸಲು ನೀವು ಪ್ರಪ್ರಥಮವಾಗಿ ಯುಐಡಿಎಆಐ ವೆಬ್ ಸೈಟ್ ಸಂದರ್ಶಿಸಬೇಕು. ಅದರ ಯುಆರ್‌ಎಲ್ ಹೀಗಿದೆ :
Visit the official UIDAI ebsite:
https://ssup.uidai.gov.in/web/guest/update
ಕೆಲವೊಂದು ಮುಖ್ಯ ಖಾಸಗಿ ವಿವರಗಳನ್ನು ಸರಿಪಡಿಸಲು ಅಗತ್ಯವಿರುವ ದಾಖಲೆಪತ್ರಗಳನ್ನು ಸಲ್ಲಿಸಬೇಕಾಗುವುದು; ಆದರೆ ಮೊಬೈಲ್ ಸಂಖ್ಯೆ, ಲಿಂಗ, ವಿಳಾಸ ಮುಂತಾದ ವಿವರಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಯಾವುದೇ ದಾಖಲೆ ಪತ್ರಗಳು ಬೇಕಾಗಿಲ್ಲ.
ಆಧಾರ್ ವೆಬ್‌ಸೈಟ್ ಸಂದರ್ಶಿಸಿದಾಗ ನಿಮಗೆ ಈ ಕೆಳಗಿನ ಆಯ್ಕೆ ಗೋಚರವಾಗುತ್ತದೆ :
ಮೇಲಿನ ಚಿತ್ರದಲ್ಲಿ ತೋರಿಸದಂತೆ ನಿಮ್ಮ ಆಯ್ಕೆಯನ್ನು ನೀವು ಕ್ಲಿಕ್ ಮಾಡುವ ಮೂಲಕ ಆಯ್ದುಕೊಳ್ಳಬೇಕು.
ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿದಾಕ್ಷಣ ನಿಮಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಪೋನಿಗೆ ಒನ್ ಟೈಮ್ ಪಾಸ್‌ವರ್ಡ್ (ಓಟಿಪಿ) ಬರುತ್ತದೆ.
ಟೆಕ್ಸ್‌ಟ್ ವೆರಿಫಿಕೇಶನ್ ಬಾಕ್ಸ್‌ನಲ್ಲಿ ನೀವು ನಿಮಗೆ ದೊರಕಿರುವ ಓಟಿಪಿಯನ್ನು ಎಂಟರ್ ಮಾಡಬೇಕು. ಅದಕ್ಕಾಗಿ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಈ ಚಿತ್ರವು ಕಾಣಿಸಿಕೊಳ್ಳುತ್ತದೆ :
ಇದನ್ನು ಕ್ಲಿಕ್ ಮಾಡಿದಾಕ್ಷಣ ನಿಮಗೆ ಹಲವಾರು ಆಯ್ಕೆಗಳು ಗೋಚರವಾಗುತ್ತವೆ : ಹೆಸರು ಬದಲಾವಣೆ, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಬದಲಾವಣೆ ಇತ್ಯಾದಿ.
ನೇಮ್ ಚೇಂಜ್ ಆಪ್ಶನ್ ಅನ್ನು ನೀವು ಆಯ್ಕೆ ಮಾಡಬೇಕು; ಬಳಿಕ ಅಲ್ಲಿ ಸರಿಯಾದ ರೀತಿಯಲ್ಲಿ ನಿಮ್ಮ ಹೆಸರನ್ನು ತುಂಬಬೇಕು.
ಮುಂದಿನ ಸ್ಟೆಪ್ ಏನೆಂದರೆ ಅಗತ್ಯವಿರುವ ದಾಖಲೆಪತ್ರಗಳನ್ನುಸಲ್ಲಿಸುವುದು.
ನಿಮಗೆ ಎರಡು ಬಿಪಿಓ ಸರ್ವಿಸ್ ಪ್ರೊವೈಡರ್ ಆಯ್ಕೆಗೆ ಸಿಗುತ್ತವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಕ್ಲಿಕ್ ಮಾಡಬೇಕು.
ಬದಲಾವಣೆ/ತಿದ್ದುಪಡಿಯ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ನೀವು “ಸಬ್‌ಮಿಟ್’ ಮಾಡಬೇಕಾಗುತ್ತದೆ. ಅದು ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಈ ರೀತಿಯಾಗಿ ಗೋಚರವಾಗುತ್ತದೆ:
ಇದೆಲ್ಲವೂ ಮುಗಿದ ಬಳಿಕ ನಿಮಗೆ ಯುಆರ್‌ಎನ್ ನಂಬರ್ ಸಿಗುತ್ತದೆ. ಈ ನಂಬರನ್ನು ನೀವು ಜಾಗ್ರತೆಯಾಗಿ ಇರಿಸಿಕೊಂಡು ನೀವು ಮಾಡಿರುವ ಬದಲಾವಣೆ/ತಿದ್ದುಪಡಿಗಳು ಕಾರ್ಯಗತವಾಗುವುದನ್ನು ಆನ್‌ಲೈನ್‌ನಲ್ಲೇ ತಿಳಿದುಕೊಳ್ಳಬಹುದು.