Advertisement

Ram Temple:ವಿಶಿಷ್ಟ ವಿನ್ಯಾಸದ ಭವ್ಯ ರಾಮ ಮಂದಿರದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?

05:20 PM Jan 04, 2024 | Team Udayavani |

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ 18 ದಿನಗಳು ಬಾಕಿ ಉಳಿದಿದ್ದು, ಅಯೋಧ್ಯೆ ನಗರಿ ಇದೀಗ ನವವಧುವಿನಂತೆ ಸಿಂಗಾರಗೊಳ್ಳಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ರಾಮ ಮಂದಿರದ ನೆಲ ಅಂತಸ್ತಿನ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಎರಡನೇ ಅಂತಸ್ತಿನ ಕಾರ್ಯ ಅಂತಿಮ ಹಂತದಲ್ಲಿದೆ.

Advertisement

ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಯಾವುದೇ ಸ್ಟೀಲ್‌ ಅಥವಾ ಕಬ್ಬಿಣವನ್ನು ಬಳಕೆ ಮಾಡಿಲ್ಲ. ಇವೆಲ್ಲದರ ಜೊತೆಗೆ ರಾಮಮಂದಿರ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಗುರುವಾರ (ಜ.04)  ರಾಮಮಂದಿರಕ್ಕೆ ಸಂಬಂಧಪಟ್ಟ ಪ್ರಮುಖ ಅಂಶಗಳ ಕುರಿತು ಮಾಹಿತಿ ಹಂಚಿಕೊಂಡಿದೆ.

1)ರಾಮ ಮಂದಿರ ಸಾಂಪ್ರದಾಯಿಕ ನಾಗರ ಶೈಲಿಯಲ್ಲಿದೆ.ʼ

2)ಮಂದಿರವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು ಸೇರಿ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ.

Advertisement

3)ರಾಮ ಮಂದಿರವು 3 ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯೂ 20 ಅಡಿ ಎತ್ತರ ಹೊಂದಿದೆ. ರಾಮ ಮಂದಿರದಲ್ಲಿ ಒಟ್ಟು 392 ಪಿಲ್ಲರ್ಸ್ಸ್‌ ಗಳಿದ್ದು, 44 ದ್ವಾರಗಳನ್ನು ಹೊಂದಿದೆ.

4)ಪ್ರಧಾನ ಗರ್ಭಗುಡಿಯಲ್ಲಿ ಭಗವಾನ್‌ ಶ್ರೀರಾಮನ ಬಾಲ್ಯದ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೊದಲ ಮಹಡಿಯಲ್ಲಿ ಶ್ರೀರಾಮ್‌ ದರ್ಬಾರ್.‌

5) 5 ಮಂಟಪಗಳು: ನೃತ್ಯ ಮಂಟಪ, ರಂಗ್‌ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನ್‌ ಮಂಟಪಗಳಿವೆ.

6) ರಾಮ ಮಂದಿರದ ಪಿಲ್ಲರ್ಸ್ಸ್‌ ಮತ್ತು ಗೋಡೆಗಳ ಮೇಲೆ ದೇವರು, ದೇವತೆಗಳ ಚಿತ್ರಗಳನ್ನು ಕೆತ್ತಲಾಗಿದೆ.

7)ಪ್ರವೇಶ ದ್ವಾರ ಪೂರ್ವದಲ್ಲಿದ್ದು, ಸಿಂಹ ದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಹತ್ತಿ ಪ್ರವೇಶ ದ್ವಾರ ಪ್ರವೇಶಿಸಬೇಕು.

8)ವಿಕಲಚೇತನರು ಮತ್ತು ವೃದ್ಧರಿಗಾಗಿ ಲಿಫ್ಟ್‌ ಮತ್ತು ಇಳಿಜಾರು (ವ್ಹೀಲ್‌ ಚೇರ್‌ ಬಳಸಲು) ಮೆಟ್ಟಿಲುಗಳ ವ್ಯವಸ್ಥೆ ಇದೆ.

9) ದೇವಾಲಯದ ಸುತ್ತ 734 ಮೀಟರ್‌ ಗಳಷ್ಟು ಉದ್ದದ ಆವರಣ ಗೋಡೆ ಹೊಂದಿದ್ದು, 14 ಅಡಿ ಅಗಲವಾಗಿದೆ.

10) ದೇವಾಲಯದ ಕಂಪೌಂಡ್‌ ನ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳು ನಿರ್ಮಾಣಗೊಳ್ಳಲಿದೆ. ಅದರಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ್‌ ಭಗವಾನ್‌, ಭಗವಾನ್‌ ಶಿವನ ಮಂದಿರವನ್ನು ಒಳಗೊಂಡಿದೆ. ಅಲ್ಲದೇ ಮಾ ಅನ್ನಪೂರ್ಣ ಮಂದಿರ, ಹನುಮಾನ್‌ ಜೀ ಮಂದಿರ ಸೇರಿದೆ.

