Advertisement

ಮೇಘರಾಜನ ಸಾಮ್ರಾಜ್ಯ ಹೇಗಿರುತ್ತೆ?

03:45 AM Jul 06, 2017 | Harsha Rao |

ಆಕಾಶದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳಿಗೆ ರಜೆ ಘೋಷಿಸಿದಂತೆ ಆವರಿಸಿಕೊಂಡಿದೆ, ದಟ್ಟ ಮೋಡ. ಯಾರೂ ಈ ಮೋಡವನ್ನು ಹಗ್ಗ ಕಟ್ಟಿ ತೂಗಿ ಹಾಕುವುದಿಲ್ಲ. ಆದರೂ, ಇದು ಭೂಮಿ ಮೇಲೆ ಧೊಪ್ಪನೆ ಬೀಳದೆ ತೇಲುತ್ತಲೇ ವಿಸ್ಮಯದ ಗೂಡಾಗಿರುತ್ತದೆ. ಈ ಪವಾಡ ಹೇಗೆ ಸಾಧ್ಯ? ಅಷ್ಟಕ್ಕೂ ಈ ಮೇಘರಾಜನ ಸಾಮ್ರಾಜ್ಯ ಹೇಗಿರುತ್ತದೆ? ಒಂದು ಕೌತುಕ ನೋಟ ಇಲ್ಲಿದೆ…

Advertisement

1. ನೋಡಲು ಹತ್ತಿ, ಆದರೆ, ಸಖತ್‌ ತೂಕ!
ಮೋಡಗಳು ಕೆಳನೋಟಕ್ಕೆ ನೋಡಲು ಹತ್ತಿಯಂತೆ ಕಂಡರೂ, ಅವು ತುಂಬಾ ಭಾರ ಇರುತ್ತವೆ. ಶುಭ್ರ ವಾತಾವರಣವಿರುವಾಗ ತೇಲುವ ಬಿಳಿಮೋಡಗಳು 45 ಸಾವಿರ ಟನ್‌ಗೂ ಅಧಿಕ ಭಾರವಿರುತ್ತವೆ. ಇನ್ನು ಮಳೆಮೋಡಗಳು ಇದಕ್ಕಿಂತ 10 ಪಟ್ಟು ತೂಕ ಇರುತ್ತವೆ. ಕೆಲವೊಂದು ದೊಡ್ಡ ಮೋಡಗಳ ಕೆಳಗೆ 2000 ಮೀಟರ್‌ ವಿಸ್ತಾರದ ವರೆಗೆ ಮಳೆಹನಿಗಳು ಶೇಖರಣೆಗೊಂಡಿರುತ್ತವೆ.

2. ಮೋಡದ ಸೃಷ್ಟಿ ಹೇಗೆ?
ಸಾಪೇಕ್ಷ ಸಾಂದ್ರತೆ ಹೆಚ್ಚಾಗಿರುವಾಗ ನೀರಾವಿಯನ್ನು ಹೊತ್ತು ಮೇಲೇರುವ ಗಾಳಿಯ ಗುಳ್ಳೆಗಳು, ಅಂತರಿಕ್ಷದ ಮೇಲಣ ಪದರವನ್ನು ತಲುಪುವಾಗ ವಿಕಾಸಗೊಳ್ಳುತ್ತಲೂ, ತಣಿಯುತ್ತಲೂ ಇರುತ್ತವೆ. ಪ್ರತಿ ಕಿ.ಮೀ. ಎತ್ತರಕ್ಕೆ ಏರಿದಂತೆಲ್ಲ ಅಂತರಿಕ್ಷದ ವಾಯುವಿನ ತಾಪಮಾನ 5-6 ಡಿಗ್ರೀ ಸೆಲಿÒಯಸ್‌/ಕಿ.ಮೀ. ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಹೀಗೆ ತಣಿಯುವ ಕ್ರಿಯೆಯಲ್ಲಿ ನೀರಾವಿ ಘನೀಭವಿಸುತ್ತದೆ. ಇವೇ ಮೋಡದ ಬೀಜಗಳ ಪದರಗಳಾಗಿ, ಮಂಜಿನ ಕಣಗಳಂತೆ ಸಂಗ್ರಹಗೊಳ್ಳುತ್ತವೆ. ಧೂಳು, ಲವಣಾಂಶ, ಇತರೆ ರಾಸಾಯನಿಕ ಕಣಗಳು ಇಲ್ಲಿರುತ್ತವೆ. ಮಳೆಮೋಡದ (ಕಪ್ಪು) ಹೊರತಾಗಿ ಬೇರಾವ ಮೋಡಗಳಿಗೂ ಸ್ವಂತ ಬಣ್ಣವಿಲ್ಲ. ಸೂರ್ಯನ ಕಿರಣಗಳ ಪ್ರತಿಫ‌ಲನದಿಂದಾಗಿ ಮೋಡಗಳಲ್ಲಿ ಹಲವು ಬಣ್ಣಗಳನ್ನು ಕಾಣಬಹುದು. 

