Advertisement

Rohit Sharma ಟೆಸ್ಟ್‌  ನಾಯಕತ್ವ ಇನ್ನೆಷ್ಟು ಕಾಲ? ವಿಂಡೀಸ್‌ ಪ್ರವಾಸಕ್ಕೆ ಆತಂಕವಿಲ್ಲ

10:50 PM Jun 13, 2023 | Team Udayavani |

ಹೊಸದಿಲ್ಲಿ: 2021ರ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅನುಭವಿಸಿದ ಸೋಲಿನ ಬಳಿಕ ಟೀಮ್‌ ಇಂಡಿಯಾಕ್ಕೆ ಮೇಜರ್‌ ಸರ್ಜರಿ ಮಾಡಲಾಗಿತ್ತು. ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ಸ್ಥಾನಕ್ಕೆ ರೋಹಿತ್‌ ಶರ್ಮ ಮತ್ತು ರಾಹುಲ್‌ ದ್ರಾವಿಡ್‌ ಅವರನ್ನು ತಂದು ಕೂರಿಸಲಾಗಿತ್ತು. ಆದರೆ ಭಾರತ ತಂಡದ ಹಣೆಬರಹ ಮಾತ್ರ ಬದಲಾಗಲಿಲ್ಲ. ಐಸಿಸಿ ಟೂರ್ನಿಗಳಲ್ಲಿ ಮುಗ್ಗರಿಸುವ ಪರಿಪಾಠ ಕೊನೆಗೊಳ್ಳಲಿಲ್ಲ. ಇದಕ್ಕೆ ತಾಜಾ ಉದಾಹರಣೆ, ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌.

Advertisement

ಭಾರತದ ಸೋಲಿಗೆ ಐಪಿಎಲ್‌ನಿಂದ ಹಿಡಿದು ಸಮನೋಲನ ರಹಿತ ತಂಡದ ತನಕ ಸಾಕಷ್ಟು ಉದಾಹರಣೆ ನೀಡಬಹುದು. ಇವುಗಳಲ್ಲಿ ರೋಹಿತ್‌ ಶರ್ಮ ಅವರ ನಾಯಕತ್ವವೂ ಒಂದು. ಇದು ಏನೂ ಪರಿಣಾಮಕಾರಿ ಯಾಗಿಲ್ಲ ಎಂಬುದು ಸಾಬೀತಾಗಿದೆ. ರೋಹಿತ್‌ ಸಾರಥ್ಯದಲ್ಲಿ ಟೀಮ್‌ ಇಂಡಿಯಾ ತವರಲ್ಲಿ ಉತ್ತಮ ಟೆಸ್ಟ್‌ ದಾಖಲೆಗಳನ್ನು ನಿರ್ಮಿಸಿರಬಹುದು, ಆದರೆ ಇದು ಸಾಲದು. ಸುನೀಲ್‌ ಗಾವಸ್ಕರ್‌ ಹೇಳಿದಂತೆ, ತವರಲ್ಲಿ ದುರ್ಬಲ ತಂಡಗಳನ್ನು ಸೋಲಿಸುವುದು ದೊಡ್ಡ ಸಾಧನೆಯಲ್ಲ, ಐಸಿಸಿ ಕೂಟದಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮುವುದು ಮುಖ್ಯ. ಇದು ರೋಹಿತ್‌ ಅವರಿಂದ ಸಾಧ್ಯ ವಾಗುತ್ತಿಲ್ಲ. ಅವರ ಫಾರ್ಮ್ ಕೂಡ ನಿರೀಕ್ಷಿತ ಮಟ್ಟ ತಲುಪುತ್ತಿಲ್ಲ. ಹಾಗಾದರೆ ರೋಹಿತ್‌ ಶರ್ಮ ಅವರ ಟೆಸ್ಟ್‌ ಮತ್ತು ನಾಯಕತ್ವದ ಭವಿಷ್ಯ ಏನು? ಇದು ಸದ್ಯದ ಪ್ರಶ್ನೆ.

ಮುಂದಿದೆ ವಿಂಡೀಸ್‌ ಪ್ರವಾಸ
ಸದ್ಯದಲ್ಲೇ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವನ್ನು ಪ್ರಕಟಿಸಲಾಗುವುದು. ಇಲ್ಲಿ ರೋಹಿತ್‌ ಶರ್ಮ ಅವರೇ ಟೆಸ್ಟ್‌ ತಂಡದ ನಾಯಕರಾಗಿ ಮುಂದುವರಿಯುವುದರಲ್ಲಿ ಅನು ಮಾನವಿಲ್ಲ. ಆಕಸ್ಮಾತ್‌ ಅವರಾಗಿ ಈ ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡರಷ್ಟೇ ಬದಲಿ ನಾಯಕನನ್ನು ಆರಿಸಬೇಕಾಗುತ್ತದೆ. ಹಾಗೆಯೇ ರೋಹಿತ್‌ ಶರ್ಮ ನೇತೃತ್ವದ ಭಾರತ ತಂಡ ವಿಂಡೀಸ್‌ ನೆಲದಲ್ಲಿ ಸೋತದ್ದೇ ಆದರೆ ಅದು ಇನ್ನಷ್ಟು ಮುಜುಗರ ಹುಟ್ಟಿಸುವ ಸಂಗತಿ.

