ನವದೆಹಲಿ: ಭಾರತೀಯರಿಗಾಗಿಯೇ ವಿಶೇಷವಾಗಿ ಪಾದರಕ್ಷೆಗಳ ಮಾದರಿ ಅಳತೆ ಪಟ್ಟಿಯನ್ನು ತಯಾರಿಸುವ ಯೋಜನೆಯ ಮೊದಲ ಹಂತದ ಕೆಲಸಗಳನ್ನು ಕೇಂದ್ರ ಸರ್ಕಾರ ಆರಂಭಿಸಿದೆ.
ಆತ್ಮನಿರ್ಭರ ಭಾರತ ಯೋಜನೆಯಡಿ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು 10.80 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಆರಂಭಿಸುವುದಾಗಿ ಕೆಲ ತಿಂಗಳ ಹಿಂದೆ ಘೋಷಿಸಿತ್ತು.
ಸದ್ಯಕ್ಕೆ ಚಪ್ಪಲಿ ಅಥವಾ ಬೂಟನ್ನು ಕೊಳ್ಳುವಾಗ ಗ್ರಾಹಕರು, ಅಮೆರಿಕದ ಅಥವಾ ಯುನೈಟೆಡ್ ಕಿಂಗ್‌ಡಮ್‌ನ ಪಾದರಕ್ಷೆ ಅಳತೆಯನ್ನು ಆಧರಿಸಿ ಲೆಕ್ಕಾಚಾರ ಮಾಡಿ ತಮ್ಮ ಪಾದರಕ್ಷೆಗಳನ್ನು ಕೊಳ್ಳಬೇಕಿದೆ.
ಇದನ್ನೂ ಓದಿ:ಮಣಿಪಾಲ: ಮಣ್ಣಪಳ್ಳಕ್ಕೆ ಸ್ನೇಹಿತೆಯೊಟ್ಟಿಗೆ ತಿರುಗಾಡಲು ಬಂದಿದ್ದ ಯುವಕನ ಮೇಲೆ ಹಲ್ಲೆ
ಕೇಂದ್ರದ ಈ ಯೋಜನೆ ಯಶಸ್ವಿಯಾದ ನಂತರ, ಭಾರತೀಯರಿಗೆ ಭಾರತೀಯರ ಪಾದರಚನೆಗಳಿಗೆ ಅನುಗುಣವಾಗಿ ರೂಪಿಸಲಾಗಿರುವ ಪಾದರಕ್ಷೆಯ ಅಳತೆಯ ಹೊಸ ಪಟ್ಟಿಯೊಂದು ಸಿದ್ಧವಾಗಲಿದ್ದು, ಅದರ ಆಧಾರದಲ್ಲಿ ಭಾರತೀಯರು ತಮ್ಮ ಪಾದರಕ್ಷೆ, ಬೂಟುಗಳನ್ನು ಖರೀದಿಸಲು ಅನುಕೂಲವಾಗುತ್ತದೆ.