Advertisement
* ಫೇಸ್ಬುಕ್ಅಪ್ಲೋಡ್ ಆಗಿರುವ ನಿಮ್ಮ ಪೋಸ್ಟ್‌ಗಳು ಯಾರಿಗೆ ಕಾಣಬೇಕು ಎಂಬ ಚೌಕಟ್ಟು ರೂಪಿ ಸಿಕೊಳ್ಳ ಬೇಕು. ಪಬ್ಲಿಕ್, ಫ್ರೆಂಡ್ಸ್, ಫ್ರೆಂಡ್ಸ್ ಆಫ್ ಫ್ರೆಂಡ್ಸ್, ಓನ್ಲಿ ಮಿ ಮೊದಲಾದ ಆಯ್ಕೆಗಳನ್ನು ಫೇಸ್ ಬುಕ್ ತನ್ನ ಬಳಕೆದಾರರಿಗೆ ಒದಗಿಸಿದೆ. ನೀವು “ಫ್ರೆಂಡ್ ರಿಕ್ವೆಸ್ಟ್’ ಸ್ವೀಕರಿಸುವ ಸಂದರ್ಭ ಪರಿಚಯದವರೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಫೇಕ್ ಅಕೌಂಟ್ ರಚಿಸುವ ಮಂದಿ ಯಾರಾದೋ ಚಿತ್ರ ಬಳಸಿ ಗೆಳೆತನಕ್ಕೆ ಇಳಿಯುತ್ತಾರೆ ಎಂಬುದು ಅರಿವಿನಲ್ಲಿರಲಿ.
ನಿಮ್ಮ ಇಮೇಲ್, ಮನೆ ಅಥವಾ ಊರಿನ ವಿಳಾಸ, ಮೊಬೈಲ್ ಸಂಖ್ಯೆಗಳನ್ನು ಯಾವುದೇ ಕಾರಣಕ್ಕೆ ಪಬ್ಲಿಕ್ ಆಗಿಸಬೇಡಿ. “ಫ್ರೆಂಡ್ಸ್ ಓನ್ಲಿ’ ಆಯ್ಕೆ ಮಾಡಿಕೊಳ್ಳಿ. ಫೇಸ್‌ಬುಕ್ ಹೊಸ ಖಾತೆ ತೆರೆ ಯುವ ವೇಳೆ ಮೊಬೈಲ್ ಸಂಖ್ಯೆ ನೀಡಿದರೆ, ಬಳಿಕ ಅದನ್ನು “ಓನ್ಲಿ ಮೀ’ ಆಯ್ಕೆಗೆ ಬದಲಾಯಿಸಿಕೊಳ್ಳಿ. ಇದ ರಿಂದ ಅಪರಿಚಿತರಿಂದ ಕಿರಿಕಿರಿಯನ್ನು ತಡೆಯಬಹುದು. ಚಿತ್ರಗಳನ್ನು ಹಂಚಿ ಕೊಳ್ಳುವುದಾದರೆ “ಪೋಸ್ಟ್’ ಮೇಲೆ ಕಾಣುವ ಮೂರು ಚುಕ್ಕಿಗಳನ್ನು ಆಯ್ಕೆ ಮಾಡಿ, “ಎಡಿಟ್ ಪ್ರೈವೆಸಿ’ ಮೇಲೆ ಟ್ಯಾಪ್ ಮಾಡಿದ ಬಳಿಕ ಅಲ್ಲಿ ಪಬ್ಲಿಕ್, ಫ್ರೆಂಡ್ಸ್ ಮತ್ತು ನಿಮ್ಮ ಚಿತ್ರ ಯಾರಿಗೆ ಕಾಣಬೇಕು ಎಂಬುದನ್ನೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ವಾಟ್ಸಾಪ್ಪ್
ನಿಮ್ಮ ಪ್ರೊಫೈಲ್ ಪಿಕ್ಚರ್ ನಿಮ್ಮಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ ಮಾತ್ರ ಕಾಣಿಸುವಂತಹ ಆಯ್ಕೆ ಇದೆ. setting – account- privacy ಇಲ್ಲಿ ನೀವು ಕೊನೆಯ ಬಾರಿ ವಾಟ್ಸಾಪ್ ಬಳಸಿದ ಸಮಯ ಯಾರಿಗೆಲ್ಲ ಕಾಣಬೇಕು ಎಂಬುದನ್ನೂ ನಿರ್ಧರಿಸಬ ಹುದಾಗಿದೆ. ಅಲ್ಲಿ everyone, my contacts ಮತ್ತು Nobody ಎಂಬ ಆಯ್ಕೆ ಗಳಿವೆ. ನೀವು ಅಪ್‌ಡೇಟ್ ಮಾಡುವ ಸ್ಟೇಟಸ್ ಯಾರಿಗೆ ಕಾಣಬೇಕು ಎಂಬುದನ್ನೂ ಆಯ್ಕೆ ಮಾಡಿಕೊಳ್ಳಬಹುದು.
