- ಹೆಚ್ಚಿನ ಇಂಧನ ದಕ್ಷತೆಯ ಹೈಬ್ರಿàಡ್ ವಾಹನಗಳ ಉಪಯೋಗಕ್ಕೆ ಪ್ರೋತ್ಸಾಹ ನೀಡುವುದು.
- ಡೀಸೆಲ್, ಪೆಟ್ರೋಲ್‌ಗೆ ಪರ್ಯಾಯವಾಗಿ ಇಥೆನಾಲ್, ಬಯೋಡೀಸೆಲ್ ಅಥವಾ ವಿದ್ಯುತ್ ಬಳಸುವ ಎಂಜಿನ್‌ಗಳ ಬಳಕೆ.
- ಸಂಚಾರಕ್ಕೆ ರೈಲು, ಬಸ್ಸಿನಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸುವುದು.
- ಪರಿಸರದಲ್ಲಿ ಹೆಚ್ಚು ಹೆಚ್ಚು ಗಿಡ – ಮರಗಳನ್ನು ನೆಟ್ಟು ಬೆಳೆಸುವುದು. ಅರಣ್ಯ ನಾಶ ತಪ್ಪಿಸುವುದು.
- ಅಂತರ್ಜಲ ಮರುಪೂರಣ, ಮಳೆಕೊಯ್ಲು, ಮನೆ ಹಾಗೂ ಕಟೇರಿಗಳಲ್ಲಿ ಸೌರಶಕ್ತಿ ಬಳಕೆ ಕಡ್ಡಾಯ ಗೊಳಿಸುವುದು.
- ಒಂದು ಮನೆಗೆ ಒಂದೇ ವಾಹನ ನಿಯಮವನ್ನು ಜಾರಿಗೊಳಿಸುವುದು.
- ವಿದೇಶಗಳಲ್ಲಿರುವಂತೆ ಬೈಸಿಕಲ್‌ಗಳ ಬಳಕೆಗೆ ಉತ್ತೇಜನ ನೀಡುವುದು.
- ತ್ಯಾಜ್ಯ ಸಂಗ್ರಹ, ವಿಲೇವಾರಿಗೆ ಅಚ್ಚುಕಟ್ಟಾದ ವ್ಯವಸ್ಥೆ. ತ್ಯಾಜ್ಯದಿಂದ ಇಂಧನ ಅಥವಾ ಗೊಬ್ಬರ ಉತ್ಪಾದನೆಗೆ ಕ್ರಮ.
Advertisement
ನಿತ್ಯವೂ ನಾವೇನು ಮಾಡ ಬಹುದು?ತರಕಾರಿ, ಕಿರಾಣಿ ಖರೀದಿಸಿದಾಗ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಕೇಳಿ ಪಡೆಯುವ ಬದಲು ಮನೆಯಿಂದಲೇ ಬಟ್ಟೆ ಚೀಲಗಳನ್ನು ಒಯ್ಯಬೇಕು.
ಹಸಿ ಮತ್ತು ಒಣಗಿದ ಕಸಗಳನ್ನು ವಿಂಗಡಿಸಿ ಅವುಗಳನ್ನು ಕಸ ಸಂಗ್ರಾಹಕರಿಗೆ ನೀಡಬೇಕು. ಮನೆಯ ಸಮೀಪವೇ ಕಸ ಸುಡುವುದು ಸಲ್ಲದು. ಇದರಿಂದ ಆರೋಗ್ಯ ಹಾಗೂ ಪರಿಸರ ಎರಡೂ ಕೆಡುತ್ತದೆ.
Related Articles
Advertisement
ಹಿತ, ಮಿತವಾಗಿ ನೀರನ್ನು ಬಳಸಿ. ಸಾಧ್ಯವಾದಲ್ಲಿ ಮರು ಬಳಕೆ ಮಾಡಿ. ಕಟ್ಟಿಗೆ ಉರಿಸಿ ಸ್ನಾನಕ್ಕಾಗಿ ನೀರನ್ನು ಬಿಸಿ ಮಡುವ ಪದ್ಧತಿ ಇನ್ನೂ ಇದೆ. ಇದರಿಂದ ವಾಯು ಮಾಲಿನ್ಯದ ಜತೆಗೆ ಮರಗಳ ನಾಶವೂ ಆಗುತ್ತಿದೆ. ಬೇಸಗೆಯಲ್ಲಿ ತಣ್ಣೀರು ಸ್ನಾನವೇ ಶ್ರೇಯಸ್ಕರ.
ಫ್ರಿಜ್‌ಗಳು ಬಿಡುಗಡೆಗೊಳಿಸುವ ಕ್ಲೋರೋಫ್ಲೋರೋ ಕಾರ್ಬನ್‌ಗಳು ಓಝೊàನ್ ಪದರದ ಮೇಲೆ ಪ್ರಭಾವ ಬೀರುತ್ತವೆ. ಫ್ರಿಜ್ ಹಾಗೂ ಎಸಿಗಳ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವುದು ಸೂಕ್ತ.
ಮನೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಹಾವು, ಚೇಳುಗಳು ಕಂಡುಬಂದಲ್ಲಿ ಅವುಗಳನ್ನು ಸಾಯಿಸಬೇಡಿ. ಅವುಗಳ ಪಾಡಿಗೆ ಅವನ್ನು ಬಿಟ್ಟುಬಿಡಿ.
ಅಪಾಯವಾಗುವ ಮುನ್ಸೂಚನೆ ಇದ್ದಲ್ಲಿ ತಜ್ಞರಿಂದ ಅವುಗಳನ್ನು ಹಿಡಿಸಿ, ಸುರಕ್ಷಿತ ಸ್ಥಳದಲ್ಲಿ ಬಿಡಲು ಹೇಳಿ.
ಬೇಸಗೆ ಸಮಯದಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಮನೆಯ ಹೊರ ಆವರಣದಲ್ಲಿ ಒಂದಷ್ಟು ನೀರು ಇಡಿ. ಹಕ್ಕಿಗಳಿಗಾಗಿ ಟೆರೇಸ್ ಮೇಲೆ ಅಥವಾ ಕಿಟಕಿ ಪಕ್ಕ ಒಂದು ಬಟ್ಟಲು ನೀರು, ಒಂದಿಷ್ಟು ಧಾನ್ಯಗಳನ್ನು ಇರಿಸಿ.