ಹೊಸದಿಲ್ಲಿ : ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸಿದ ಬಳಿಕ ಅಲ್ಲಿ ಫೋನ್, ಇಂಟರ್‌ನೆಟ್ ಸಂಪರ್ಕಗಳೆಲ್ಲ ಸ್ಥಗಿತಗೊಂಡ ಕಾರಣ ಓರ್ವ ಪ್ಯಾರಾಬಾಸ್ಕೆಟ್‌ಬಾಲ್ ಆಟಗಾರ್ತಿಯ ಕ್ರೀಡಾ ಭವಿಷ್ಯಕ್ಕೆ ಸಂಚಕಾರ ಉಂಟಾಗುವ ಅಪಾಯವಿತ್ತು. ಆದರೆ ಇಬ್ಬರು ಅಧಿಕಾರಿಗಳು ಮತ್ತು ಸೇನೆಯ ಶ್ರಮದಿಂದಾಗಿ ಈ ಆಟಗಾರ್ತಿ ತಂಡ ಸೇರಿಕೊಳ್ಳುವಂತಾಗಿದೆ.
ಕಾಶ್ಮೀರದ ಇಶ್ರತ್ ಅಖೆ¤àರ್ (24) ನವಂಬರ್-ಡಿಸೆಂಬರ್‌ನಲ್ಲಿ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಏಷ್ಯಾ- ಓಶಿಯಾನಿಯ ವೀಲ್‌ಚೇರ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಸಂವಹನ ಮಾಧ್ಯಮ ಇಲ್ಲದ ಕಾರಣ ಅವರಿಗೆ ಇದನ್ನು ತಿಳಿಸಲು ಸಾಧ್ಯವಾಗಿರಲಿಲ್ಲ. ಚೆನ್ನೈಯಲ್ಲಿ ನಡೆಯಲಿರುವ ತರಬೇತಿಗಾಗಿ ಇಶ್ರತ್‌ರನ್ನು ಕೂಡಲೇ ಕಳುಹಿಸಬೇಕಾಗಿತ್ತು.
ವೀಲ್‌ಚೇರ್ ಬಾಸ್ಕೆಟ್‌ಬಾಲ್ ವನಿತಾ ತಂಡದ ಕೋಚ್ ಆಗಿರುವ ನೌಕಾಪಡೆಯ ಮಾಜಿ ಅಧಿಕಾರಿ ಲೂಯಿಸ್ ಜಾರ್ಜ್ ತನ್ನ ಶಾಲಾ ದಿನಗಳ ಸ್ನೇಹಿತ ನಿವೃತ್ತ ಕರ್ನಲ್ ಇಸೆನೊವರ್ ಜತೆಗೆ ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ಇಶ್ರತ್ ವಿಷಯ ಪ್ರಸ್ತಾಪಿಸಿದರು. ಯಾರ ಬಳಿಯೂ ಇಶ್ರತ್‌ರ ಸರಿಯಾದ ವಿಳಾಸ ಇರಲಿಲ್ಲ. ಆದರೆ ಇಸೆನೊವರ್ ಬರೀ ಒಂದು ಫೊಟೊದ ಸಹಾಯದಿಂದ ಇಶ್ರತ್‌ಳನ್ನು ಪತ್ತೆ ಹಚ್ಚಿದರು. ಈ ಕೆಲಸದಲ್ಲಿ ಅವರಿಗೆ ನೆರವಾದದ್ದು ಯೋಧರು.
ಬಾರಾಮುಲ್ಲಾ ಜಿಲ್ಲೆಯಲ್ಲಿ ಇಶ್ರತ್ ಮನೆಯಿದೆ ಎಂಬ ಮಾಹಿತಿಯಷ್ಟೇ ಅವರ ಬಳಿ ಇದ್ದದ್ದು. ಆಕೆಗಾಗಿ ಯೋಧರ ತಂಡವೊಂದು ಫೊಟೊ ಹಿಡಿದುಕೊಂಡು ಮನೆ ಮನೆ ಹುಡುಕಾಟ ನಡೆಸಿತು. ಅವರ ಪ್ರಯತ್ನ ಆ.25ರಂದು ಫಲ ನೀಡಿತು. ಬಾರಾಮುಲ್ಲಾದ ಬಂಗಾxರದಲ್ಲಿದ್ದರು ಇಶ್ರತ್.
ಮನೆಯವರು ಮೊದಲು ಯೋಧರನ್ನು ಕಂಡು ಹೆದರಿದರೂ ವಿಷಯ ತಿಳಿದಾಗ ಮನೆಯಲ್ಲಿ ಖುಷಿಯ ಅಲೆಯೆದ್ದಿತು.