Advertisement

ನಂದಿಗ್ರಾಮದಲ್ಲಿ ಸೋತರೂ ದೀದಿ ಸಿಎಂ ಆಗ್ತಾರಾ? ಆಯ್ಕೆ ಏನು?

07:45 AM May 03, 2021 | Team Udayavani |

ಕೋಲ್ಕತ್ತಾ: ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ತಮ್ಮ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದ ಸಿಎಂ ಮಮತಾ ಬ್ಯಾನರ್ಜಿ, ನಂದಿಗ್ರಾಮದಲ್ಲಿ ತಮ್ಮ ಒಂದು ಕಾಲದ ಆಪ್ತ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಸೋಲುಂಡಿದ್ದಾರೆ.

Advertisement

ಸದ್ಯ ದೀದಿ ಸೋತಿರುವ ಕಾರಣ ಅವರು “ಸಿಎಂ” ಹುದ್ದೆಗೆ ಏರಲು ಆಗುತ್ತದೆಯೇ ಎಂಬ ಪ್ರಶ್ನೆ ಹಲವರದ್ದು. ಅದಕ್ಕೆ ಉತ್ತರ ಇಲ್ಲಿದೆ: ದೀದಿ ಸಿಎಂ ಹುದ್ದೆಗೆ ಏರಲು ಸಾಧ್ಯವಿದೆ. ಇಲ್ಲಿ ಅವರಿಗೆ 2 ಆಯ್ಕೆಗಳಿವೆ.

ಮೊದಲನೆಯದ್ದು, ಟಿಎಂಸಿಯ ನೂತನ ಶಾಸಕರು ಮಮತಾರನ್ನು ಶಾಸಕಾಂಗ ಪಕ್ಷದ ನಾಯಕಿ ಎಂದು ಘೋಷಿಸುವುದು. ಇದಾದ ಬಳಿಕ 6 ತಿಂಗಳ ಒಳಗಾಗಿ ವಿಧಾನಪರಿಷತ್‌ ಸದಸ್ಯೆ (ಎಂಎಲ್‌ಸಿ)ಯಾಗಿ ಆಯ್ಕೆಯಾಗಿ ಮಮತಾ ಸಿಎಂ ಹುದ್ದೆಗೆ ಏರಬಹುದು.

ಎರಡನೆಯದ್ದು, ಖಾಲಿಯಿರುವ ಯಾವುದಾದರೂ ಕ್ಷೇತ್ರ (ಉದಾ: ಖರ್ದಾಹಾ)ದಲ್ಲಿ ನಾಮಪತ್ರ ಸಲ್ಲಿಸಿ, 6 ತಿಂಗಳೊಳಗೆ ಉಪಚುನಾವಣೆಯಲ್ಲಿ ಗೆದ್ದು ಬಂದು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು. ನಿತೀಶ್‌ ಕುಮಾರ್‌, ಯೋಗಿ ಆದಿತ್ಯನಾಥ್‌, ಉದ್ಧವ್‌ ಠಾಕ್ರೆ, ಮಾಯಾವತಿ, ಅಖೀಲೇಶ್‌, ಮನೋಹರ್‌ ಪರ್ರಿಕರ್‌ ಮತ್ತಿತರರು ಕೂಡ ಈ ರೀತಿಯ ಅವಕಾಶ ಬಳಸಿಕೊಂಡು ಸಿಎಂ ಹುದ್ದೆಗೆ ಏರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next