Advertisement
ಏನಿದು ನೆಟ್ ರನ್ ರೇಟ್? ಇದು ಯಾಕೆ ಮುಖ್ಯ? ಇದರ ಲೆಕ್ಕಾಚಾರ ಹೇಗೆ ಎನ್ನುವ ಕುರಿತು ಬಹಳಷ್ಟು ಅಭಿಮಾನಿಗಳಿಗೆ ತಿಳಿದಿಲ್ಲ. ನೆಟ್ ರನ್ ರೇಟ್ ಲೆಕ್ಕಾಚಾರದ ಬಗ್ಗೆ ಕೆಲವೊಂದು ಕುತೂಹಲಕಾರಿ ವಿಚಾರಗಳು ಇಲ್ಲಿದೆ.
Related Articles
Advertisement
ನೆಟ್ ರನ್ ರೇಟ್ ಲೆಕ್ಕಾಚಾರ ಮಾಡುವುದು ಕಷ್ಟದ ಗಣಿತವೇನಲ್ಲ. ಸಾಮಾನ್ಯವಾಗಿ ಈ ಸೂತ್ರವನ್ನು ಬಳಸಲಾಗುತ್ತದೆ. (ತಂಡ ‘ಎ’ ಗಳಿಸಿದ ರನ್ ಭಾಗಿಸು ಆಡಿದ ಓವರ್ ) ಮೈನಸ್ ( ತಂಡ ‘ಬಿ’ ಗಳಿಸಿದ ರನ್ ಭಾಗಿಸು ಆಡಿದ ಓವರ್) = ನೆಟ್ ರನ್ ರೇಟ್.
ಉದಾಹರಣೆಗೆ ತಂಡ ‘ಎ’ ನಿಗದಿತ 20 ಓವರ್ ಗಳಲ್ಲಿ 213 ರನ್ ಗಳಿಸಿದರೆ ಆಗ ಅದರ ರನ್ ರೇಟ್ 10.65. ಬಿ ತಂಡ 20 ಓವರ್ ಗಳಲ್ಲಿ 176 ರನ್ ಬಾರಿಸಿದರೆ ಅದರ ರನ್ ರೇಟ್ 8.8. ಈಗ 10.65 ಮತ್ತು 8.8 ಗಳ ವ್ಯತ್ಯಾಸ 1.85 ಈ ಪಂದ್ಯದ ನೆಟ್ ರನ್ ರೇಟ್. ಅಂದರೆ ಗೆದ್ದ ತಂಡಕ್ಕೆ +1.85 ಮತ್ತು ಸೋತ ತಂಡಕ್ಕೆ -1.85 ಸಿಗುತ್ತದೆ.