3. ಭೂಮಿಯಲ್ಲಿ ಮಾತ್ರವೇ?
ಹಾಗೇನೂ ಇಲ್ಲ. ಅಂತರಿಕ್ಷದ ಎಲ್ಲ ಗ್ರಹಗಳೂ ಸಾಮಾನ್ಯವಾಗಿ ಮೋಡವನ್ನು ಹೊಂದಿರುತ್ತವೆ. ನಮ್ಮ ಚಂದಿರನಲ್ಲೂ ಮೋಡಗಳಿವೆ. ಗ್ರಹಕಾಯದ ವಾತಾವರಣದಲ್ಲಿ ನೀರಾವಿಯಿಂದಲೋ, ರಾಸಾಯನಿಕ ವಸ್ತುಗಳಿಂದಲೋ ಉಂಟಾದ ದ್ರವರೂಪದ ವಸ್ತುಗಳ ಘನೀಭವಿಸಿದ ಹರಳುಗಳು ನಿಗೂಢ ಸ್ವಭಾವವನ್ನು ಹೊಂದಿರುತ್ತವೆ. ಮೋಡಗಳ ಅಧ್ಯಯನಕ್ಕೆ “ನೆಫೋಲಜಿ’ ಎಂದು ಹೆಸರು.

4. 6-7 ಸಾವಿರ ಮೀಟರ್‌ ಎತ್ತರದಲ್ಲಿ…
ಎಲ್ಲ ಮೋಡಗಳು ಒಂದೇ ಎತ್ತರದಲ್ಲಿ ಇರುವುದಿಲ್ಲ. ನೀರಿನ ಹನಿಗಳನ್ನೊಳಗೊಂಡ ಮೋಡ ಭೂಮಿಯ ಮೇಲಿನಿಂದ 2- 3 ಸಾವಿರ ಮೀಟರ್‌ ಎತ್ತರದಲ್ಲಿದ್ದರೆ, ಅದಕ್ಕಿಂತಲೂ ದುಪ್ಪಟ್ಟು ಎತ್ತರದಲ್ಲಿ ಇನ್ನೊಂದು ಮೋಡ ರಚನೆಗೊಂಡಿರುತ್ತದೆ. ಭೌತ ವಿಜ್ಞಾನಿಗಳು ಇದಕ್ಕೆ “ಸಿರ್ರಸ್‌’ ಎಂದು ಕರೆಯುತ್ತಾರೆ. ಇವು ಮಂಜುಗಡ್ಡೆ ಹರಳುಗಳನ್ನೊಳಗೊಂಡ ಮೋಡಗಳು. ಕೆಳಗಿನ ಮಳೆಮೋಡದ ನೀರು ಆವಿಯಾಗಿ, ಇಲ್ಲವೇ ಗಾಳಿಯ ಒತ್ತಡದಿಂದಾಗಿ ಇವು ಮೇಲ್‌ ಸ್ತರಕ್ಕೆ ಹೋಗಿರುತ್ತವೆ. 