ಸಮಸ್ಯೆಯೆಂದರೆ, ರೋಹಿತ್‌ ವಿರುದ್ಧ “ಕಠಿನ ಕ್ರಮ’ ತೆಗೆದುಕೊಳ್ಳುವ ವಿಷಯದಲ್ಲಿ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಒತ್ತಡಕ್ಕೆ ಸಿಲುಕಿರುವುದು. ಇವರನ್ನು ಬಿಟ್ಟರೆ ಇನ್ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ರಾಹುಲ್‌, ಬುಮ್ರಾ, ಪಂತ್‌ ಗೈರು ಆಯ್ಕೆಗಾರರ ಯೋಜನೆಯನ್ನು ಜಟಿಲಗೊಳಿಸಿದೆ.

ಆವೃತ್ತ ಪೂರ್ತಿಗೊಳಿಸುವರೇ?
ಆದರೆ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದಂತೆ, ರೋಹಿತ್‌ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗುತ್ತಿದೆ ಎಂಬ ಸುದ್ದಿಯಲ್ಲಿ ಹುರುಳಿಲ್ಲ. ಆದರೆ ಅವರು ಮುಂದಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಪೂರ್ಣಾವಧಿಯನ್ನು ಕಳೆಯುವರೇ ಎಂಬುದು ದೊಡ್ಡ ಪ್ರಶ್ನೆ. 2025ರಲ್ಲಿ ಈ ಆವೃತ್ತ ಮುಗಿಯುವಾಗ ರೋಹಿತ್‌ಗೆ 38 ವರ್ಷವಾಗುತ್ತದೆ.

Advertisement

“ಆಯ್ಕೆ ಸಮಿತಿ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ರೋಹಿತ್‌ ಅವರನ್ನೇ ಮುಂದುವರಿಸುವುದರಲ್ಲಿ ಅನುಮಾನವಿಲ್ಲ. ಇಲ್ಲಿನ ಫ‌ಲಿತಾಂಶವನ್ನು ಗಮನಿಸಿ ಮುಂದಿನ ಹೆಜ್ಜೆ ಇಡ ಬಹುದು. ಅಲ್ಲದೇ ಈ ಪ್ರವಾಸದ ಬಳಿಕ ಭಾರತ ಟೆಸ್ಟ್‌ ಸರಣಿ ಆಡು ವುದೇನಿದ್ದರೂ ವರ್ಷಾಂತ್ಯದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ. ಹೀಗಾಗಿ ಚಿಂತಿಸಲು ಸಾಕಷ್ಟು ಸಮಯವಿದೆ’ ಎಂಬುದು ಬಿಸಿಸಿಐ ಅಧಿಕಾರಿ ಹೇಳಿಕೆ.

ಟೆಸ್ಟ್‌ ಸರಣಿಯೇನೋ ದೂರ ಇರಬಹುದು, ಆದರೆ ಏಕದಿನ ವಿಶ್ವಕಪ್‌ ಪಂದ್ಯಾವಳಿ ಹತ್ತಿರದಲ್ಲೇ ಇದೆ. ಈ ವರ್ಷಾಂತ್ಯ ಭಾರತದಲ್ಲೇ ನಡೆಯಲಿದೆ. ಇದು ಇನ್ನೂ ದೊಡ್ಡ ಸವಾಲು. ಇಲ್ಲಿಯೂ ರೋಹಿತ್‌-ರಾಹುಲ್‌ ಜೋಡಿ ಮುಂದುವರಿಯುವುದ ರಲ್ಲಿ ಅನುಮಾನವಿಲ್ಲ. ಈ ಐಸಿಸಿ ಪಂದ್ಯಾವಳಿಯಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿದರೆ ಇಬ್ಬರ ತಲೆದಂಡ ಬಹುತೇಕ ಖಚಿತ!

ಬ್ಯಾಟಿಂಗ್‌
ವೈಫ‌ಲ್ಯ
ಟೆಸ್ಟ್‌ ನಾಯಕತ್ವದ ಅವಧಿ ಯಲ್ಲಿ 7 ಪಂದ್ಯಗಳನ್ನು ಆಡಿರುವ ರೋಹಿತ್‌ ಶರ್ಮ 35.45ರ ಸರಾಸರಿಯಲ್ಲಿ ಕೇವಲ 390 ರನ್‌ ಗಳಿಸಿ ದ್ದಾರೆ. ಒಂದು ಸೆಂಚುರಿ ಹೊರತುಪಡಿಸಿದರೆ ಅರ್ಧ ಶತಕವನ್ನು ಬಾರಿಸಿಯೇ ಇಲ್ಲ. ಇದೇ ಅವಧಿಯಲ್ಲಿ ವಿರಾಟ್‌ ಕೊಹ್ಲಿ 10 ಟೆಸ್ಟ್‌ಗ ಳಿಂದ 517 ರನ್‌, ಚೇತೇಶ್ವರ್‌ ಪೂಜಾರ 8 ಟೆಸ್ಟ್‌ಗಳಿಂದ 482 ರನ್‌ ಹೊಡೆದಿದ್ದಾರೆ. ಕೊಹ್ಲಿ ಆಸ್ಟ್ರೇಲಿಯ ವಿರುದ್ಧದ ಅಹ್ಮದಾಬಾದ್‌ ಟೆಸ್ಟ್‌ನಲ್ಲಿ 186 ರನ್‌ ಬಾರಿಸಿದ್ದರು. ಪೂಜಾರ ಬಾಂಗ್ಲಾದೇಶ ವಿರುದ್ಧ 102 ಹಾಗೂ 90 ರನ್‌ ಹೊಡೆದಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಈ ಟಾಪ್‌ ಆರ್ಡರ್‌ ಬ್ಯಾಟರ್ ಒಬ್ಬೊಬ್ಬರಾಗಿ ನೇಪಥ್ಯಕ್ಕೆ ಸರಿಯಲಿದ್ದಾರೆ ಎಂಬುದೂ ಆಯ್ಕೆಗಾರರ ಗಮನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next