Advertisement

ವಿದ್ಯಾರ್ಥಿಗಳಿದ್ದಾಗ ವಿರಾಟ್‌, ಧೋನಿ ಗಳಿಸಿದ ಸ್ಕೋರ್‌ ಎಷ್ಟು?

11:07 PM Jun 27, 2020 | Sriram |

ಹೊಸದಿಲ್ಲಿ: ಮಹೇಂದ್ರ ಸಿಂಗ್‌ ಧೋನಿ ಮತ್ತು ವಿರಾಟ್‌ ಕೊಹ್ಲಿ ಜಾಗತಿಕ ಕ್ರಿಕೆಟಿನ ಸರ್ವಶ್ರೇಷ್ಠ ಆಟಗಾರರೆಂಬುದರಲ್ಲಿ ಎರಡು ಮಾತಿಲ್ಲ. ಇಬ್ಬರೂ ರನ್‌ ರಾಶಿಯನ್ನು ಪೇರಿಸಿದವರು, ಯಶಸ್ವಿ ನಾಯಕರು. ಧೋನಿ ಪಾಲಿಗೆ ಮಿಂಚಿನ ಸ್ಟಂಪರ್‌ ಎಂಬ ಖ್ಯಾತಿಯೂ ಸೇರಿಕೊಂಡಿದೆ. ಆದರೆ ಇವರಿಬ್ಬರೂ ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ “ಸ್ಕೋರ್‌’ ಎಷ್ಟು? ಇದು ಬಹಳ ತಮಾಷೆಯಾಗಿದೆ.

Advertisement

ಕ್ರಿಕೆಟ್‌ನಲ್ಲಿ ಇಬ್ಬರೂ ಜಾಗತಿಕ ಮಟ್ಟದಲ್ಲಿ ಮಿಂಚಿದರೂ ಕಲಿಕೆಯಲ್ಲಿ ಬಹಳ ಹಿಂದೆ ಎಂಬ ಸಂಗತಿ ಬಯಲಾಗಿದೆ. ಧೋನಿ 10ನೇ ತರಗತಿಯಲ್ಲಿ ಗಳಿಸಿದ ಅಂಕ ಶೇ. 66. 12ನೇ ತರಗತಿಯಲ್ಲಿ ಇದಕ್ಕಿಂತ ಕಡಿಮೆ, ಶೇ. 56 ಮಾತ್ರ.

ವಿರಾಟ್‌ ಕೊಹ್ಲಿ ಅವರಂತೂ ಗಣಿತದಲ್ಲಿ ಶತದಡ್ಡ! ಲೆಕ್ಕ ಎಂಬುದು ಅವರನ್ನು ಪೆಡಂಭೂತದಂತೆ ಕಾಡುತ್ತಲೇ ಇರುತ್ತಿತ್ತು. ಗರಿಷ್ಠ ನೂರು ಅಂಕಗಳಲ್ಲಿ ಅವರೆಂದೂ “ಡಬಲ್‌ ಫಿಗರ್‌’ ತಲುಪಿದ್ದಿಲ್ಲ ಅಂದರೆ ನಂಬಲೇಬೇಕು!

ನೂರರಲ್ಲಿ ಮೂರಂಕ!
“ಗಣಿತ ಅಂದರೆ ನನಗೆ ಭಯ ಮತ್ತು ಅಲರ್ಜಿ. ಇದು ತಲೆಗೇ ಹತ್ತುತ್ತಿರಲಿಲ್ಲ. ಗರಿಷ್ಠ ಅಂಕ ನೂರಾದರೆ ನಾನು ಗಳಿಸುತ್ತಿದ್ದುದು ಕೇವಲ ಮೂರು! ಇಷ್ಟಕ್ಕೂ ಗಣಿತವನ್ನು ಏಕೆ ಕಲಿಯಬೇಕೆಂಬುದು ನನ್ನ ಪ್ರಶ್ನೆ. ಇದರ ಯಾವ ಸೂತ್ರಗಳೂ ನಮಗೆ ಬದುಕಿಗೆ ಅನ್ವಯಿಸುವುದಿಲ್ಲ…’ ಎಂಬುದಾಗಿ ಚಾಟ್‌ ಶೋ ಒಂದರಲ್ಲಿ ವಿರಾಟ್‌ ಕೊಹ್ಲಿ ಬಹಳ ತಮಾಷೆಯಾಗಿ ಹೇಳಿದ್ದಾರೆ.

ಸಚಿನ್‌ ತೆಂಡುಲ್ಕರ್‌ 10ನೇ ತರಗತಿಯಲ್ಲಿ ಫೇಲ್‌ ಆಗಿದ್ದರೆಂಬ ಸಂಗತಿಯನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು. ಇದರಿಂದ ಇವರ್ಯಾರ ಕ್ರಿಕೆಟ್‌ ಸಾಧನೆಗೂ ಅಡ್ಡಿಯಾಗಲಿಲ್ಲ. ಆದರೆ ಕುಂಬ್ಳೆ, ಲಕ್ಷ್ಮಣ್‌, ಶ್ರೀನಾಥ್‌ ವಿದ್ಯಾರ್ಥಿ ಜೀವನದಲ್ಲಿ ಉತ್ತಮ “ಸ್ಕೋರರ್‌’ಗಳಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next