11) ರಾಮ ಮಂದಿರದ ಸಮೀಪ ಪುರಾಣ ಪ್ರಸಿದ್ಧ ಸೀತಾ ಕುಂಡ್‌ ಇದ್ದು, ಇದು ಪುರಾತನ ಕಾಲದ್ದಾಗಿದೆ.

12)ಶ್ರೀರಾಮ ಜನ್ಮಭೂಮಿ ಮಂದಿರದ ಆವರಣದಲ್ಲಿ ಇನ್ನೂ ಹಲವು ಮಂದಿರಗಳ ನಿರ್ಮಾಣದ ಪ್ರಸ್ತಾಪವಿದ್ದು, ಅವುಗಳಲ್ಲಿ ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯಾ, , ನಿಶಾದ್‌ ರಾಜ್‌, ಮಾತಾ ಶಬರಿ ಮತ್ತು ದೇವಿ ಅಹಲ್ಯಾ ಮಂದಿರ ನಿರ್ಮಾಣವಾಗಲಿದೆ.

13) ಆವರಣದ ನೈರುತ್ಯ ಭಾಗದಲ್ಲಿ ಕುಬೇರ ತಿಲಾದಲ್ಲಿ ಪ್ರಾಚೀನ ಶಿವಾಲಯವಿದ್ದು, ಅಲ್ಲಿ ಜಟಾಯು ಸ್ಥಾಪನೆಯೊಂದಿಗೆ ಶಿವ ಮೂರ್ತಿಯನ್ನು ಪುನರ್‌ ಸ್ಥಾಪಿಸಲಾಗಿದೆ.

14)ಮಂದಿರದ ಯಾವುದೇ ಭಾಗದಲ್ಲಿಯೂ ಕಬ್ಬಿಣ, ಅಲ್ಯೂಮಿನಿಯಂ ಲೋಹ ಬಳಕೆ ಮಾಡಿಲ್ಲ.

15)ಮಂದಿರದ ತಳಪಾಯವನ್ನು 14 ಮೀಟರ್‌ ದಪ್ಪದ ರೋಲರ್‌ ಕಾಂಪ್ಯಾಕ್ಟ್‌ ಕಾಂಕ್ರೀಟ್‌ ಪದರದಿಂದ ನಿರ್ಮಿಸಲಾಗಿದ್ದು, ಇದು ಕೃತಕ ಬಂಡೆಯ ಅನುಭವ ನೀಡಲಿದೆ.

16) ನೆಲದ ತೇವಾಂಶದ ರಕ್ಷಣೆಗಾಗಿ ಗ್ರಾನೈಟ್‌ ಬಳಸಿ 21 ಅಡಿ ಎತ್ತರದ ಮೇಲ್ಫಾಯ ನಿರ್ಮಿಸಲಾಗಿದೆ.

17)ಮಂದಿರದ ಸಂಕೀರ್ಣ, ಒಳಚರಂಡಿ ಸಂಸ್ಕರಣಾ ಘಟಕ, ನೀರು ಸಂಸ್ಕರಣಾ ಘಟಕ, ಅಗ್ನಿ ಸುರಕ್ಷತೆ, ನೀರು ಸರಬರಾಜು ಮತ್ತು ವಿದ್ಯುತ್‌ ಕೇಂದ್ರವನ್ನು ಹೊಂದಿದೆ.

18) 25,000 ಜನರ ಸಾಮರ್ಥ್ಯದ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದ್ದು, ಇದು ಯಾತ್ರಾರ್ಥಿಗಳಿಗೆ ವೈದ್ಯಕೀಯ ಮತ್ತು ಲಾಕರ್‌ ಸೌಲಭ್ಯವನ್ನು ಒದಗಿಸುತ್ತದೆ.

19) ಮಂದಿರದ ಆವರಣದಲ್ಲಿ ಪ್ರತ್ಯೇಕ ಸ್ನಾನ ಗೃಹ, ವಾಶ್‌ ರೂಂಗಳು, ವಾಶ್‌ ಬೇಸಿನ್‌ ಗಳು, ನೀರಿನ ವ್ಯವಸ್ಥೆಯನ್ನು ಹೊಂದಿದೆ.

20)ಭವ್ಯ ರಾಮ ಮಂದಿರವನ್ನು ಸಂಪೂರ್ಣವಾಗಿ ಭಾರತದ ಸಾಂಪ್ರದಾಯಿಕ ಮತ್ತು ದೇಸೀ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಜನವರಿ 22ರಂದು 12-20ಕ್ಕೆ ಬಾಲರಾಮನ ಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next