Advertisement
ರಾಜಸ್ಥಾನದ ಕರೌಲಿ ಜಿಲ್ಲೆಯ ಸಪೋತಾರಾದಿಂದ, ಅಕ್ಟೋಬರ್ ಮೊದಲ ವಾರದಲ್ಲಿ ಮೀನಾರನ್ನು ಬಂಧಿಸಲಾಗಿತ್ತು. ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಸೇರಿದಂತೆ ಪಾಕಿಸ್ಥಾನಿ ಏಜೆಂಟ್‌ಗಳಿಂದ ಹನಿ ಟ್ರ್ಯಾಪ್ ಆದ ನಂತರ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ 2017 ರಿಂದ ರಾಜ್ಯ ಪೊಲೀಸರು ಬಂಧಿಸಿದ 35 ನೇ ವ್ಯಕ್ತಿಯಾಗಿದ್ದಾರೆ.
Related Articles
Advertisement
ಎಲ್ಲಾ ಸಂದರ್ಭಗಳಲ್ಲಿ, ಕಾರ್ಯಾಚರಣೆಯ ವಿಧಾನ ಒಂದೇ ಆಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಏಜೆಂಟರು ಕರೆಗಳನ್ನು ಮಾಡುತ್ತಾರೆ ನಂತರ ಮತ್ತೆ ಕರೆ ಮಾಡಿದ ನಂತರ ಸಂಭಾಷಣೆ ನಡುವೆ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿರುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹನಿ ಟ್ರ್ಯಾಪಿಂಗ್ ಪ್ರಕ್ರಿಯೆಯಲ್ಲಿ, ಅವರು ವಿಡಿಯೋ ಮತ್ತು ವಾಯ್ಸ್ ಚಾಟ್‌ಗಳ ಮೂಲಕ ತೊಡಗಿಸಿಕೊಳ್ಳುತ್ತಾರೆ, ಭಾವನಾತ್ಮಕವಾಗಿ ಹತ್ತಿರವಾಗುತ್ತಾರೆ, ಸಂತ್ರಸ್ತರನ್ನು ಮೋಹಿಸಲು ನಗ್ನ ಕ್ಲಿಪ್‌ಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ನಂತರ ಸಾಮಾಜಿಕ ಮಾಧ್ಯಮದ ಮೂಲಕ ಗೌಪ್ಯ ಮಾಹಿತಿ ಮತ್ತು ದಾಖಲೆಗಳನ್ನು ಹಂಚಿಕೊಳ್ಳಲು ಮೋಸ ಅಥವಾ ಬ್ಲಾಕ್‌ಮೇಲ್ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.