Advertisement
ರಹಸ್ಯ:ಮೇಜಿನ ಸುತ್ತ ಕುಳಿತಿರುವವರಲ್ಲಿ ಒಬ್ಟಾತ ಜಾದೂಗಾರನ ಸಹಾಯಕನೇ(ಪರಿಚಿತ) ಆಗಿರುತ್ತಾನೆ. ಆತ ಮೇಜಿನ ಮೇಲೆ ಎಸೆದ ದಾಳದ ಸಂಖ್ಯೆಯನ್ನು ಅಡಿ ಕುಳಿತ ಜಾದೂಗಾರನಿಗೆ ತಿಳಿಸುತ್ತಾನೆ. ಸಹಾಯಕನೇನು ಜಾದೂಗಾರನ ಕಿವಿಯಲ್ಲಿ ಬಂದು ಹೇಳುವುದಿಲ್ಲ. ಹಾಗೆ ಮಾಡಿದರೆ ಅದು ಪ್ರೇಕ್ಷಕರಿಗೆ ತಿಳಿದುಬಿಡುತ್ತದೆ. ಹೀಗಾಗಿ ಜಾದೂಗಾರ ಯಾರಿಗೂ ಗೊತ್ತಾಗದ ರೀತಿಯಲ್ಲಿ ದಾಳದಲ್ಲಿ ಬಿದ್ದ ಸಂಖ್ಯೆಯನ್ನು ಜಾದೂಗಾರನಿಗೆ ಅರ್ಥ ಮಾಡಿಸುತ್ತಾನೆ. ಅದು ಹೇಗೆ ಎಂದರೆ, ಆತ ಒಂದು ಕೈಯನ್ನು ಮೇಜಿನ ಮೇಲಿಟ್ಟು ಮತ್ತೂಂದು ಕೈಯನ್ನು ತೊಡೆಯ ಮೇಲೆ ಇಟ್ಟುಕೊಂಡಿರುತ್ತಾನೆ. ಸಹಜವಾದ ಭಂಗಿಯಲ್ಲಿ ಕೂತಿರುವುದರಿಂದ ಅಕ್ಕಪಕ್ಕದವರಿಗೆ ಅನುಮಾನವೂ ಬರುವುದಿಲ್ಲ. ಪ್ರತಿ ಬಾರಿ ದಾಳವನ್ನು ಉರುಳಿಸಿದಾಗಲೂ ಮೇಲ್ಬದಿ ತೋರುವ ಸಂಖ್ಯೆಯನ್ನು ಸಹಾಯಕ ತೊಡೆಯ ಮೇಲಿಟ್ಟ ಕೈಗಳ ಸಹಾಯದಿಂದ ಸಂಜ್ಞೆ ಮಾಡಿ ತೋರಿಸುತ್ತಾನೆ. ಒಂದು ಬಿದ್ದರೆ ತೋರು ಬೆರಳನ್ನು ಬಿಡಿಸುತ್ತಾನೆ. ಎರಡು ಸಂಖ್ಯೆ ಬಿದ್ದರೆ ತೋರು ಬೆರಳು ಮತ್ತು ನಡುಬೆರಳನ್ನು ತೋರುತ್ತಾನೆ. ಹೀಗೆ ಒಂದುದೊಂದು ಸಂಖ್ಯೆಗೂ ಅಷ್ಟೇ ಬೆರಳನ್ನು ಬಿಡಿಸುವ ಮೂಲಕ ಜಾದೂಗಾರ ಮೇಲೆ ಹಾಕಿದ ದಾಳದಲ್ಲಿ ಎಷ್ಟು ಸಂಖ್ಯೆ ಬಿದ್ದವು ಎಂಬುದನ್ನು ಗೊತ್ತುಮಾಡಿಕೊಳ್ಳುತ್ತಾನೆ. ಸಂಖ್ಯೆ ಆರು ಬಿದ್ದರೆ ಹೆಬ್ಬೆರಳನ್ನು ಬಿಡಿಸುತ್ತಾನೆ! ಅದನ್ನೇ ಜಾದೂಗಾರ ಗಟ್ಟಿಯಾಗಿ ಕೂಗಿ ಹೇಳುತ್ತಾನೆ.