Related Articles
ಕೆಲವರು ಹೊಸ ಖಾತೆ ತೆರೆಯುವ ಧಾವಂತದಲ್ಲಿ ಸುಲಭವಾದ ಪಾಸ್‌ವರ್ಡ್‌ಗಳ ಮೊರೆ ಹೊಗುತ್ತಾರೆ. ನಿಮ್ಮ ಜಿಮೇಲ್ ಖಾತೆಯಾಗಿರಲಿ ಅಥವಾ ಸಾಮಾ ಜಿಕ ಖಾತೆಗಳಾಗಿರಲಿ; ಕಠಿನವಾದ ಪಾಸ್‌ವರ್ಡ್ ಗಳನ್ನೇ ಆಯ್ಕೆ ಮಾಡಿಕೊಳ್ಳಿ. ಬಹಳಷ್ಟು ಸಂದರ್ಭ ನಿಮ್ಮ ಗೂಗಲ್ ಖಾತೆಯನ್ನು ಹ್ಯಾಕ್ ಮಾಡಿದರೆ ನಿಮ್ಮ ಎಲ್ಲ ಸಾಮಾಜಿಕ ಜಾಲತಾಣಗಳ ಮಾಹಿತಿ ದೊರಕುವ ಅಪಾಯ ಇದೆ. ನಿಮ್ಮ ಪ್ರತಿ ಖಾತೆಗೂ ಪ್ರತ್ಯೇಕ ಪಾಸ್‌ವರ್ಡ್ ನೀಡಲು ಮರೆಯದಿರಿ. ಕೆಲವರು ನೆನಪಿನಲ್ಲಿಟ್ಟುಕೊಳ್ಳಲು ಸುಲಭ ಎಂದು ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, 123456 ಈ ಮಾದರಿಯ ಪಾಸ್‌ವರ್ಡ್ ಬಳಸುವುದಿದೆ.
Advertisement
*ಟ್ವಿಟರ್ಟ್ವಿಟರ್ ಜಗತ್ತಿನ ಹೈ ಕ್ಲಾಸ್ ಮಾಧ್ಯಮ. ನೀವು ಮಾಡುವ ಟ್ವೀಟ್ ಜಗತ್ತಿನಾದ್ಯಂತ ಕಾಣಬೇಕೆ ಅಥವಾ ನಿಮ್ಮ ಫಾಲೋವರ್ಸ್‌ಗೆ ಮಾತ್ರವೆ ಎಂಬುದನ್ನು ನಿರ್ಧರಿಸಿ. ಒಮ್ಮೆ ಟ್ವೀಟ್ ಆದ ಬಳಿಕ ಡಿಲೀಟ್ ಮಾಡಬಹುದೇ ವಿನಾ ಎಡಿಟ್ ಮಾಡಲು ಸಾಧ್ಯವಿಲ್ಲ. ನಿಮ್ಮ ಖಾತೆ ಪಬ್ಲಿಕ್ ಆಗಿದ್ದರೆ ಎಲ್ಲರೂ ಫಾಲೋ ರಿಕ್ವೆಸ್ಟ್ ಕಳುಹಿಸಬಹುದು. ನಿಮ್ಮ ಅನುಮತಿ ಪಡೆದು ಫಾಲೋ ಮಾಡಬೇಕಾದರೆ setting and privacy |ಕ್ಲಿಕ್ ಮಾಡಿ privacy and safety | protect your tweets ನಲ್ಲಿ ಬದಲಾಯಿಸಿಕೊಳ್ಳಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಕಾಂಟ್ಯಾಕ್ಟ್ಗಳು ಟ್ವಿಟರ್ ಖಾತೆಗೆ ಸಿಂಕ್ ಆಗಿದ್ದರೆ ಅವುಗಳನ್ನೂ ಇಲ್ಲೇ ತೆಗೆದು ಹಾಕಬಹುದಾಗಿದೆ. * ಇನ್‌ಸ್ಟಾಗ್ರಾಂ
