Advertisement
ಸ್ವತಃ ಹರ್ಯಾಣ ಸರಕಾರವೇ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಸಂಬಂಧ ಬುಧವಾರ ಹರ್ಯಾಣ- ಪಂಜಾಬ್ ಹೈಕೋರ್ಟ್‌ಗೆ ಹರ್ಯಾಣ ಸರಕಾರ ವರದಿ ಸಲ್ಲಿಸಿದೆ. ಡೇರಾ ಸಚ್ಚಾ ಸೌದಾದ ಒಟ್ಟು ಮೌಲ್ಯ 1,453 ಕೋಟಿ ರೂ. ಎಂದು ಹೇಳಿದೆ. ಅಲ್ಲದೆ ಈಗ ತಾನು ನೀಡಿರುವುದು ಸಿರ್ಸಾದಲ್ಲಿರುವ ಡೇರಾ ಒಂದರ ಮೌಲ್ಯವಾಗಿದ್ದು, ಗುರ್ಮೀತ್ ರಾಮ್ ರಹೀಮ್ ಸಿಂಗ್ ಒಡೆತನದ ಸಂಸ್ಥೆಯು ಹರ್ಯಾಣ ರಾಜ್ಯದಾದ್ಯಂತ ಒಟ್ಟು 1600 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ ಎಂದು ಸರಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.ಹಾಗೇ ಹರ್ಯಾಣ ರಾಜ್ಯದ ಹೊರಗೆ ಡೇರಾ ಹೊಂದಿರುವ ಆಸ್ತಿಗಳ ಮೌಲ್ಯ ಎಷ್ಟು ಎಂಬುದನ್ನು ಸರಕಾರ ತನ್ನ ವರದಿಯಲ್ಲಿ ಉಲ್ಲೇಖೀಸಿಲ್ಲ. ಪ್ರಸ್ತುತ ಸರಕಾರ ಸಲ್ಲಿಸಿರುವ ವರದಿಯಲ್ಲಿ ಹರ್ಯಾಣದಲ್ಲಿ ಚಾಲ್ತಿಯಲ್ಲಿರುವ ಸರ್ಕಾರಿ ಬೆಲೆಗೆ ಅನುಗುಣವಾಗಿ ಆಸ್ತಿ ಮೌಲ್ಯವನ್ನು ಅಂದಾಜು ಮಾಡಲಾಗಿದ್ದು, ವಾಸ್ತವ ಬೆಲೆಯನ್ನು ಲೆಕ್ಕ ಹಾಕಿದರೆ ಡೇರಾದ ಆಸ್ತಿ ಮೌಲ್ಯ 4 ಸಾವಿರ ಕೋಟಿ ಅಥವಾ ಈಗಿನ ಮೌಲ್ಯಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ.