Advertisement

Lokayukta ಪತ್ರ ಸೋರಿಕೆ ಹೇಗಾಯ್ತು: ರಾಜ್ಯಪಾಲರ ಪ್ರಶ್ನೆ

01:10 AM Sep 21, 2024 | Team Udayavani |

ಬೆಂಗಳೂರು: ರಾಜ್ಯಪಾಲರು ಹಾಗೂ ಸರಕಾರದ ನಡುವಿನ ಜಟಾ ಪಟಿ ಮತ್ತೆ ಮುಂದುವರಿದಿದ್ದು ಲೋಕಾಯುಕ್ತ ಹಾಗೂ ರಾಜಭವನದ ನಡುವಿನ ಪತ್ರ ವ್ಯವಹಾರ ಗೌಪ್ಯತೆ ಸೋರಿಕೆ ಯಾಗುತ್ತಿರುವ ಬಗ್ಗೆ ರಾಜ್ಯಪಾಲರು ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಲೋಕಾಯುಕ್ತದವರು ರಾಜ್ಯಪಾಲ ರಿಗೆ ಬರೆದ ರಹಸ್ಯ ಪತ್ರ ಸೋರಿಕೆಯಾದ ಬಗ್ಗೆ ಮಾಹಿತಿ ಕೊಡಿ ಎಂದು ಪತ್ರದಲ್ಲಿ ಕೋರಿದ್ದಾರೆ. ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತ ಹಾಗೂ ರಾಜಭವನದ ಮಧ್ಯೆ ನಡೆದ ಪತ್ರ ವ್ಯವಹಾರಗಳು ಸಕ್ಷಮ ಪ್ರಾಧಿಕಾರದ ವ್ಯಕ್ತಿ (ರಾಜಭವನ) ಹೊರತುಪಡಿಸಿ ಅನ್ಯರಿಗೆ ಲಭಿಸಲು ಹೇಗೆ ಸಾಧ್ಯ? ರಾಜ್ಯಪಾಲರ ಮುಂದೆ ಇರುವ ಲೋಕಾಯುಕ್ತ ಶಿಫಾರಸುಗಳನ್ನು ಯಾವ ಆಧಾರದ ಮೇಲೆ ಬಳಸಿಕೊಂಡು ಸಂಪುಟ ಸಲಹೆ ನೀಡಿದೆ? ಇದಕ್ಕೆ ಸೂಕ್ತ ದಾಖಲೆಯೊಂದಿಗೆ ಉತ್ತರ ನೀಡುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.

ರಾಜ್ಯಪಾಲರ ಪತ್ರದಲ್ಲಿ ಏನಿದೆ?
ಆ. 26ಕ್ಕೆ ರಾಜಭವನಕ್ಕೆ ಕ್ಯಾಬಿನೆಟ್‌ ನಿರ್ಣಯದ ದಾಖಲೆಗಳ ಕುರಿತು ಮುಚ್ಚಿದ ಲಕೋಟೆಯೊಂದಿಗೆ ಪತ್ರ ತಲುಪಿದೆ. ಅದರಲ್ಲಿ 16ನೇ ಸಚಿವ ಸಂಪುಟ ಸಭೆಯ ಅಜೆಂಡಾ ಹಾಗೂ 17ನೇ ಸಚಿವ ಸಂಪುಟದ ಹೆಚ್ಚುವರಿ ಅಜೆಂಡಾದ ಪ್ರತಿ ಮಾತ್ರ ಇತ್ತು. ಸಭೆಯ ನಿರ್ಣಯದ ದಾಖಲೆ ಇರಲಿಲ್ಲ. ಸಂಪುಟ ವಿಭಾಗಕ್ಕೆ ರಾಜಭವನದಿಂದ ದೂರವಾಣಿ ಮೂಲಕ ಮಾಹಿತಿ ತಿಳಿಸಲಾಯಿತು. ಆ. 27ರಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ದಾಖಲೆ ರಾಜಭವನಕ್ಕೆ ತಲುಪಿಸಲಾಗಿದೆ.

ಆ ಸಂಪುಟ ಸಭೆ ಬಗ್ಗೆ ಆ.23ರಂದು ಮಾಧ್ಯಮ ವರದಿ ಗಮನಿಸಿದ್ದು, ಎಚ್‌.ಡಿ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್‌ ನಿರಾಣಿ ಜನಾರ್ದನ್‌ ರೆಡ್ಡಿ ವಿರುದ್ಧ ತನಿಖೆ ಅನುಮತಿ/ಅಭಿಯೋಜನೆಗೆ ಒಪ್ಪಿಗೆ ಪ್ರಸ್ತಾವನೆಗೆ ತಡಮಾಡದೆ ಒಪ್ಪಿಗೆ ನೀಡುವಂತೆ ಸಂಪುಟ ಸಭೆ ಸಲಹೆ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಇದೆ. ಆದರೆ ಸಂಪುಟ ಸಭೆಯಲ್ಲಿ ಈ ಪ್ರಕರಣಗಳಿಗೆ ಬಾಕಿಯಾಗಿರುವ ಬಗ್ಗೆ ಗಮನಿಸಿರುವುದರ ಬಗ್ಗೆ ಉಲ್ಲೇಖವಿದೆ ಹೊರತು ಸಲಹೆ ಕೊಡುವ ತೀರ್ಮಾನವಾಗಿಲ್ಲ ಎಂಬುದು ತಮಗೆ ಸೇರಿದ ಸರಕಾರದ ವರದಿಯಲ್ಲಿದೆ.

ಸಂಪುಟ ಸಭೆಯ ಟಿಪ್ಪಣಿಯಲ್ಲಿ ಯಾವ ದಿನಾಂಕದಂದು ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ ಅನುಮತಿ ಕೇಳಿದೆ ಎಂಬುದನ್ನುಉಲ್ಲೇಖಿಸಲಾಗಿದೆ. ಈ ವಿಚಾರದಲ್ಲಿ ನನಗೆ ಕುತೂಹಲ ಉಂಟಾಗಿದ್ದು ಲೋಕಾಯುಕ್ತ ವಿಶೇಷ ತನಿಖಾ ತಂಡ ರಾಜ್ಯಪಾಲರಿಗೆ ಬರೆದ ಪತ್ರ ಹೇಗೆ ಬಹಿರಂಗವಾಯಿತು? ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತದ ಪೊಲೀಸರು ಗೌಪ್ಯ ದಾಖಲೆಯನ್ನು ಅಭಿಯೋಜನೆಗೆ ಅನುಮತಿ ನೀಡುವ ರಾಜಭವನ ಹೊರತು ಬಹಿರಂಗಪಡಿಸಿತು? ಗೌಪ್ಯ ಮಾಹಿತಿ ಹರಿ
ದಾಡಿದ್ದು ಹೇಗೆ? ಈ ವಿಚಾರದಲ್ಲಿ ಸಂಪುಟದ ಟಿಪ್ಪಣಿ, ಸಂಬಂಧಪಟ್ಟ ದಾಖಲೆ, ದಾಖಲೆ ಯ ಮೂಲ ಅಥವಾ ಮಾಹಿತಿಯನ್ನು ಪ್ರಾಮಾಣಿಕ ಹಾಗೂ ಶೀಘ್ರವಾಗಿ ನೀಡುವಂತೆ ಮುಖ್ಯಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

Advertisement

ರಾಜ್ಯಪಾಲರ ಪತ್ರದಲ್ಲಿ ಏನಿದೆ?
-ಆ. 26ರ ಸಂಪುಟ ನಿರ್ಣಯ ತಲುಪಿದ ಬಗ್ಗೆ ರಾಜ್ಯಪಾಲರ ಪತ್ರದಲ್ಲಿ ಉಲ್ಲೇಖ
-ಆ. 27ರ ಡಿಸಿಎಂ ನೇತೃತ್ವದ ಸಭೆಯ ನಿರ್ಣಯಗಳು ಸಿಕ್ಕಿದ್ದರ ಬಗ್ಗೆ ಪ್ರಸ್ತಾವ
-ಕುಮಾರಸ್ವಾಮಿ, ಜೊಲ್ಲೆ, ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧ ಅಭಿಯೋಜನೆಗೆ ಅನುಮತಿ ಬಗ್ಗೆ ಮಾಧ್ಯಮಗಳಲ್ಲಿ ವರದಿ
-ಸರಕಾರದ ವರದಿಯಲ್ಲಿ ಪ್ರಕರಣ ಅಭಿಯೋಜನೆಗೆ ಅನುಮತಿ ಬಾಕಿ ಬಗ್ಗೆ ಉಲ್ಲೇಖ
-ಲೋಕಾಯುಕ್ತ ಪೊಲೀಸರ ಗೌಪ್ಯ ಮಾಹಿತಿ ಹರಿದಾಡಿದ್ದು ಹೇಗೆ?
-ಈ ಬಗ್ಗೆ ಶೀಘ್ರ ಮಾಹಿತಿ ನೀಡಲು ಸಿ.ಎಸ್‌.ಗೆ ಪತ್ರದಲ್ಲಿ ಕೋರಿಕೆ

Advertisement

Udayavani is now on Telegram. Click here to join our channel and stay updated with the latest news.

Next