ಇನ್‌ಸ್ಟಾrಗ್ರಾಂನಲ್ಲಿ ನೀವು ಖಾತೆ ತೆರೆಯುವ ಸಂದರ್ಭ ಫೇಸ್‌ಬುಕ್ ಮೂಲಕ ಸೈನ್‌ಇನ್ ಆಗ ಬಹುದಾಗಿದೆ. ಇದು ಉತ್ತಮ ಕ್ರಮವೇ. ಇಲ್ಲೂ ನಾವು ಹೆಚ್ಚು ಎಚ್ಚರ ವಹಿಸುವ ಅಗತ್ಯ ಇದೆ. “setting – privacy and security ಆಯ್ಕೆ ಮಾಡಿದರೆ ನಿಮ್ಮ ಖಾತೆ ಪ್ರೈವೇಟ್ ಅಥವಾ ಪಬ್ಲಿಕ್ ಆಗಿರಬೇಕೇ ಎಂಬುದನ್ನು ನಿರ್ಧರಿಸಬಹುದು. ಇಲ್ಲಿ ಪ್ರೈವೇಟ್‌ಖಾತೆ ಎಂದರೆ ನಿಮ್ಮ ಪೋಸ್ಟ್‌ಗಳು ಫಾಲೋವರ್ಸ್ ಗಳಿಗೆ ಮಾತ್ರ ಕಾಣುತ್ತವೆ. ಅಪರಿಚಿತರು ಸಂದೇಶ ಕಳುಹಿಸುವುದಿದ್ದರೂ ನೀವು ಅನುಮತಿ ಕೊಟ್ಟಿದ್ದರೆ ಮಾತ್ರ ಸಂದೇಶ ಸ್ವೀಕರಿಸಬಹುದು. ಸ್ಟೋರಿ ಶೇರಿಂಗ್ ಡಿಸೇಬಲ್ ಮಾಡಿ
ನಿಮ್ಮ ಖಾತೆ ಪ್ರೈವೇಟ್ ಆಗಿದ್ದೂ ನಿಮ್ಮ ಜತೆ ಸ್ಟೋರಿ ಶೇರ್ ಮಾಡಬಹುದಾಗಿದೆ. ಇದರಿಂದ ನಿಮಗೆ ಕಿರಿಕಿರಿ ಆಗುತ್ತಿದ್ದರೆ setting – privacy and security – story controls ನಲ್ಲಿ ನೀವು ಬ್ಲಾಕ್‌ಲಿಸ್ಟ್ ಮಾಡಿ ತಡೆಯಬಹುದು. ಮಾತ್ರವಲ್ಲದೆ, ನಿಮ್ಮ ಪೋಸ್ಟ್ ಅಥವಾ ಸ್ಟೋರಿಗಳಿಗೆ ಕಮೆಂಟ್ ಬರುವುದನ್ನೂ ತಡೆಯಬಹುದು. ಫೇಸ್‌ಬುಕ್‌ಗೆ ಲಾಗಿನ್ ಆಗಿದ್ದರೆ ನೀವು ಡಿಲಿಂಕ್ ಮೂಲಕ ಹೊರಬ ರಬಹುದಾಗಿದೆ. ಯಾರಾದರೂ ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಜಾಲಾಡಿದಾಗ ನೀವು ಇನ್‌ಸ್ಟಾಗ್ರಾಂನಲ್ಲಿ ಇರುವುದನ್ನು ತೋರಿಸುತ್ತದೆ. ಇದಕ್ಕಾಗಿ ಫೇಸ್‌ಬುಕ್ “ಅನ್‌ಲಿಂಕ್’ ಮಾಡಬಹುದು.