ವೆಂಟಿಲೇಟರ್‌ಗಳ ಸದ್ದು ಆಸ್ಪತ್ರೆಗೆ ಹೋದವರಿಗೆ ಮಾತ್ರ ಗೊತ್ತಿರುತ್ತಿತ್ತು. ಈಗ ಕೋವಿಡ್-19 ಕಾಟದಿಂದ ಅವುಗಳ ಉಪಯುಕ್ತತೆ ಎಷ್ಟು ಎಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ. ಎಲ್ಲ ರಾಷ್ಟ್ರಗಳೂ ಈಗ ವೆಂಟಿಲೇಟರ್‌ಗಳ ಖರೀದಿಗೆ ಮುಂದಾಗಿವೆ. ನಿನ್ನೆಯಷ್ಟೇ ಬ್ರಿಟನ್ ಸರಕಾರ 10 ಸಾವಿರ ವೆಂಟಿಲೇಟರ್ ಖರೀದಿಗೆ ಮುಂದಾಯಿತು. ಅಮೆರಿಕವೂ ಅದರ ಹಿಂದಿದೆ. ಹಾಗಾದರೆ ವೆಂಟಿಲೇಟರ್ ಯಾಕೆ ಮುಖ್ಯ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಒಂದು ಲೆಕ್ಕಾಚಾರದ ಪ್ರಕಾರ 40 ಸಾವಿರ ವೆಂಟಿಲೇಟರ್‌ಗಳು ಇವೆ. ಆದರೆ ಕೊರೊನಾ ಉಲ್ಬಣಗೊಂಡಿದ್ದೇ ಆದಲ್ಲಿ ಇದು ಏನಕ್ಕೂ ಸಾಲದು. ಲಕ್ಷಗಟ್ಟಲೆ ವೆಂಟಿಲೇಟರ್‌ಗಳು ಬೇಕಾಗುತ್ತವೆ. ಸದ್ಯ ಭಾರತದಲ್ಲಿ ಈ ಕಾರಣಕ್ಕೆ ವೆಂಟಿಲೇಟರ್‌ಗಳ ಪೈಪ್‌ಗಳನ್ನು ವಿಭಾಗಿಸಿ ಕೊಡುವ ಬಗ್ಗೆ ಪ್ರಯೋಗ ನಡೆದಿದೆ. ಯಶಸ್ವಿಯೂ ಆಗಿದೆ. ಅಮೆರಿದಕಲ್ಲಿ ಸದ್ಯ 2 ಲಕ್ಷ ವೆಂಟಿಲೇಟರ್‌ಗಳು ಇವೆ
ಮಣಿಪಾಲ: ಕೋವಿಡ್-19 ವೈರಾಣು ಶ್ವಾಸಕೋಶವನ್ನು ಆವರಿಸಿದಾಗ ತೀವ್ರವಾಗಿ ಸಮಸ್ಯೆಯಾಗುವುದು ಉಸಿರಾಟಕ್ಕೆ. ಜಗತ್ತಿನಾದ್ಯಂತ ಇಂತಹ ಸಮಸ್ಯೆ ಇದ್ದ ರೋಗಿಗಳನ್ನು ಉಳಿಸಲು ವೈದ್ಯರು ವೆಂಟಿಲೇಟರ್ ಇಡುತ್ತಾರೆ. ಅರ್ಥಾತ್ ಉಸಿರಾಟಕ್ಕೆ ಪೂರಕವಾಗುವಂತೆ ಆಮ್ಲಜನಕ/ಕೃತಕ ಉಸಿರಾಟದ ವ್ಯವಸ್ಥೆ. ಕೋವಿಡ್-19 ಪೀಡಿತರ ಸಂಖ್ಯೆ ಹೆಚ್ಚಿದಷ್ಟು ಮತ್ತು ತೀವ್ರತರವಾದ ಪ್ರಕರಣಗಳು ಇದ್ದಾಗ ವೆಂಟಿಲೇಟರ್ ಅಲಭ್ಯತೆ ಕಾಡುತ್ತದೆ. ಇದು ರೋಗಿಗಳನ್ನು ಉಳಿಸುವುದಕ್ಕೂ ಸಮಸ್ಯೆಯಾಗುತ್ತದೆ.ಆದ್ದರಿಂದ ತುರ್ತು ನಿಗಾಘಟಕದಲ್ಲಿರುವ ರೋಗಿಗಳಿಗೆ ವೆಂಟಿಲೇರ್ ನೆರವು ಅಗತ್ಯ. ಸಾಮಾನ್ಯವಾಗಿ ಕೊರೊನಾ ಪೀಡಿತರಲ್ಲಿ 6 ಮಂದಿಯಲ್ಲಿ ಒಬ್ಬರಿಗೆ ಉಸಿರಾಟದ ಸಮಸ್ಯೆ ಹೆಚ್ಚು ಕಾಡುತ್ತದೆ ಮತ್ತು ವೆಂಟಿಲೇಟರ್ ಬೇಕಾಗುತ್ತದೆ ಎಂದು ಅಧ್ಯಯನವೊಂದು ಹೇಳುತ್ತದೆ.