Advertisement

5. “ವಿರ್ಗಾ’ ಮಳೆ ಭೂಮಿಗೆ ಬೀಳುವುದಿಲ್ಲ!
ಮೋಡಗಳ ಸಾಂದ್ರತೆ ಹೆಚ್ಚಿ, ಅಲ್ಲಿನ ವಾತಾವರಣ ತಂಪಾದಾಗ, ನೀರಾವಿಯು ತಂಪಾಗಿ, ಮಳೆಹನಿಯಾಗಿ ಉದುರುತ್ತದೆ. ಹಾಗೆ ಉದುರಿದ ಹನಿಗಳೆಲ್ಲ ಭೂಮಿಯನ್ನು ತಲುಪುವುದಿಲ್ಲ. ಮೋಡ ಹಾಗೂ ಭೂಮಿಯ ನಡುವೆ ಶುಷ್ಕ ವಾತಾವರಣವಿದ್ದು, ಅಲ್ಲಿ ಹೆಚ್ಚಿನ ಪ್ರಮಾಣದ ಸಣ್ಣ ಹನಿಗಳು ಮತ್ತೆ ಆವಿಯಾಗಿ ಹೋಗುತ್ತಿರುತ್ತವೆ. ಹೀಗೆ, ಭೂಮಿಯನ್ನು ತಲುಪದೆ ವಾಪಸು ಹೋಗುವ ಮಳೆಯನ್ನು “ವಿರ್ಗಾ’ ಎಂದು ಕರೆಯುವರು. 

6. ಅನ್ಯಗ್ರಹಗಳ ಮೋಡ ಹೇಗಿರುತ್ತೆ?
ಶುಕ್ರ ಗ್ರಹದ ಮೋಡವು ದಪ್ಪವಾಗಿದ್ದು, ಸಲ#ರ್‌ ಡೈ ಆಕ್ಸೆ„ಡ್‌ ಅನ್ನು ಹೆಚ್ಚು ಹೊಂದಿರುತ್ತದೆ. ಈ ಮೋಡಗಳು 3 ಪದರದಲ್ಲಿ ರಚನೆಗೊಂಡಿದ್ದು, 45ರಿಂದ 65 ಕಿ.ಮೀ. ಎತ್ತರದಲ್ಲಿ ತೇಲುತ್ತಿರುತ್ತವೆ. 
ಮಂಗಳ ಗ್ರಹದ ಮೋಡದಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ನೀರಿನಾಂಶ ಪತ್ತೆಹಚ್ಚಿದ್ದಾರೆ. ಇಲ್ಲಿ 4 ಶ್ರೇಣಿಯ ಮೋಡಗಳಿವೆ.

ಗುರು ಮತ್ತು ಶನಿ ಗ್ರಹದಲ್ಲಿ ಅಮೋನಿಯಾ ರಾಸಾಯನಿಕಗಳು ಹೆಚ್ಚಾಗಿದ್ದು, ಇವುಗಳ ಹೊರಪದರ ಅಮೋನಿಯಮ್‌ ಹೈಡ್ರೋಸಲ್ಫೆ„ಡ್‌ನಿಂದ ಕೂಡಿದೆ. ಯೂರನೆಸ್‌, ನೆಫ‌ೂcéನ್‌ನಲ್ಲೂ ಮೋಡದ ರಚನೆ ಹೀಗೆಯೇ ಇದೆ.
ಶನಿಯ ಉಪಗ್ರಹ ಟೈಟಾನ್‌ನಲ್ಲಿ ಮಿಥೇನ್‌ ಪ್ರಮಾಣ ಅಧಿಕವಿದೆ.

– ಸೌರಭ

Advertisement

Udayavani is now on Telegram. Click here to join our channel and stay updated with the latest news.

Next