Advertisement

ಐತಿಹಾಸಿಕ ತೀರ್ಪಿನ ಮರುದಿನ ಅಯೋಧ್ಯೆ ಹೇಗಿದೆ ಗೊತ್ತಾ?

09:50 AM Nov 11, 2019 | keerthan |

ಅಯೋಧ್ಯೆ: ಶತಮಾನದ ವಿವಾದವೆಂದೇ ಹೆಸರಾಗಿದ್ದ ರಾಮ ಜನ್ಮಭೂಮಿ ವಿವಾದ ಕೊನೆಗೂ ಅಂತ್ಯ ಕಂಡಿದೆ. ಸುದೀರ್ಘ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಪೂರ್ಣ ಬಹುಮತದೊಂದಿಗೆ ವಿವಾದಿತ ಭೂಮಿ ‘ರಾಮಲಲ್ಲಾ’ಗೆ ಸೇರಿದ್ದು ಎಂದು ತೀರ್ಪು ನೀಡಿದೆ.

Advertisement

ಅಯೋಧ್ಯೆ ತೀರ್ಪು ಪ್ರಕಟವಾಗುವ ಕಾರಣ ದೇಶದೆಲ್ಲೆಡೆ ಬಹು ಕಟ್ಟೆಚ್ಚರ ವಹಿಸಲಾಗಿತ್ತು. ತೀರ್ಪು ಪ್ರಕಟವಾಗುತ್ತಿದ್ದಂತೆ ದೇಶದಲ್ಲಿ ಜನರು ಶಾಂತಿಯಿಂದ ವರ್ತಿಸಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ತೀರ್ಪಿನ ನಂತರ ಹೇಗಿದೆ ಅಯೋಧ್ಯೆ ಪರಿಸ್ಥಿತಿ

ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು ಹೊರಬೀಳುತ್ತಿದ್ದಂತೆ ಅಹಿತಕರ ಘಟನೆಗಳು ನಡೆಯದಂತೆ ಅಯೋಧ್ಯೆಯಲ್ಲಿ ಕಮಾಂಡೋ ಭದ್ರತೆ ಮಾಡಲಾಗಿತ್ತು. ಸಂಭ್ರಮಾಚರಣೆಗೆ ನಿಷೇಧವಿದ್ದರೂ ಸಣ್ಣ ಮಟ್ಟಿನ ಸಂಭ್ರಮಾಚರಣೆಗಳು ಅಯೋಧ್ಯೆಯಲ್ಲಿ ನಡೆದಿದೆ. ಆದರೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ರವಿವಾರ ಮುಂಜಾನೆಯು ಭಾರಿ ಸಂಖ್ಯೆಯ ಭಕ್ತರು ಸರಯೂ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಿರುವುದು ಕಂಡು ಬಂದಿದೆ.

Advertisement

ಇಡೀ ವಿಶ್ವದ ಗಮನ ಸೆಳೆದ ಪ್ರಕರಣದ ಕೇಂದ್ರ ಸ್ಥಳವಾದ ಅಯೋಧ್ಯೆಯಲ್ಲಿ ಶನಿವಾರ ಯಾವುದೇ ಶಾಂತಿ ಕದಡುವ ಪ್ರಯತ್ನ ನಡೆದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದೆ,

Advertisement

Udayavani is now on Telegram. Click here to join our channel and stay updated with the latest news.

Next