ವೆಂಟಿಲೇಟರ್ ಹೇಗೆ ಕೆಲಸ ಮಾಡುತ್ತದೆ?
ಕೋವಿಡ್-19 ರೋಗ ತೀವ್ರವಾದ ಸಂದರ್ಭ ಅದು ಶ್ವಾಸಕೋಶದ ಅಂಗಾಶಯಗಳನ್ನು ಹಾನಿ ಮಾಡುತ್ತದೆ. ಇದರಿಂದಾಗಿ ರಕ್ತಕ್ಕೆ ಆಮ್ಲಜನಕ ನೀಡುವುದು ಸಾಧ್ಯವಾಗುವುದಿಲ್ಲ. ನ್ಯುಮೋನಿಯಾ ಕೂಡ ಶುರುವಾಗಬಹುದು. ಅಲ್ಲದೇ ಕೆಲವೊಂದು ತೀವ್ರ ರೋಗಬಾಧೆಯ ಸಂದರ್ಭ ಇಡೀ ಶ್ವಾಸಕೋಶ ವ್ಯವಸ್ಥೆಯೇ ವಿಫಲವಾಗಬಹುದು. ಅಲ್ಲದೆ ಇದು ಇತರ ಅಂಗಾಂಗಳು ವಿಫಲವಾಗಲೂ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಇರುವುದೇ ಕೃತಕ ಉಸಿರಾಟ ವ್ಯವಸ್ಥೆ. ಇದು ಒಂದು ತಾಂತ್ರಿಕ ವ್ಯವಸ್ಥೆಯಾಗಿದ್ದು, ರೋಗಿ ಗಂಟಲಿನ ಮೂಲಕ ನಳಿಕೆಯೊಂದನ್ನು ಹಾಕಿ ಆಮ್ಲಜನಕವನ್ನು ನೇರವಾಗಿ ಶ್ವಾಸಕೋಶಕ್ಕೆ ನೀಡಲಾಗುತ್ತದೆ.
ವೆಂಟಿಲೇಟರ್ ರೋಗಿಯ ದೇಹದ ಸಾಮಾನ್ಯ ಉಷ್ಣತೆಗೆ ಪೂರಕವಾಗಿ ಉಷ್ಣ ಮತ್ತು ತೇವಾಂಶವನ್ನು ಆಮ್ಲಜನಕದೊಂದಿಗೆ ನೀಡುತ್ತದೆ. ತೀವ್ರತರವಾದ ಉಸಿರಾಟದ ಸಮಸ್ಯೆ ಇಲ್ಲದ ರೋಗಿಗಳಿಗೆ ಶ್ವಾಸಕೋಶಕ್ಕೆ ನಳಿಕೆ ಯನ್ನು ಹಾಕದೆ ಮುಖಕ್ಕೆ ಮಾಸ್ಕ್ ರೀತಿಯ ಸಾಧನ ಅಥವಾ ಮೂಗಿಗೆ ಪುಟ್ಟ ನಳಿಕೆ ಅಳವಡಿಸಿ ಆಮ್ಲಜನಕ ನೀಡಲಾಗುತ್ತದೆ. ಇದರೊಂದಿಗೆ ಆಮ್ಲಜನಕವನ್ನು ನಿಯಂತ್ರಿತ ರೀತಿಯಲ್ಲಿ ನೀಡಲು ಎಲೆಕ್ಟ್ರಾನಿಕ್ ಸಾಧನವೊಂದು ಇದ್ದು, ಇದು ವಾಲ್Ìಗಳ ಮೂಲಕ ಆಮ್ಲಜನಕವನ್ನು ರೋಗಿಗೆ ನೀಡುತ್ತದೆ. ಆಮ್ಲಜನಕ ಸಿಲಿಂಡರ್ ಅನ್ನು ಈ ಎಲೆಕ್ಟ್ರಾನಿಕ್ ಸಾಧನಕ್ಕೆ ಸಂಪರ್ಕಿಸಿ, ವ್ಯಕ್ತಿಯ ಉಸಿರಾಟದ ಪ್ರಮಾಣಕ್ಕೆ ಅನುಗುಣವಾಗಿ ವೆಂಟಿಲೇಟರ್ ಕೆಲಸ ನಿರ್ವಹಿಸುವಂತೆ ಮಾಡಲಾಗುತ್ತದೆ. ಇದರೊಂದಿಗೆ ರೋಗಿಗಳಿಗೆ ಇತರ ವೈದ್ಯಕೀಯ ನೆರವು ಸಾಮಾನ್ಯವಾಗಿದ್ದು, ಸಹಜ ಉಸಿರಾಟ ಸಾಧ್ಯವಾಗುವಲ್ಲಿವರೆಗೆ ವೆಂಟಿಲೇಟರ್ ಅನ್ನು ಇಡುತ್ತಾರೆ.
