ಬಿಡುವಿದ್ದಾಗ ಟೈಮ್ ಪಾಸ್‌ಗೆ ನೆನಪಾಗೋದೇ ವಾಟ್ಸಾಪ್ ಗ್ರೂಪ್. ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಾದ ನಾನು ಮತ್ತು ಬಸವರಾಜ್ ಅದಕ್ಕಂತಲೇ ಗ್ರೂಪ್ ಮಾಡಿಕೊಂಡಿದ್ದೆವು. ಮಿಕ್ಕ ಹದಿನೆಂಟು ಮಂದಿಯನ್ನು ಗ್ರೂಪ್‌ಗೆ ಸೇರಿಸಿಕೊಂಡೆವು. ಪಾಠದಿಂದ ಆಚೆ ಇರೋ ಸಂಗತಿಗಳೇ ಅಲ್ಲಿ ಹಾಟ್ ಟಾಪಿಕ್. ಕೀಟಲೆಗಳು, ಸಖತ್ ಡೈಲಾಗ್‌ಗಳು, ಕಾಲೆಳೆಯೋದು, ಜಗಳ ಈ ಗ್ರೂಪ್‌ನ ಸಂವಿಧಾನವೇ ಆಗೊಯ್ತು.
ಅವತ್ತೂಂದು ದಿನ ಬಸವರಾಜ್, ಉತ್ತರ ಕರ್ನಾಟಕ ಶೈಲಿಯ “ಎಷ್ಟು ದಿನ ಇಲ್ಲೇ ಇರತಿ, ನಿನ್ನ ಮನಿ ಬ್ಯಾರೈತಿ…’ ಎನ್ನುವ ಹಾಡಿನಲ್ಲಿ ನಟಿಸಿದ್ದ. ಅದರಲ್ಲಿ ಶವದ ಪಾತ್ರವನ್ನು ನಿರ್ವಹಿಸಿ, ಟಿಕ್ ಟಾಕ್ ವಿಡಿಯೋ ರಚಿಸಿ, ಗ್ರೂಪ್‌ಗೆ ರವಾನಿಸಿದ್ದ. ಅದನ್ನು ನೋಡಿ ಬಿದ್ದೂ ಬಿದ್ದು ನಕ್ಕಿದ್ದೆ. ತಕ್ಷಣವೇ ಒಂದು ಐಡಿಯಾ ಹೊಳೆಯಿತು. ನನ್ನ ಮೊಬೈಲ್‌ನಲ್ಲಿದ್ದ ಬಸವನ ಭಾವಚಿತ್ರವನ್ನು ಗ್ರೂಪ್‌ನಲ್ಲಿ ಹಾಕಿ, “ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಕ್ಯಾಪ್ಷನ್ ಕೊಟ್ಟು ಪೋಸ್ಟ್ ಮಾಡಿದೆ.
ಬಸವನದ್ದು ಆ್ಯಕ್ಟಿಂಗ್ ಎಂದು ಗೊತ್ತಿದ್ದೂ, ಎಲ್ಲರೂ ತಮ್ಮದೇ ಶೈಲಿಯಲ್ಲಿ ಕಾಲೆಳೆದರು. ಅದಕ್ಕೆ ಬಸವರಾಜ್, “ಯವ್ವಾ… ನಾನ್ ಸತ್ತಿಲ್ಲ ಕಣೊ… ಎಂಥ ಫ್ರೆಂಡ್ಸ್‌ರೋ ನೀವು. ಇಷ್ಟು ಬೇಗ ಮೇಲೆ ಕಳೊÕàಕೆ ತಯಾರಿದ್ದೀರಲೊ ಬಡ್ಡೇತವ’ ಎಂದು ಪ್ರತಿಕ್ರಿಯಿಸಿದ. ಅದಕ್ಕೆ ನಾನು, “ಛೇ… ಒಂದು ತಪ್ಪು ನಡೆದೋಯ್ತಲ್ಲ… ಹೂವಿನ ಹಾರ, ಬ್ಯಾನರ್‌ಗಳನ್ನು ಆರ್ಡರ್ ಕೊಟ್ನಲ್ಲ. ಏನ್ ಮಾಡೋದ್ ಇವಾಗ?’ ಎನ್ನುತ್ತಾ, ಸೆ¾„ಲಿ ಹಾಕಿ ಕಳುಹಿಸಿದೆ. ಎಲ್ಲವನ್ನೂ ತಮಾಷೆಯಲ್ಲಿ ಸ್ವೀಕರಿಸುವ ಆತ, “ಹೋಗ್ಲಿ ಬಿಡ್ರೋ… ನಾನೂ ನಿಮ್ ಜತೆಗೆ ಬರೀ¤ನಿ. ನನ್ನ ಭಾವಚಿತ್ರಕ್ಕೆ ಒಟ್ಟಿಗೆ ಶ್ರದ್ಧಾಂಜಲಿ ಸಲ್ಲಿಸೋಣ’ ಅಂತ ನಗುತ್ತಾ ಹೇಳಿದ್ದ.
ಗ್ರೂಪ್‌ನ ಹೆಸರು: ಭಾವಪೂರ್ಣ ಶ್ರದ್ಧಾಂಜಲಿ
ಅಡ್ಮಿನ್‌ಗಳು: ಶ್ರೀನಾಥ, ಬಸವರಾಜ್
– ಶ್ರೀನಾಥ ಮರಕುಂಬಿ, ತುಮಕೂರು