Advertisement
20 ಲಕ್ಷ ಮೂಲ ಬೆಲೆಗೆ ಇದ್ದ ಆಟಗಾರರು ಕೆಲವೇ ನಿಮಿಷದಲ್ಲಿ ಕೋಟಿಯ ಒಡೆಯರಾದರೆ ಇನ್ನೂ ಪ್ರಮುಖ ಆಟಗಾರರೂ ಉತ್ತಮ ಬೆಲೆ ಪಡೆದಿದ್ದಾರೆ. ಇದನ್ನು ಗಮನಿಸಿದ ಅನೇಕರಿಗೆ ಕೋಟಿಗಟ್ಟಲೇ ಮೊತ್ತಕ್ಕೆ ಖರೀದಿ ಮಾಡಿದ ಆಟಗಾರರಿಗೆ ಅಷ್ಟೇ ಹಣವನ್ನು ನೀಡಲಾಗುತ್ತದೆಯೇ ಎಂಬ ಅನುಮಾನ ಮೂಡಿರಬಹುದು.
Related Articles
Advertisement
ಟಿಡಿಸ್: ಇದರಲ್ಲಿ ಎರಡು ರೀತಿ ಇದೆ. ಭಾರತೀಯ ಆಟಗಾರ ಮತ್ತು ವಿದೇಶ ಆಟಗಾರರಿಗೆ ಭಿನ್ನ ರೀತಿಯಲ್ಲಿದೆ. ಒಬ್ಬ ಭಾರತೀಯ ಆಟಗಾರ 10 ಕೋಟಿಗೆ ಹರಾಜಾದರೆ ಅದರಲ್ಲಿ10% ಟಿಡಿಸ್ ಕಡಿತವಾಗುತ್ತದೆ ಅಂದರೆ ಒಂದು ಕೋಟಿ. ಉಳಿದ 9 ಕೋಟಿ ಅವರಿಗೆ ಸೇರುತ್ತದೆಯೆ ನೋಡಿದಾಗ ಅದರ ಸರಿಯಾದ ಮಾಹಿತಿ ಇಲ್ಲ, ಉಳಿದ ಹಣವು ಅವರ ವರ್ಷದ ಐಟಿ ರಿಟರ್ನ್ಸ್ ಮೇಲೆ ಅವಂಬಿತವಾಗಿದೆ.
ಇದೇ ವೇಳೆ ವಿದೇಶಿ ಆಟಗಾರರಿಗೆ 20% ಕಡಿತವಾಗುತ್ತದೆ, ಅಲ್ಲದೆ ಆ ವಿದೇಶಿ ಆಟಗಾರ ತನ್ನ ಕ್ರಿಕೆಟ್ ಮಂಡಳಿಗೆ 20% ಹಣವನ್ನು ಬಿಸಿಸಿಐ ಮುಖಾಂತರ ನೀಡಬೇಕು.
ಉದಾಹರಣೆಗೆ ಆರ್ ಸಿಬಿಯ ಹಸರಂಗ ಭಾರತದಲ್ಲಿ ನಡೆಯುವ ಕ್ರೀಡಾ ಕೂಟದಲ್ಲಿ ಪಾಲ್ಗೋಳಲು ಅವರ ದೇಶಿ ಮಂಡಳಿಯಾದ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅನುಮತಿ ಬೇಕು. ಜೊತೆಗೆ ಅವರ ಹರಾಜಿನ ಮೊತ್ತದಲ್ಲಿ 20% ಭಾಗವನ್ನು ಲಂಕನ್ ಮಂಡಳಿಗೆ ನೀಡಬೇಕಾಗುತ್ತದೆ. ಉಳಿದ ಹಣವಷ್ಟೇ ಆಟಗಾರನಿಗೆ ಸೇರುತ್ತದೆ.
ಬಹಳಷ್ಟು ಆಟಗಾರರಿಗೆ ಈ ಹರಾಜು ಮೊತ್ತವೇ ಆ ಕೂಟದ ಸಂಬಳವಾಗುತ್ತದೆ. ಆದರೆ ಕೆಲವು ತಂಡದಲ್ಲಿ ಕೆಲವು ಹಿರಿಯ ಆಟಗಾರರಿಗೆ ಮಾತ್ರ ಪಂದ್ಯದ ಆಧಾರದಲ್ಲಿ ಸಂಬಳ ನಿಗದಿಯಾಗುತ್ತದೆ. ಉಳಿದಂತೆ ಆಟಗಾರಿಗೆ ಅವರ ಪ್ರದರ್ಶನದ ಮೇಲೆ ಅನೇಕ ರೀತಿಯಲ್ಲಿ ಬಹುಮಾನಗಳು ದೊರಕುತ್ತದೆ. ಇದಲ್ಲದೇ ಆಟಗಾರರಿಗೆ ಕೂಟದ ವೇಳೆ ಎಲ್ಲಾ ವೆಚ್ಚವನ್ನು ಪ್ರಾಂಚೈಸಿಯವರು ನೋಡಿಕೊಳ್ಳುತಾರೆ.
ಮನೋಷ್ ಕುಮಾರ್ ಬಸರೀಕಟ್ಟೆ