ವೆಂಟಿಲೇಟರ್‌ಗೆ ಎಷ್ಟು ದರ
ಉತ್ತಮ ಕಂಪೆನಿಯ ವೆಂಟಿಲೇಟರ್‌ಗೆ ಸುಮಾರು 4 ಲಕ್ಷ ರೂ. ಮೇಲ್ಪಟ್ಟು ಬೆಲೆ ಇದೆ. ಪ್ರತಿ ಬಾರಿ ರೋಗಿಗೆ ಅಳವಡಿಸುವಾಗ ಇದರ ಪೈಪ್‌ಗ್ಳನ್ನು ಬದಲಾಯಿಸಬೇಕು. ವೆಂಟಿಲೇಟರ್‌ಗೆ ಸಮರ್ಪಕ ಆಮ್ಲಜನಕ ಸಿಲಿಂಡರ್ ಪೂರೈಕೆಯೂ ಆಗುತ್ತಿರಬೇಕು.
ಭಾರತದಲ್ಲಿ ಎಷ್ಟಿದೆ?
ಭಾರತದಲ್ಲಿ ಒಂದು ಲೆಕ್ಕಾಚಾರದ ಪ್ರಕಾರ 40 ಸಾವಿರ ವೆಂಟಿಲೇಟರ್‌ಗಳು ಇವೆ. ಆದರೆ ಕೊರೊನಾ ಉಲ್ಬಣಗೊಂಡಿದ್ದೇ ಆದಲ್ಲಿ ಇದು ಏನಕ್ಕೂ ಸಾಲದು. ಲಕ್ಷಗಟ್ಟಲೆ ವೆಂಟಿಲೇಟರ್‌ಗಳು ಬೇಕಾಗುತ್ತವೆ. ಸದ್ಯ ಭಾರತದಲ್ಲಿ ಈ ಕಾರಣಕ್ಕೆ ವೆಂಟಿಲೇಟರ್‌ಗಳ ಪೈಪ್‌ಗ್ಳನ್ನು ವಿಭಾಗಿಸಿ ಕೊಡುವ ಬಗ್ಗೆ ಪ್ರಯೋಗ ನಡೆದಿದೆ. ಯಶಸ್ವಿಯೂಆಗಿದೆ. ಇದು ಒಂದೇ ವೆಂಟಿಲೇಟರ್‌ನಲ್ಲಿ ಎರಡು ರೋಗಿಗೆ ಅವಕಾಶ ಕೊಡಬಲ್ಲದು.
ಅಮೆರಿಕಕ್ಕೆ ಬೇಕು 9 ಲಕ್ಷ ವೆಂಟಿಲೇಟರ್!
ಅಮೆರಿದಕಲ್ಲಿ ಸದ್ಯ 2 ಲಕ್ಷ ವೆಂಟಿಲೇಟರ್‌ಗಳು ಇವೆ. ಇಲ್ಲಿಗೆ ಸುಮಾರು 9-10 ಲಕ್ಷ ವೆಂಟಿಲೇಟರ್‌ಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
– ಈಶ್ವರಚಂದ್ರ