Advertisement

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

09:09 AM May 16, 2024 | Team Udayavani |

ಹೊಸದಿಲ್ಲಿ: ಐರೋಪ್ಯ ಒಕ್ಕೂಟ ಸ್ಲೊವಾಕ್‌ ದೇಶದ ಪ್ರಧಾನ ಮಂತ್ರಿ ರಾಬರ್ಟ್‌ ಫಿಕೊ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ.

Advertisement

ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಹ್ಯಾಂಡೊವಾ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಹೊರಬರುತ್ತಿದ್ದಾಗ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದಾನೆ ಘಟನೆಯಲ್ಲಿ ರಾಬರ್ಟ್‌ ಫಿಕೊ ಹೊಟ್ಟೆ ಹಾಗೂ ತಲೆಯ ಭಾಗಕ್ಕೆ ಗುಂಡು ತಗುಲಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಘಟನೆ ವೇಳೆ ಅಲ್ಲೇ ಇದ್ದ ಪೊಲೀಸರು ಕೂಡಲೇ ಕೃತ್ಯವೆಸಗಿದ ವ್ಯಕ್ತಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಏರಿದ್ದರು.

ಇದನ್ನೂ ಓದಿ: Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next