Advertisement

ಸಂಜಯ ರಾವತ್‌ ಪತ್ನಿಗೆ ಸೇರಿದ 11 ಕೋಟಿ ಆಸ್ತಿ ಜಪ್ತಿ

01:33 AM Apr 06, 2022 | Team Udayavani |

ಮುಂಬಯಿ: ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ ರಾವತ್‌ ಅವರ ಪತ್ನಿ ವರ್ಷಾ ರಾವತ್‌, ಮತ್ತು ಸಂಬಂಧಿಕರೊಬ್ಬರಿಗೆ ಸೇರಿದ 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಜಪ್ತಿ ಮಾಡಿದೆ.

Advertisement

ಮುಂಬಯಿನ ಗೋರೇಗಾಂವ್‌ನಲ್ಲಿ ಬೆಳಕಿಗೆ ಬಂದಿರುವ 1,034 ಕೋಟಿ ರೂ. ಮೌಲ್ಯದ ಭೂ ಅವ್ಯವ ಹಾರಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ಡಾ| ಪ್ರಭಾಕರ ಭಟ್‌ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ವಸತಿ ಒದಗಿಸುವ ಕಟ್ಟಡ ನಿರ್ಮಾಣ ನಿಟ್ಟಿನ ಯೋಜನೆ ಇದಾಗಿತ್ತು. ಇದೇ ವೇಳೆ ಇಡಿಯ ಕೆಲವು ಅಧಿಕಾರಿಗಳು ವಸೂಲು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಸದ ರಾವತ್‌ ಆರೋಪದ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರ ವಿಶೇಷ ತನಿಖಾ ದಳ ರಚಿಸಿ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next