ಮಣಿಪಾಲ: ಚೆನ್ನೈನ ಸಂಚಾರ ನಿಬಿಡ ರಸ್ತೆಯ ಮಧ್ಯೆ ಅಕ್ರಮವಾಗಿ ಕಟ್ಟಲಾಗಿದ್ದ ರಾಜಕೀಯ ನಾಯಕರೊಬ್ಬರ ಮನೆಯ ಸಮಾರಂಭದ ಫ್ಲೆಕ್ಸ್ ಬಿದ್ದು ಅಪಘಾತ ಸಂಭವಿಸಿ ಯುವತಿಯೋರ್ವಳು ಮೃತಪಟ್ಟ ಘಟನೆಯಿಂದಾಗಿ ಫ್ಲೆಕ್ಸ್, ಬ್ಯಾನರ್ ಗಳನ್ನು ನಿಷೇಧಿಸಬೇಕೆಂಬ ಕೂಗು ಮತ್ತೆ ಜೀವ ಪಡೆದಿದೆ. ʼಉದಯವಾಣಿʼ ಫೇಸ್ ಬುಕ್ ಖಾತೆಯಲ್ಲಿ ಶುಭಾಶಯ, ಅಭಿನಂದನೆ ಹೆಸರಿನಲ್ಲಿ ಬೃಹತ್ ಗಾತ್ರದ ಬ್ಯಾನರ್, ಫ್ಲೆಕ್ಸ್ ಗಳನ್ನು ಹಾಕಿ ಸಾರ್ವಜನಿಕರನ್ನು ಅಪಾಯಕ್ಕೆ ಈಡುಮಾಡುವುದು ಎಷ್ಟು ಸರಿ ? ಎಂಬ ಪ್ರಶ್ನೆಯನ್ನುಓದುಗರಿಗೆ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಓದುಗರ ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.
ಸುನಿ ಸುನಿ: ಜಾಹೀರಾತು, ಅಭಿನಂದನೆ, ಶುಭಾಶಯಗಳನ್ನು ಹೇಳಲೇ ಬೇಕೆನಿಸಿದರೆ ಪೇಪರ್, ಆಕಾಶವಾಣಿ, ದೂರದರ್ಶನಗಳಲ್ಲಿ ಹಾಕಲಿ. ಬೋರ್ಡ್, ಫ್ಲೆಕ್ಸ್ ಬೇಡವೇ ಬೇಡ.
ಪ್ರೇಮಲತ ಶೆಟ್ಟಿ; ತಮಿಳುನಾಡಿನಲ್ಲಿ ಬ್ಯಾನರ್ ನಿಂದಾಗಿ ಓರ್ವ ಹೆಣ್ಣುಮಗಳು ಸಾವನ್ನಪ್ಪಿದಳು. ಆಕೆ ಹೆಲ್ಮೆಟ್ ಧರಿಸಿರಲಿಲ್ಲ. ಹಾಗಾಗಿ ಅದು ಅವರ ತಪ್ಪು ಎಂದು ಒಬ್ಬ ರಾಜಕಾರಣಿ ಹೇಳಿಕೆ ನೀಡಿದ್ದಾರೆ. ಭ್ರಷ್ಟರ ಮಧ್ಯಪ್ರವೇಶದಿಂದ ರಸ್ತೆಗಳು ಕೂಡಾ ಕಳಪೆಯಾಗಿವೆ. ಕರ್ನಾಟಕದ ಉಡುಪಿಯ ಮುಖ್ಯರಸ್ತೆಯಲ್ಲಿ ಎರಡು ಗುಂಡಿಗಳು ಬಾಯ್ತೆರೆದಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ತುಂಬಾ ಅಪಾಯಕಾರಿ. ಆದರೆ ಸಂಬಂಧಿಸಿದ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ.
ಸಂತೋಷ್ ಹೆಚ್ ಡಿಸೋಜ: ಕಂಡ ಕಂಡಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿಯ ಬಗ್ಗೆ ಸೇರಿದಂತೆ ಇನ್ನಿತರ ವಿಚಾರಕ್ಕೆ ಅಭಿನಂದನೆ ಸಲ್ಲಿಸಿ ಬ್ಯಾನರ್ , ಫ್ಲೆಕ್ಸ್ ಹಾಕುವುದರಿಂದ ನಗರದ ಸೌಂದರ್ಯ ಧಕ್ಕೆ ಉಂಟಾಗುತ್ತದೆ
ಅಮಿತ್ ಜೆಎಸ್: ಒಬ್ಬರನ್ನು ಅಭಿನಂಧಿಸಲು ಮಾಡುವ ಬ್ಯಾನರ್ ಗೆ 5ರಿಂದ 10 ಸಾವಿರ ಖರ್ಚು ಮಾಡುವುದರ ಬದಲು ಅದೇ ಹಣವನ್ನು ಬಡವರಿಗಾಗಿ ಖರ್ಚು ಮಾಡಿ. ಬಡವರಿಗೆ ಆಹಾರ ನೀಡಿ ಅಥವಾ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಿ. ಅದರಿಂದ ನಿಮಗೆ ನೆಮ್ಮದಿಯಾದರೂ ಸಿಗಬಹುದು.
ರಮೇಶ್ ಬಿವಿ: ದೇಶಾದ್ಯಂತ ಈ ಫ್ಲೆಕ್ಸ್ ಫಲಕಗಳನ್ನು ನಿಷೇಧಿಸಬೇಕು.
ಸುಬ್ರಹ್ಮಣ್ಯ ಜೋಶಿ: ಬ್ಯಾನರ್ ಹಾಕಿದ ಏಜೆನ್ಸಿಯನ್ನು ಜೈಲಿಗೆ ಹಾಕಿ. ಬೇಜವಾಬ್ದಾರಿಯ ಜನಗಳು. ಒಂದು ಮುಗ್ಧ ಜೀವದ ಬೆಲೆ ಗೊತ್ತಿಲ್ಲದವರು.
ಸಂದೀಪ್ ಕಾಮತ್: ಪ್ರತೀ ಬ್ಯಾನರ್ ಗಳಿಗೆ ಇನ್ಶೂರೆನ್ಸ್ ಮಾಡಬೇಕು.